ಕಿಚ್ಚ ಸುದೀಪ್-ರವರ ಮೇಲಿನ ಅಭಿಮಾನದಿಂದಾಗಿ ಈ ತಮಿಳಿನವ ಏನು ಮಾಡುತ್ತಿದ್ದಾನೆ ಅಂತ ಗೊತ್ತಾದ್ರೆ, ನಿಮಗೆ ಅವನ ಮೇಲೆ ಗೌರವ ಬರುತ್ತೆ!!

0
685

ಸ್ಯಾಂಡಲ್ವುಡ್ ಅಷ್ಟೇ ಅಲ್ಲದೇ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿ ಹೆಸರು ಮಾಡಿ, ಈಗ ಹಾಲಿವುಡ್ ಗೂ ಪಾದಾರ್ಪಣೆ ಮಾಡಿರುವ ಕಿಚ್ಚ ಸುದೀಪ್ ರವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚೆಂದೇ ಹೇಳಬಹುದು..

ಕೆಲವು ಸ್ಟಾರ್ ನಟರು ಅಭಿಮಾನಿಗಳಿಗೆ ಯಾವ ಮಟ್ಟದ ಪ್ರಭಾವ ಬೀರುತ್ತಾರೆ ಎಂದರೆ ಅವರ ಜೀವನ ಶೈಲಿಗಳನ್ನೇ ಬದಲಿಸಿರುವುದೂ ಉಂಟು..

ಇದೀಗ ಕಿಚ್ಚ ಸುದೀಪ್ ರವರ ಅಭಿಮಾನಿಯೊಬ್ಬ ಸುದೀಪ್ ರವರಿಗೋಸ್ಕರ ಕನ್ನಡ ಕಲಿಯುತ್ತಿದ್ದಾರೆ..

ಹೌದು ಸ್ವತಃ ಅವರೇ ತಮ್ಮ ಟ್ವಿಟರ್ ನಲ್ಲಿ ”ಸರ್ ನಾನು ತಮಿಳುನಾಡಿನವನು.. ನನಗೆ ನೀವಂದ್ರೆ ತುಂಬಾ ಇಷ್ಟ.. ನಾನು ಕನ್ನಡ ಕಲಿಯುತ್ತಿದ್ದೇನೆ.. ನಾನು ನಿಮ್ಮ ಡಬ್ಬಿಂಗ್ ಸಿನಿಮಾಗಳಾದ ಈಗ.. ಬಾಹುಬಲಿ.. ಪುಲಿ.. ರಕ್ತಚರಿತ್ರ.. ನೋಡಿದ್ದೇನೆ. ನಾನು ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ಕಿಲ್ಲಿಂಗ್ ಲುಕ್‌ಗೆ ಮನಸೋತಿದ್ದೇನೆ.. ನಾನು ನಿಮ್ಮ ಉಳಿದ ಚಿತ್ರಗಳನ್ನ ನೋಡಲು ನಿರ್ಧರಿಸಿದ್ದು.. ಅದಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ” ಎಂದು ಹಾಕಿಕೊಂಡಿದ್ದಾರೆ..

ಟ್ವಿಟರ್ ನಲ್ಲಿ ಅಭಿಮಾನಿಗಳ ಟ್ವೀಟ್ ಗಳಿಗೆ ಬಿಡುವಿನ ಸಮಯದಲ್ಲಿ ಆಗಾಗ ಸ್ಪಂದಿಸುವ ಕಿಚ್ಚ ಸುದೀಪ್ ರವರು ಈ ವ್ಯಕ್ತಿಯ ಟ್ವೀಟ್ ಗೂ ಕೂಡ ಪ್ರತಿಕ್ರಿಯಿಸಿ.. ನೀವು ಕನ್ನಡ ಕಲಿಯುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದಿದ್ದಾರೆ..

ಅಭಿಮಾನ ಎಂಬುದು ಎಂದಿಗೂ ಈ ರೀತಿಯಾದ ಒಳ್ಳೆಯ ಕೆಲಸಗಳಿಗೆ ದಾರಿಯಾಗಬೇಕು..