ಮಳೆಯಿಂದಾಗಿ ನಿಮ್ಮ ಮನೆಗಳಿಗೆ ನೀರು ನುಗ್ಗಿದ್ದರೆ, ನೀರನ್ನು ಬೇಗ ಹೊರ ಹಾಕಲು ಈ ರೀತಿ ಮಾಡಿ..!!

0
1772

ಅಬ್ಬರದ ಮಳೆ, ಉಕ್ಕಿ ಹರಿಯುತ್ತಿರುವ ನೀರು, ಮನೆಗಳಿಗೆ ನುಗ್ಗಿದ ನೀರು, ಮಳೆಯಿಂದ ಟ್ರಾಫಿಕ್ ಜಾಮ್…ಇಂಥ ಎಲ್ಲ ಮಾತುಗಳು ಈಗ ಆತಂಕವನ್ನೇ ಹುಟ್ಟಿಸಿಬಿಡುತ್ತದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿ ಪರದಾಡುವಂತಾಯಿತು. ಅದರಲ್ಲೂ ತಗ್ಗು ಪ್ರದೇಶದಲ್ಲಿ ನೀರು ಶೇಖರಿಸಿ ಮನೆಗಳಿಗೆ ನುಗ್ಗಿ ಸಂಪೂರ್ಣ ಜಲಾವೃತವಾಗಿ ಜನರು ಪರದಾಡುವಂತಾಗುತ್ತದೆ.

ಹೀಗೆ ಮನೆಗಳಿಗೆ ನುಗ್ಗಿದ ನೀರನ್ನು ತಕ್ಷಣವೇ ಮನೆಗಳಿಂದ ಹೊರ ಹಾಕಲು ಬೆಂಗಳೂರಿನ ಒಂದು organization ಮಕ್ಕಳು ಒಂದು ಉಪಾಯವನ್ನು ಕಂಡುಹಿಡಿದಿದ್ದಾರೆ. ಅದೇನಪಾ ಅಂದರೆ “sodium polycreate” ಎಂಬ ಕೆಮಿಕಲ್ ಮಾರ್ಕೆಟಿನಲ್ಲಿ ಜಸ್ಟ್ Rs.70 ಗೆ ಸಿಗುತ್ತದೆ. ಈ ಕೆಮಿಕಲ್ ಅನ್ನು ಮನೆಗಳಿಗೆ ನುಗ್ಗಿದ ಮಳೆ ನೀರಿಗೆ ಜಸ್ಟ್ 2ರಿಂದ 3 ಸ್ಪೂನ್ ಹಾಕಿದರೆ ತಕ್ಷಣವೇ ಕೇವಲ 5 ನಿಮಿಷಗಳ ಒಳಗಡೆ ನೀರು solid ಗೆ convert ಆಗುತ್ತದೆ. ಇದರಿಂದಗೆ ಬೇಗನೆ ಮಳೆ ನೀರನ್ನು ಮನೆಯಿಂದ ಹೊರಹಾಕಲು ಸಹಾಯವಾಗುತ್ತದೆ. ಹೀಗೆ convert ಆದ solid ಗೆ ಅಯೋಡೀನ್ ಹಾಕಿದರೆ ತಕ್ಷಣವೇ ನೀರಿಗೆ ಬದಲಾಗುತ್ತದೆ.

ಸಾಮಾನ್ಯವಾಗಿ ತಗ್ಗು ಪ್ರದೇಶಗಳಲ್ಲೇ ಮಳೆನೀರಿನಿಂದ ಅನಾಹುತ ಸಂಭವಿಸುತ್ತವೆ ಈ ಒಂದು ಸರಳ ಉಪಾಯದಿಂದ ಮಳೆನೀರಿನಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಬಹುದು. ಈ ವಿಷಯದ ಬಗ್ಗೆ ಪೂರ್ಣಿಮಾ ಟೀಚರ್ ಎಂಬುವವರು NEWS9 ವಾಹಿನಿಜೊತೆ ಜತೆ ಮಾತನಾಡಿದ್ದಾರೆ..