ನೀವು ಬ್ರ್ಯಾಂಡೆಡ್ ಚಪ್ಪಲ್ಲಿ-ಶೂಗಳನ್ನು ಬಳಸುತ್ತಿರಾ? ಹಾಗಿದ್ರೆ ಹುಷಾರ್; ಬ್ರ್ಯಾಂಡೆಡ್​ ಶೂ,ಸ್ಯಾಂಡಲ್​​ಗಳನ್ನು ಕಳ್ಳತನ ಮಾಡುವ ಗ್ಯಾಂಗ್ ಬಂದಿದೆ ಎಚ್ಚರ!!

0
192

ಬೆಂಗಳೂರಿನಲ್ಲಿ ಇಷ್ಟು ದಿನ ಬೈಕ್, ಮನೆ ಕಳ್ಳರ ಕಾಟದಿಂದ ಬೇಸತ್ತ ಜನರಿಗೆ ಮತ್ತೊಂದು ರೀತಿಯ ಕಳ್ಳರ ಕಾಟ ಶುರುವಾಗಿದ್ದು, ಇವರು ಯಾವ ಕಳ್ಳರು ಎಂದು ಕೇಳಿದರೆ ಆಶ್ಚರ್ಯವಾಗುವುದು ಅಂತು ಗ್ಯಾರಂಟಿ. ಅಂತಹ ಕಳ್ಳತನದ ಹೊಸ ಮುಖಗಳು ಮಾಡುತ್ತಿರುವ ಚೋರ್ ದಂದೆ ಎಂದರೆ ಚಪಲ್ಲಿ, ಶೂ ಕಳ್ಳತನ. ಇವರ ಕಣ್ಣಿಗೆ ಯಾವುದೇ ಬ್ರಾಂಡೆಡ್ ಸ್ಯಾಂಡಲ್, ಶೂ ಗಳು ಸಿಕ್ಕರೂ ಹೊಂಚು ಹಾಕಿ ರಾತ್ರಿವೇಳೆ ಎಸ್ಕೇಪ್ ಮಾಡುತ್ತಿದ್ದಾರೆ. ಇದರಿಂದ ಜನರು ಮನೆಯಲ್ಲಿ ಚಪ್ಪಲಿ ಬಿಡುವುದು ಕೂಡ ದೊಡ್ಡ ತಲೆನೋವುವಾಗಿದೆ.

ಚಪ್ಪಲಿ, ಶೂ ಗಳ ಕಳ್ಳತನ?

ಹೌದು ಬೆಂಗಳೂರಿನಲ್ಲಿ ಎಂತಂಥ ಕಳ್ಳರನ್ನು ನೋಡಿದ ಜನರಿಗೆ ಈಗ ಹೊಸ ಕಳ್ಳರಿಂದ ಮತ್ತಷ್ಟು ತಲೆನೋವು ಶುರುವಾಗಿದೆ. ಏಕೆಂದರೆ ಮನೆ ಮುಂದೆ ಬಿಟ್ಟ ಬ್ರಾಂಡೆಡ್ ಶೂ, ಚಪ್ಪಲಿಗಲಿ ಬೆಳಗ್ಗೆ ಎಲುವುದರಲ್ಲಿ ಇರುವುದೇ ಇಲ್ಲ, ಇದನ್ನೇ ದೊಡ್ಡ ದಂಡೆ ಮಾಡಿಕೊಂಡ ಕದಿಮರು ದೊಡ್ಡ ತಂಡವನ್ನು ಮಾಡಿಕೊಂಡು ಐಶ್ಯಾರಾಮಿ ಅಪಾರ್ಟ್ ಮೆಂಟ್ ಮತ್ತು ಪಿಜಿ. ಹೋಟೆಲ್ ಗಳಿಗೆ ನುಗ್ಗುತ್ತಿದ್ದಾರೆ. ಇಂತಹ ಕಳ್ಳರ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಯ ಮುಂದೆ ಇರುವ ಬ್ರ್ಯಾಂಡೆಡ್ ಶೂ, ಚಪ್ಪಲಿಗಳನ್ನು ಕದಿಯುತ್ತಿದ್ದಾರೆ. ಇಂತಹದೊಂದು ಘಟನೆ ಥಣಿಸಂದ್ರದ ಭುವನೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿ ನಡೆದಿದ್ದು, ಕಳ್ಳರ ಚಪ್ಪಲಿ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಧ್ಯರಾತ್ರಿ ಆಟೋದಲ್ಲಿ ಬಂದ ಮೂವರು ಕಳ್ಳರು ,ಅಪಾರ್ಟ್ ಮೆಂಟ್ ನೊಳಗೆ ನುಗ್ಗಿದ್ದು. ಮನೆಯ ಮುಂಭಾಗ ಇರಿಸಿರುವ ಕೇವಲ ಬ್ರ್ಯಾಂಡೆಡ್ ಶೂ ಮತ್ತು ಚಪ್ಪಲಿಗಳನ್ನು ಕದ್ದು ಮೂಟೆಯಲ್ಲಿ ತುಂಬಿಕೊಂಡಿದ್ದಾರೆ. ಎಲ್ಲವನ್ನು ಆಟೋದಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ. ಇನ್ನು ಇವರ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಕಂಡಿದ್ದೇ ಕಳ್ಳರು ಮುಖಕ್ಕೆ ಚಪ್ಪಲಿ, ಶೂ ಅಡ್ಡ ಹಿಡಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಹೇಳುವ ಪ್ರಕಾರ ಶೂ ಕದಿಯುವವರ ದೊಡ್ಡ ಗ್ಯಾಂಗ್​ ಬೆಂಗಳೂರಿನಲ್ಲಿದೆಯಂತೆ. ಸಾಕಷ್ಟು ಅಪಾರ್ಟ್​ಮೆಂಟ್​ಗಳಲ್ಲಿ ಈ ರೀತಿ ಘಟನೆಗಳು ನಡೆದಿವೆ ಎನ್ನಲಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ತನಿಖೆ ಕೂಡ ಆರಂಭಗೊಂಡಿದೆ. ಕದ್ದ ಇಂತಹ ಚಪ್ಪಲಿಗಳನ್ನು ಬೆಂಗಳೂರಿನ ಕೆಲವು ಕಡೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಸಧ್ಯ ಚಿಕ್ಕಪೇಟೆ, ಚಾಮರಾಜಪೇಟೆ, ಕೆ ಆರ್ ಮಾರ್ಕೆಟ್ ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆಯಲ್ಲಿ ರಾಶಿ ರಾಶಿ ಚಪ್ಪಲಿ, ಶೂ. ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಕಳ್ಳರು ಇಂತಹವರಿಗೆ ಏಜೆಂಟ್ ಮೂಲಕ ಮಾರಾಟ ಮಾಡುತ್ತಾರೆ. ಅವುಗಳನ್ನೇ ಬೀದಿಯಲ್ಲಿ ಹಚ್ಚಿ ಅರ್ಧ ಬೆಲೆಗೆ ಮಾರಾಟ ಮಾಡುತ್ತಾರೆ.

ದರಂತೆ ಕಳ್ಳರಿಗೆ ಒಂದು ಜೊತೆ ಚಪ್ಪಲಿ ಶೂ. ಕಳ್ಳತನ ಮಾಡಿದರೆ ಕನಿಷ್ಠ 300 ರಿಂದ 500 ರೂ. ಸಿಗುತ್ತದೆ. ಕಳ್ಳತನವಾದ ಮಾಲೀಕರು ಇವೆ ನಮ್ಮ ವಸ್ತುಗಳು ಎಂದು ಗುರುತ್ತಿಲು ಆಗದ ವಸ್ತುಗಳು ಆಗಿದ್ದರಿಂದ ಇವುಗಳನ್ನೇ ಗುರಿಯಾಸಿಕೊಂಡು ಕಳ್ಳತನಕ್ಕೆ ಇಲ್ಲಿದಿದ್ದಾರೆ. ಯಾವುದಕ್ಕೂ ಮನೆಯಲ್ಲಿ ಚಪ್ಪಲ್ಲಿ, ಶೂ. ಇದುವ ಮುನ್ನ ಎಚ್ಚರದಿಂದ ಜೋಪಾನವಾಗಿ ಇಡುವುದು ಒಳ್ಳಯದು.