ಬೆಂಗಳೂರಿನಲ್ಲಿದೆ ಆಕಾಶದಲ್ಲಿ ತೇಲುವ ರೆಸ್ಟೋರೆಂಟ್; ಇನ್ಮುಂದೆ ಫ್ಲೈ ಡೈನಿಂಗ್ ರೆಸ್ಟೋರೆಂಟ್’ ಗೆ ದುಬೈಗೆ, ಸಿಂಗಪೂರ್​ಗೆ ಹೋಗಬೇಕಿಲ್ಲ..

0
757

ಈಗಿನ ಯುವಪಿಳಿಗೆ ಯಾವುದು ಹೇಗೆ ಇಷ್ಟವಾಗುತ್ತೆ ಎಂಬುದು ಅರ್ಥಮಾಡಿಕೊಳುವುದೇ ಕಷ್ಟ. ಕೆಲವೊಬ್ಬರಿಗೆ ವಸ್ತುಗಳ ಖರೀದಿಸುವ ಹುಚ್ಚು, ಇನ್ನೊಬ್ಬರಿಗೆ ಸಿನಿಮಾ, ಪೋಟೋ, ಪ್ರಯಾಣದ ಹುಚ್ಚು. ಇದೆಲ್ಲವುಕ್ಕಿಂತ ಒಂದು ದೊಡ್ಡ ಹುಚ್ಚು ಅಂದ್ರೆ ಹೋಟೆಲ್ ನಲ್ಲಿ ಊಟಮಾಡುವುದು. ಅದು ಏನ್ ದೊಡ್ಡ ವಿಚಾರ ಅನ್ಕೋಬೇಡಿ ಹೋಟೆಲ್ ನಲ್ಲಿ ತೀನೋಕೆ ಅಂತಾನೆ ವಿದೇಶಕ್ಕೆ ಹಾರುವ ಜನರು ತುಂಬಾನೇ ಇದ್ದಾರೆ. ಇಂತಹ ಹೋಟೆಲ್ ಪ್ರಿಯರಿಗೆ ಇಷ್ಟವಾಗುವ ಹಾಗೇನೆ ಸಮುದ್ರದ ಮದ್ಯ ಇಲ್ಲ ನೀರಿನ ಒಳಗೆ ಹೋಟೆಲ್ ಮಾಡಿದು ಕೇಳಿದ್ದಿದೆ, ಇವೆಲ್ಲ ಭೂಮಿಯಲ್ಲೇ ಕೂತು ಊಟ ಮಾಡಿವ ಹೋಟೆಲ್ ಆಗಿದ್ದು ಇವುಗಳು ಬೇಜಾರ್ ಆಗಿವೆ ಈಗ ಏನ್ ಇದ್ರೂ ಆಕಾಶದಲ್ಲಿ ಕುಳಿತು ಊಟ ಮಾಡೋದು.


Also read: ಡ್ರೈವಿಂಗ್ ಲೈಸೆನ್ಸ್ ಗೆ ಇನ್ಮೇಲಿಂದ ಲಂಚ ಕೊಡುವ ಅವಶ್ಯಕತೆ ಇಲ್ಲ, online ನಲ್ಲೆ ಅರ್ಜಿ ಸಲ್ಲಿಸಿ!!

ಇದು ಸದ್ಯದ ಹವದಲ್ಲಿರುವ ಹೋಟೆಲ್ ಅಂದ್ರೆ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಇಂತಹ ಹೋಟೆಲ್’ ನಲ್ಲಿ ಊಟ ಮಾಡುವುದೇ ಒಂದು ಮೋಜು ಇದಕ್ಕಾಗಿ ಹೆಚ್ಚಿನ ಜನರು ದುಬೈಗೆ ಅಥವಾ ಸಿಂಗಪೂರ್​ಗೆ ಹಾರಿ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಊಟ ಮಾಡಿಬರುತ್ತಿದರು. ಇನ್ನು ಮುಂದೆ ವಿಶ್ವದ ಅತ್ಯಂತ ಸಾಹಸಮಯ ಡಿನ್ನರ್‌ ಅನುಭವವನ್ನು ಪಡೆಯಲು ದುಬೈಗೆ, ಸಿಂಗಪೂರ್​ಗೆ ಹೋಗಬೇಕಿಲ್ಲ. ಫ್ಲೈ ಡೈನಿಂಗ್ ರೆಸ್ಟೋರೆಂಟ್ ಅನುಭವವನ್ನು ಬೆಂಗಳೂರಿನಲ್ಲೇ ಆಕಾಶದಲ್ಲಿ ತೇಲುತ್ತಾ ಮೋಜು ಮಸ್ತಿಮಾಡುತ ಊಟ ಮಾಡಬಹುದು,

ಫ್ಲೈ ಡೈನಿಂಗ್ ರೆಸ್ಟೋರೆಂಟ್ ಅಂದ್ರೆ?

ಈ ಹೋಟೆಲ್ ನಲ್ಲಿ ನೀವು ನೆಲದಿಂದ 50 ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ ಆಕಾಶದ ಮನೆಯಲ್ಲಿ ಮೋಡಗಳ ಗೋಡೆಯಲ್ಲಿ ರುಚಿಕರ ಭೋಜನವನ್ನು ಸವಿಯಬಹುದು. ಇದೊಂದು ಫ್ಲೈ ಡೈನಿಂಗ್ ಎಂಬುದು ವಿಶೇಷ ರೀತಿಯ ಹೊಸ ರೆಸ್ಟೋರೆಂಟ್ ಅಂತಾನೆ ಹೇಳಬಹುದು. ಈ ರೆಸ್ಟೋರೆಂಟ್​ನ್ನು ಕ್ರೇನ್ ಸಹಾಯದಿಂದ 50 ಅಡಿ ಮೇಲಕ್ಕೆ ಎತ್ತಲಾಗುತ್ತದೆ. 16 ಮೆಟಲ್ ಹಗ್ಗಗಳಿಂದ ಈ ರೆಸ್ಟೋರೆಂಟ್​ನ್ನು ಬಿಗಿಗೊಳಿಸಲಾಗಿದ್ದು, ಒಂದು ಬಾರಿ ಇಲ್ಲಿ ಮೂರು ರೆಸ್ಟೋರೆಂಟ್ ಸಿಬ್ಬಂದಿ ಸೇರಿ 22 ಮಂದಿ ಕುಳಿತುಕೊಳ್ಳಬಹುದು. ಇಲ್ಲಿನ ಟೇಬಲ್​ಗಳು 360 ಡಿಗ್ರಿಯಲ್ಲಿ ತಿರುಗಲಿದ್ದು, ಇದರಿಂದ ಎಲ್ಲ ಭಾಗಗಳ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.


Also read: ಸಿಲಿಂಡರ್ ಗ್ಯಾಸ್ ಬಳಸುವ ಪ್ರತಿಯೊಬ್ಬರೂ ಈ ನಿಯಮ ಅರಿತರೆ.. ಒಂದು ತಿಂಗಳು ಬರುವ ಗ್ಯಾಸ್ ನಾಲ್ಕು ತಿಂಗಳು ಬರುತ್ತೆ..!!

ಬೆಂಗಳೂರಿನಲ್ಲಿ ಎಲ್ಲಿದೆ? ಫ್ಲೈ ಡೈನಿಂಗ್ ಹೋಗಲು ಬೇಕಾಗುವ ಹಣ?

ಸಿಲಿಕಾನ್ ಸಿಟಿಯಲ್ಲಿ ಇದೇ ಮೊದಲ ಬಾರಿಗೆ ಭೋಜನ ಪ್ರಿಯರಿಗೆ ಹೊಸ ಅನುಭವ ಒದಗಿಸಲು ಇಂತಹದೊಂದು ರೆಸ್ಟೋರೆಂಟ್ ತೆರೆಯಲಾಗಿದೆ. ಹೆಬ್ಬಾಳದ ನಾಗವಾರ ಕೆರೆಯ ಪಕ್ಕದಲ್ಲೇ ವಿನ್ಯಾಸ ಗೊಳಿಸಲಾಗಿದೆ ಇದರ ಇನ್ನೊಂದು ಕರಾಮತ್ತು ಅಂದ್ರೆ ಕೆರೆಯ ಪಕ್ಕದಲ್ಲೇ ಇರುವುದರಿಂದ ಎತ್ತರದಿಂದಲೇ ಪ್ರಕೃತಿ ಸೌಂದರ್ಯದ ಅನುಭವನ್ನು ಪಡೆಯಬಹುದು. ಗರ್ಭಿಣಿ ಮಹಿಳೆಯರು ಮತ್ತು 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ ಇಲ್ಲಿ ಪ್ರತಿ ವ್ಯಕ್ತಿ ಕನಿಷ್ಠ 4.5 ಅಡಿ ಎತ್ತರ ಹೊಂದಿರಬೇಕು. ಅದೇ ರೀತಿ ವ್ಯಕ್ತಿಯ ತೂಕವು ಗರಿಷ್ಠ 150.ಕೆ.ಜಿ ಒಳಗಿರಬೇಕಾಗುತ್ತದೆ. ಅದೇ ರೀತಿ ಯಾವುದೇ ಬ್ಯಾಗ್​ಗಳನ್ನು ಇಲ್ಲಿಗೆ ಕೊಂಡೊಯ್ಯುವಂತಿಲ್ಲ. ಆದರೆ ಮೊಬೈಲ್ ಬಳಸಲು ಅವಕಾಶ ನೀಡಲಾಗಿದೆ. ಅರ್ಧ ಗಂಟೆ ಮೊಕ್​ಟೈಲ್ ಸೆಷನ್: ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ 3999 ಒಬ್ಬರಿಗೆ ಅರ್ಧ ಗಂಟೆ ಮೊಕ್​ಟೈಲ್ ಸೆಷನ್: ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ ರೂ 3999 ಒಬ್ಬರಿಗೆ. 7 ಗಂಟೆಗೆ ಪ್ರಾರಂಭವಾಗುವ ಡೈನಿಂಗ್ ಸೆಷನ್: ಒಬ್ಬರಿಗೆ ಒಂದು ಗಂಟೆಗೆ 6999.


Also read: ಗೂಗಲ್ ಬಳಕೆಯಿಂದ ಎಷ್ಟೊಂದು ಪ್ರಯೋಜನ ಅಂದ್ರೆ, ಅಕ್ರಮ ಸಂಬಂಧವನ್ನು ಕೂಡ ಪತ್ತೆಹಚ್ಚುತ್ತೆ ಅದು ಹೇಗೆ ಅಂತೀರ, ಮುಂದೆ ಓದಿ!!

ಫ್ಲೈ ಡೈನಿಂಗ್’ನಲ್ಲಿ ಏನೇನೆಲ್ಲ ಮಾಡಬಹುದು?

ಫ್ರೋರ್ಬ್ಸ್ ನಿಯತಕಾಲಿಕೆಯ ಪ್ರಪಂಚದ 10 ಅಸಾಧಾರಣ ರೆಸ್ಟೋರೆಂಟ್​ಗಳ ಪಟ್ಟಿಯಲ್ಲಿ ಫ್ಲೈ ಡೈನಿಂಗ್ ಕೂಡ ಸ್ಥಾನ ಪಡೆದುಕೊಂಡಿದೆ. ಡೇರ್​ಡೇವಿಲ್ ಅನುಭವದೊಂದಿಗೆ ಫ್ಲೈ ಡೈನಿಂಗ್​ನಲ್ಲಿ ನೀವು ಫ್ರೆಂಡ್ಸ್‌ ಜೊತೆ, ಫ್ಯಾಮಿಲಿ ಜೊತೆ ಸಣ್ಣ ಔತಣಕೂಟವನ್ನು ಆಯೋಜಿಸಬಹುದು. ಹೊಸ ಉತ್ಪನ್ನಗಳ ಲಾಂಚ್​ಗೂ ಅವಕಾಶ ನೀಡಲಾಗುತ್ತದೆ. ಡಿಜೆ ಪಾರ್ಟಿ, ಸಂಗೀತ ಪದರ್ಶನ ಸೇರಿದಂತೆ ಎಲ್ಲವನ್ನು ಫ್ಲೈ ಡೈನಿಂಗ್​ನಲ್ಲಿ ಗಾಳಿಯಲ್ಲಿ ತೇಲುತ್ತಾ ಆಹಾರ ಸವಿಯುವ ಹೊಸ ಥ್ರಿಲ್​ ಪಡೆಯಬಹುದು.