ಹೊಸ ತರಹದ ರುಚಿಯಾದ ಬಾಳೆಹಣ್ಣಿನ ಪುಡ್ಡಿಂಗ್ ಮಾಡುವ ವಿಧಾನ..!!

0
432

ಬಾಳೆಹಣ್ಣಿನ ಉಗಮಸ್ಥಾನ ಭಾರತ, ಹಾಗೆಯೇ ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣನ್ನು ಪರಿಚಯಿಸಿದ. ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು. ಇಷ್ಟೆಲ್ಲಾ ಪ್ರಸಿದ್ಧಿ ಪಡೆದ ಬಾಳೆಹಣ್ಣಿನಿಂದ ಹೊಸ ರೀತಿಯಲ್ಲಿ ಬಾಳೆಹಣ್ಣಿನ ಪುಡ್ಡಿಂಗ್ ಮಾಡುವ ವಿಧಾನ ನಿಮಗಾಗಿ ಇಲ್ಲಿದೆ ನೋಡಿ.


Also read: ಚಿಕನ್ ಪ್ರಿಯರಿಗೆ ಇಷ್ಟವಾಗುವ ಮೊಸರು ಚಿಕನ್ ಮಸಾಲ ಮಾಡುವ ವಿಧಾನ..!!

ಬೇಕಾಗುವ ಪದಾರ್ಥಗಳು:

 • ವೆನಿಲ್ಲಾ ರಸ 2 ಚಮಚ
 • ಚಿಕ್ಕದಾಗಿ ಕತ್ತರಿಸಿದ ಬ್ರೆಡ್ ಚೂರುಗಳು
 • ನಾಲ್ಕು ಬಾಳೆಹಣ್ಣು
 • ನಾಲ್ಕು ಕಪ್ ಹಾಲು
 • ಮೂರು ಮೊಟ್ಟೆ
 • ಒಂದು ಕಪ್ ಸಕ್ಕರೆ
 • ಒಂದು ಕಪ್ ಒಣದ್ರಾಕ್ಷಿ
 • ಒಂದು ಜಾಯಿಕಾಯಿ
 • ಒಂದು ಚಮಚ ಚಕ್ಕೆ

Also read: ರುಚಿಕರವಾದ ಬಾಳೆಹಣ್ಣಿನ ಕೋಫ್ತಾ ತಯಾರಿಸುವ ವಿಧಾನ..!!

ತಯಾರಿಸುವ ವಿಧಾನ:

 • ಚಿಕ್ಕದಾಗಿ ಕತ್ತರಿಸಿದ ಬ್ರೆಡ್ ಚೂರುಗಳನ್ನು ದೊಡ್ಡ ಬಟ್ಟಲಿನಲ್ಲಿ ಹಾಲು ಹಾಕಿ ಒಂದು ಗಂಟೆ ಇಡಬೇಕು.
 • ಮೈಕ್ರೋವೇವ್ ಅನ್ನು ಮುಂಚಿತವಾಗಿ 325 ಡಿಗ್ರಿಗೆ ಬಿಸಿಮಾಡಬೇಕು.
 • ಈಗ ಬೇಯಿಸುವ ಮಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಸವರಬೇಕು.
 • ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆ, ಸಕ್ಕರೆ, ವೆನಿಲ್ಲಾ ರಸ ಮಿಶ್ರ ಮಾಡಬೇಕು.
 • ಈಗ ಈ ಮಿಶ್ರಣವನ್ನು ಬ್ರೆಡ್ ಮಿಶ್ರಣದ ಹೊತೆ ಬೆರೆಸಬೇಕು ಅದಕ್ಕೆ ಹಿಸುಕಿದ ಬಾಳೆಹಣ್ಣು ಮತ್ತು ಒಣದ್ರಾಕ್ಷಿ ಹಾಕಬೇಕು.
 • ಈಗ ಈ ಮಿಶ್ರಣವನ್ನು ಬೇಯಿಸುವ ಪಾತ್ರೆಯಲ್ಲಿ ಹಾಕಿ ಒಂದು ಗಂಟೆ ಬೇಯಿಸಿದರೆ ಬ್ರೆಡ್ ಬಾಳೆಹಣ್ಣು ಪುಡ್ಡಿಂಗ್ ರೆಡಿ

Also read: ಮುಂಬೈನ ಸ್ಪೆಷಲ್ “ತವಾ ಪುಲಾವ್” ಮಾಡುವ ಸಿಂಪಲ್ ವಿಧಾನ ನಿಮಗಾಗಿ..!