ಅಕ್ರಮವಾಗಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್-ನಲ್ಲಿ ನೆಲೆಸಿದ್ದ ಪಾಕ್ ದಂಪತಿ ಗಡಿಪಾರು..

0
340

ದೇಶದಲ್ಲಿ ಪಾಕ್ ಮೂಲದ ಉಗ್ರರಿಂದ ದಾಳಿಗಳು ನಡೆಯುತ್ತಿದ್ದು ಎರಡು ದೇಶಗಳ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿದೆ. ಇಂತಹ ಸಮಯದಲ್ಲಿ ಅಕ್ರಮವಾಗಿ ಬೆಂಗಳೂರಿನಲ್ಲಿ ಪಾಕಿಸ್ತಾನದ ದಂಪತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೆಲೆಸಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಇಡಿ ದೇಶದಲ್ಲಿ ವಿರೋಧಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ ಮಹತ್ವದ ಆದೇಶ ನೀಡಿ. ಒಂದು ಕ್ಷಣವೂ ಈ ನೆಲೆದಲ್ಲಿ ಇರಬಾರದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಕೂಡಲೇ ಪಾಕಿಸ್ತಾನಕ್ಕೆ ಹಸ್ತಾಂತರಿಸಿ”ಎಂದು ಹೇಳಿತು ಅದರಂತೆ ಪಾಕ್ ದಂಪತಿಗಳನ್ನು ವಾಘಾ-ಅತಾರಿ ಗಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.

ಪಾಕ್ ದಂಪತಿಗಳು ಗಡಿಪಾರು?

ಹೌದು ಆಧಾರ್ ಕಾರ್ಡುಗಳು ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಪಾಕ್ ಮೂಲದ ಮೂವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಕೋರ್ಟ್ ಆದೇಶದಂತೆ ಕಿರಣ್ ಗುಲಾಮ್ ಅಲಿ ಮತ್ತು ಖಾಸಿಫ್ ಶಂಶುದ್ದೀನ್ ಅವರನ್ನು ಬೆಂಗಳೂರಿನ ಪೊಲೀಸರು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರಕಾರದ ಪರ ಎಎಸ್‌ಜಿ ಪ್ರಭುಲಿಂಗ ನಾವದಗಿ”ಪಾಕ್‌ ರಾಯಭಾರಿ ಕಚೇರಿಗೆ ಈ ದಂಪತಿ ಬಗ್ಗೆ ಮಾಹಿತಿ ನೀಡಿ ಅವರು ತಮ್ಮ ದೇಶದ ಪ್ರಜೆಗಳೇ ಎಂಬುದನ್ನು ಖಚಿತಪಡಿಸುವಂತೆ ಕೇಳಿದ್ದೇವೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ, ಇದು ಗಂಭೀರ ವಿಚಾರ, ಸ್ವಲ್ಪ ಸಮಯ ನೀಡಬೇಕು ”ಎಂದು ಕೋರಿದರು.

ಅದಕ್ಕೆ ಜಜ್‌ ”ಇಲ್ಲ, ಯಾವುದೇ ಕಾರಣಕ್ಕೂ ಸಮಯ ನೀಡುವುದಿಲ್ಲ. ಇಲ್ಲಿನ ಜನರ ತೆರಿಗೆ ದುಡ್ಡನ್ನು ಅವರಿಗೆ ಖರ್ಚು ಮಾಡಲು ಆಗುವುದಿಲ್ಲ, ನಾಳೆಯೇ ವಾಘಾ ಗಡಿಯಲ್ಲಿ ಬಿಟ್ಟು ಬಂದುಬಿಡಿ. ವೀಸಾ ಇಲ್ಲದೆ ಹೇಗೆ ಅವರು ಅಕ್ರಮವಾಗಿ ಬಂದರು? ಭಾರತದ ಭೂ ಪ್ರದೇಶದಿಂದ ಮೊದಲು ಅವರನ್ನು ಕರೆದೊಯ್ಯಿರಿ ”ಎಂದು ಹೇಳಿದರು. ”ನೀವು ರಾಯಭಾರ ಕಚೇರಿಯವರು ಪರಿಶೀಲಿಸಲಿದ್ದಾರೆ ಎನ್ನುತ್ತೀರಿ. ಅವರು ಪರಿಶೀಲಿಸಿದ್ದೀವಿ, ನಮ್ಮ ಪ್ರಜೆಗಳಲ್ಲ ಎಂದರೆ ಏನು ಮಾಡುತ್ತೀರಿ? ದೇಶದ ಭದ್ರತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದೇಶಿಯರು ಅಕ್ರಮವಾಗಿ ಇಲ್ಲಿ ನೆಲೆಸುತ್ತಿದ್ದಾರೆ. ಬೇರೆ ದೇಶದ ಕ್ರಿಮಿನಲ್‌ಗಳನ್ನು ನಮ್ಮ ಭೂಪ್ರದೇಶದಲ್ಲಿ ಇಟ್ಟುಕೊಳ್ಳುವುದು ಸರಿಯೇ,” ಎಂದೂ ಸಹ ನ್ಯಾಯಪೀಠ ಕೇಳಿತು.

ಏನಿದು ಘಟನೆ?

ಕೇರಳದ ಸಿಹಾದ್ ಕರಾಚಿ ಮೂಲದ ಸಮೀರಾ ಎನ್ನುವ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ನಾದಿನಿ ಕಿರಣ್ ಗುಲಾಮ್ ಅಲಿ (ಝೈನಬ್) ಮತ್ತು ಖಾಸಿಫ್ ಶಂಶುದ್ದೀನ್ ದಂಪತಿಯನ್ನು ನೇಪಾಳ ಮಾರ್ಗವಾಗಿ ಅಕ್ರಮವಾಗಿ ಭಾರತಕ್ಕೆ ಕರೆತಂದಿದ್ದ. ನಾಲ್ವರು ಸಹ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವಿಚಾರ ತಿಳಿದ ಪೊಲೀಸರು ಮೇ 25, 2017ರಂದು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿ ಮಾಹಿತಿ ಕಲೆ ಹಾಕಿದ್ದರು, ಸಿಹಾದ್ ಮತ್ತು ಸಮೀರಾ ಅವರು ವಿವಾಹವಾದ ಕಾರಣ ಅವರಿಗೆ ಭಾರತದಲ್ಲಿ ನೆಲೆಸಲು ಸೆಷನ್ಸ್ ಕೋರ್ಟ್‌ ಅವಕಾಶ ನೀಡಿತ್ತು. ಕಿರಣ್ ಗುಲಾಮ್ ಅಲಿ ಮತ್ತು ಖಾಸಿಫ್ ಶಂಶುದ್ದೀನ್‌ ದಂಪತಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದಂಪತಿಗಳು ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು. ಏಪ್ರಿಲ್ 26ರಂದು ಅಂತಿಮ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ದಂಪತಿಗಳನ್ನು ಗಡಿಪಾರು ಮಾಡುವಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಸೂಚನೆ ನೀಡಿತ್ತು. ಅದರಂತೆ ಅವರನ್ನು ಗಡಿಪಾರು ಮಾಡಲಾಗಿದೆ.