ಆರೋಗ್ಯಕ್ಕೆ ಹಿತಕರವಾದ, ರುಚಿ ರುಚಿಯಾದ ಚಪಾತಿ ಕೇಸಡಿ ತಯಾರಿಸುವ ವಿಧಾನ..

0
674

ಗೋಧಿಯೊಂದು ಉತ್ತಮ ಆಹಾರವಾಗಿದ್ದು ನಾರಿನಂಶ ಇರುವುದರಿಂದ ಪ್ರತಿಯೊಬ್ಬರಿಗೂ ತಿನ್ನಲೇ ಬೇಕಾದ ಆಹಾರವಾಗಿದೆ ಇದರಿಂದ ಬೇಕರಿ ತಿನುಸುಗಳನ್ನೂ ಹೆಚ್ಚಾಗಿ ಮಾಡಲಾಗುತ್ತೆ ಮತ್ತು ಹಾಗೆಯೇ ಮನೆಯಲ್ಲಿ ಮಾಡುವ ಆಹಾರದಲ್ಲಿ ಪ್ರತಿಯೊಬ್ಬರೂ ಯಾವುದಾದರು ಒಂದು ತರಹದ ಗೋಧಿ ಖಾದ್ಯವನ್ನು ಮಾಡಿ ತಿನ್ನುತ್ತಾರೆ ಮತ್ತು ವಿಶೇಷವಾಗಿ ಬಾಣತಿಯರಿಗೆ ಮತ್ತು ಶಕ್ತಿಹಿನರಿಗೆ ಗೋಧಿ ಅಡುಗೆ ತಿನ್ನಲು ಕೊಡುತ್ತಾರೆ. ಅಷ್ಟೇ ಅಲ್ಲ ಹೆಚ್ಚು ಹೆಚ್ಚು ರುಚಿಮಯವಾದ ಚಿಕನ್ ರೋಲ್ ವೆಜ್ ರೋಲ್ ಹೀಗೆ ಮಕ್ಕಳು ಇಷ್ಟ ಪಡುವ ಆಹಾರಗಳನ್ನು ಕೂಡ ಇಷ್ಟಪಡುತ್ತಾರೆ. ಇಷ್ಟೆಲ್ಲ ರುಚಿಮಯವಾದ ಗೋಧಿಹಿಟ್ಟಿನಿಂದ ಕುರುಕಲು ತಿಂಡಿಗಳನ್ನು ಕೂಡ ತಯಾರಿಸಬಹುದು ಅಂತ ಆಹಾರಗಳಲ್ಲಿ ಪೇಮಸ್ ಆಹಾರವಾದ ಚಪಾತಿ ಕೇಸಡಿಯನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.


Also read: ವಿಶ್ವದ ನಾಲ್ಕನೇ ಅತಿದೊಡ್ಡ ಆಹಾರ ಬೆಳೆಯಾಗಿರುವ ಸ್ಪೆಷಲ್ ಬೇಬಿ ಆಲೂ ಫ್ರೈ ಮಾಡುವ ವಿಧಾನ..!!

ಬೇಕಾಗುವ ಪದಾರ್ಥಗಳು:

  • ಚಪಾತಿ ಹಿಟ್ಟು
  • ಒಂದು ಈರುಳ್ಳಿ
  • 1 ಕಪ್ ಪಾಲಾಕ್ ಸೊಪ್ಪು
  • 1 ಕಪ್ ತುರಿದ ಚೀಸ್
  • 2-3 ಹಸಿ ಮೆಣಸಿನಕಾಯಿ
  • ಬೇಕಾಗುವಷ್ಟು ಎಣ್ಣೆ
  • ರುಚಿಗೆ ತಕ್ಕ ಉಪ್ಪು

Also read: ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಮತ್ತು ಪೌಷ್ಟಿಕಾಂಶಭರಿತ ಆಹಾರವಾದ ರಾಜಗಿರಿ ಅರಳಿನ ಲಾಡು ಮಾಡುವ ವಿಧಾನ..!!

ತಯಾರಿಸುವ ವಿಧಾನ:

 • ಈರುಳ್ಳಿಯನ್ನು ಉದ್ದುದ್ದವಾಗಿ ಕತ್ತರಿಸಬೇಕು.
 • ಪಾಲಾಕ್ ಸೊಪ್ಪನ್ನು ತೊಳೆದು ಚಿಕ್ಕಾದಾಗಿ ಕತ್ತರಿಸಬೇಕು.
 • ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಬೇಕು.
 • ಈರುಳ್ಳಿ ಪಾಲಾಕ್ ಸಬ್ಜಿ ತಯಾರಿಸುವುದು:
 • ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು.
 • ಎಣ್ಣೆ ಬಿಸಿಯಾದಾಗ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
 • ನಂತರ ಹಸಿಮೆಣಸಿನ ಕಾಯಿ ಹಾಕಿ, ಪಾಲಾಕ್ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಬೇಕು.
 • ಬೆಂದ ಮೇಲೆ ಸ್ವಲ್ಪ ದೊಡ್ಡ ಬಟ್ಟಲಲ್ಲಿ ಹಾಕಿಡಬೇಕು.

ಚಪಾತಿ ಕೇಸಡಿಯ ತಯಾರಿಸುವುದು:


Also read: ಖಾರ ಪ್ರಿಯರಿಗೆ ಇಷ್ಟವಾಗುವ ಆಂಧ್ರ ಶೈಲಿಯ ಟೊಮೆಟೊ ಪಪ್ಪು, ತಯಾರಿಸುವ ವಿಧಾನ..!!

 • ಚಪಾತಿಯನ್ನು ಮಾಮೂಲಿ ತಟ್ಟುವ ರೀತಿ ತಟ್ಟಿ ತವಾದಲ್ಲಿ ಹಾಕಿ ಚಪಾತಿಯ ಎರಡೂ ಬದಿಯನ್ನು ಬೇಯಿಸಬೇಕು.
 • ನಂತರ ಸ್ವಲ್ಪ ಪಾಲಾಕ್ ಮತ್ತು ಈ ಈರುಳ್ಳಿಯ ಸಬ್ಜಿ ತೆಗೆದುಕೊಂಡು ಅದನ್ನು ಚಪಾತಿಯ ಒಂದು ಬದಿಯಲ್ಲಿ ಹಾಕಿ.
 • ಸ್ವಲ್ಪ ತುರಿದ ಚೀಸ್ ಹಾಕಿ ಚಪಾತಿಯನ್ನು ಮಡಚಬೇಕು. ಹೀಗೆ ಮಡಚಿದ ಚಪಾತಿಯನ್ನು 10 ರಿಂದ 15 ಸೆಕೆಂಡ್ ಬೇಯಿಸಬೇಕು.
 • ಚೀಸ್ ಕರಗಿದ ನಂತರ ತೆಗೆದು ಚಪಾತಿಯ ತುದಿಗಳನ್ನು ಕತ್ತರಿಸಬೇಕು.
 • ಈಗ ತಯಾರಾದ ಚಪಾತಿಕೇಸಡಿಯವನ್ನು ಬಿಸಿಯಾಗಿರುವವಾಗಲೇ ಸಾಸ್ ಜೊತೆ ತಿಂದುನೋಡಿ ತುಂಬಾ ರುಚಿಕರವಾಗಿರುತ್ತದೆ.
 • ನಿಮಗೆ ದಿನನಿತ್ಯದ ಅಡುಗೆ ತಿಂದು ಬೇಜಾರ್ ಆದಾಗೊಮ್ಮೆ ಈ ಚಪಾತಿ ಕೇಸಡಿಯ ಮಾಡಿಕೊಂಡು ಸವಿಯರಿ.