ಮದುವೆಯಾಗಿ 7 ವರ್ಷದ ನಂತರ ಪ್ರಿಯಕರನ ಜೊತೆ ಹೆಂಡತಿಗೆ ಮದುವೆ ಮಾಡಿದ ಪತಿ; ಈ ತ್ಯಾಗಕ್ಕೆ ಭಾರಿ ಮೆಚ್ಚುಗೆ.!

0
306

ಮದುವೆ ಆದ ಮೇಲೆ ಗಂಡ ಹೆಂಡತಿಯರು ಹಳೆಯ ವಿಚಾರವನ್ನು ಮರೆತು ಹೊಸ ಜೀವನ ಶುರು ಮಾಡುವುದು ಸುಖ ಸಂಸಾರಕ್ಕೆ ಕಾರಣವಾಗುತ್ತೆ, ಒಂದು ವೇಳೆ ಇಬ್ಬರಲ್ಲಿ ಯಾವುದೇ ವೈಮನಸ್ಸು ಹುಟ್ಟಿದರು ಡೈವರ್ಸ್-ವರೆಗೆ ಹೋಗಿ ಕುಟುಂಬ ಮುರಿದು ಹೋಗುತ್ತೆ, ಈ ವೇಳೆ ಹೆಂಡತಿಯ ಬೇರೆ ಯುವಕನ ಜೊತೆಯಲ್ಲಿ ಇರುವುದು ತಿಳಿದರೆ ಪತಿ ಏನು ಮಾಡಬಹುದು ಎನ್ನುವುದು ಕೆಲವು ಘಟನೆ ನೋಡಿದರೆ ತಿಳಿಯುತ್ತೆ, ಆದರೆ ಇಲ್ಲೊಂದು ಘಟನೆ ನಡೆದಿದ್ದು, ಮದುವೆಯಾಗಿ 7 ವರ್ಷದ ನಂತರ ಪತ್ನಿಗೆ ಹಳೆಯ ಪ್ರಿಯಕರ ಜೊತೆಗೆ ಮದುವೆ ಮಾಡಿದ ಘಟನೆ ಭಾರಿ ವೈರಲ್ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ.

ಹೌದು ಮದುವೆಯಾಗಿ 7 ವರ್ಷವಾದರೂ ಪ್ರಿಯಕರನನ್ನು ಮರೆಯದ ತನ್ನ ಪತ್ನಿಗೆ ಟೆಕ್ಕಿ ಪತಿಯೊಬ್ಬ ಮತ್ತೊಂದು ವಿವಾಹ ಮಾಡಿಸಿದ ಅಪರೂಪದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದ್ದು, ಮುಕೇಶ್ ಹಾಗೂ ಅಲ್ಕಾ ಸಿಟಿ ಆಫ್ ಲೇಕ್‍ನ ಕೋಲಾರ ಕ್ಷೇತ್ರದ ನಿವಾಸಿಯಾಗಿದ್ದು, 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅಲ್ಕಾ ಫ್ಯಾಶನ್ ಡಿಸೈನರ್ ಆಗಿದ್ದು, ಮುಕೇಶ್ ಸಾಫ್ಟವೇರ್ ಎಂಜಿನಿಯರ್ ಆಗಿದ್ದಾರೆ. ಈ ದಂಪತಿಗೆ 2 ಮಕ್ಕಳು ಕೂಡ ಇದ್ದಾರೆ. ಮದುವೆಯಾದ ಬಳಿಕ ಇಬ್ಬರು ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಈ ನಡುವೆ ಅಲ್ಕಾಳ ಹಳೆ ಪ್ರಿಯಕರ ಆಕೆಯ ಜೀವನದಲ್ಲಿ ಮತ್ತೆ ಬಂದಿದ್ದಾನೆ.

ಮತ್ತೆ ಪ್ರಿಯಕರ ಎಂಟ್ರಿ ಕೊಟ್ಟ ನಂತರ ಸಂಸಾರದಲ್ಲಿ ಹೋಗೆ ಏಳಲು ಶುರುವಾಗಿದೆ. ಅಷ್ಟೇ ಅಲ್ಲದೆ ಅಲ್ಕಾ ತನ್ನ ಪ್ರಿಯಕರನಿಗಾಗಿ ಪತಿಯ ಮನೆ ಬಿಟ್ಟು ಹೋಗಲು ಮುಂದಾಗಿದ್ದಳು. ಕುಟುಂಬ ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿತ್ತು. ಮದುವೆಗೂ ಮೊದಲು ಅಲ್ಕಾ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಮದುವೆ ಆದ ಬಳಿಕವೂ ಪ್ರಿಯಕರನ ಜೊತೆ ಸಂಬಂಧದಲ್ಲಿದ್ದಳು. ಪ್ರಿಯಕರ ಬೇರೆ ಜಾತಿಯವನಾಗಿದ್ದ ಕಾರಣ ಇವರಿಬ್ಬರ ಮದುವೆಗೆ ಅಲ್ಕಾ ತಂದೆ ವಿರೋಧಿಸಿದ್ದರು. ಅಲ್ಲದೆ ಮಗಳ ಇಚ್ಛೆಯ ವಿರುದ್ಧವಾಗಿ ಬೇರೆ ವ್ಯಕ್ತಿಯ ಜೊತೆ ಮದುವೆ ಮಾಡಿಸಿದ್ದರು. ಅಲ್ಕಾ ಬೇರೆ ವ್ಯಕ್ತಿಯ ಜೊತೆ ಮದುವೆ ಆದ ವಿಷಯ ತಿಳಿದು ಪ್ರಿಯಕರ ಈವರೆಗೂ ಮದುವೆ ಆಗಲೇ ಇಲ್ಲ. ಇದನ್ನು ಕೇಳಿ ಮಹಿಳೆಗೆ ತನ್ನ ಪ್ರೀತಿ ಬಿಟ್ಟು ಬದುಕಲು ಸಾಧ್ಯವಾಗದಾಯಿತು.

ಪತಿ-ಪತ್ನಿ ನಡುವೆ ಅಂತರ ಕಡಿಮೆ ಮಾಡಲು ಕೌನ್ಸ್ ಲಿಂಗ್ ಮಾಡಿಸಲಾಯಿತು. ಆದರೆ ಇಬ್ಬರ ಸಂಬಂಧ ಸರಿ ಹೋಗಲಿಲ್ಲ. ಮುಕೇಶ್ ಕೌನ್ಸಿಲರ್ ಬಳಿ ನಾನು ಹಲವು ಪ್ರಯತ್ನ ಮಾಡಿದರೂ ಅಲ್ಕಾ ನನ್ನ ಜೊತೆ ಖುಷಿಯಾಗಿಲ್ಲ. ಆಕೆ ತನ್ನ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದು, ಆತನನ್ನು ಮರೆಯಲು ಆಕೆಗೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅಲ್ಕಾ ಕೂಡ ನನಗೆ ನನ್ನ ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ನನ್ನ ಪ್ರಿಯಕರನ ಜೊತೆ ವಾಸಿಸಲು ಇಷ್ಟಪಡುತ್ತಿದ್ದೇನೆ. ಮುಕೇಶ್‍ಗೆ ಮಕ್ಕಳನ್ನು ನೋಡಿಕೊಳ್ಳಲು ಆಗಲಿಲ್ಲ ಎಂದರೆ ನಾನೇ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.
ಈ ವಿಚಾರವಾಗಿ ನ್ಯಾಯಾಲಯದಲ್ಲೇ ಮುಕೇಶ್, ನಾನು ನನ್ನ ಪತ್ನಿಯ ಮದುವೆಯನ್ನು ಆಕೆಯ ಪ್ರಿಯಕರನ ಜೊತೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಅಲ್ಕಾಳಿಗೆ ವಿಚ್ಛೇದನ ಅರ್ಜಿ ಕೂಡ ನೀಡಿದ್ದಾರೆ. ಮುಕೇಶ್ ನಿರ್ಧಾರ ಕೇಳಿದ ಕೌನ್ಸಿಲರ್ ಶೈಲ್ ಅವ್ಯಸ್ತಿ ಆಶ್ಚರ್ಯಪಟ್ಟರು. ನಾನು ಮೊದಲ ಬಾರಿಗೆ ಈ ರೀತಿಯ ಪ್ರಕರಣವನ್ನು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಮುಕೇಶ್ ಅವರ ಈ ನಿರ್ಧಾರಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತದ್ದಾರೆ. ಆದರೆ ಏಳು ವರ್ಷದಲ್ಲಿ ಗಂಡನ ಜೊತೆಗೆ ಇದ್ದ ನೆನಪುಗಳನ್ನು ಬಿಟ್ಟು ಪ್ರಿಯಕರನ ಜೊತೆಗೆ ಹೊಗುತ್ತಿರುವ ಮಹಿಳೆಯ ನಿರ್ಧಾರ ಸರಿಯಲ್ಲ ಎಂದು ಹಲವು ಅಭಿಪ್ರಾಯ ತಿಳಿಸಿದ್ದಾರೆ.