ಹೃದಯವಿದ್ರಾವಕ ಘಟನೆ, ರಕ್ಷಣೆ ನೀಡಬೇಕಿದ್ದವನೇ ನ್ಯಾಯಾಧೀಶರ ಪತ್ನಿ, ಪುತ್ರನನ್ನು ಗುಂಡಿಟ್ಟು ಕೊಂದ ಘಟನೆ ದೇಶದಲ್ಲಿ ತಲ್ಲಣ ಮೂಡಿಸಿದೆ!!

0
401

ಗುರುಗ್ರಾಮದ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಕಾಂತ್‌ ಶರ್ಮಾರ ಪತ್ನಿ, ಪುತ್ರನಿಗೆ ಗುಂಡು ಹಾರಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ನ್ಯಾ.ಕೃಷ್ಣಕಾಂತ್ ಜಿಲ್ಲಾ ನ್ಯಾಯಾಧೀಶರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದ ವೇಳೆ ಭದ್ರತಾ ಮಹಿಪಾಲ್‌ ಎಂಬಾತನೇ ಈ ಕೃತ್ಯವೆಸಗಿ, ಅಧಿಕಾರಿ ಅವರಿಗೆ ಕರೆ ಮಾಡಿ ನಿಮ್ಮ ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿದ್ದೇನೆ ಹೋಗಿ ನೋಡಿ ಎಂದು ಹೇಳಿದ್ದಾರೆ.


Also read: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್; ಸಮ್ಮಿಶ್ರ ಸರ್ಕಾರದಿಂದ ದಸರಾ ಹಬ್ಬದ ಉಡುಗೊರೆ ರೂಪದಲ್ಲಿ ತುಟ್ಟಿಭತ್ಯೆ ಹೆಚ್ಚಳ..!

ನ್ಯಾಯಧೀಶರ ಪತ್ನಿ, ಪುತ್ರನನ್ನೇ ಹತ್ಯೆಗೈದ ಭದ್ರತಾ ಸಿಬ್ಬಂದಿ..!

ಅರ್ಕಾಡಿಯಾ ಮಾರ್ಕೆಟ್ ಗೆ ತೆರಳಿದ್ದ ನ್ಯಾಯಾಧೀಶರ ಪತ್ನಿ ರಿತು ಹಾಗೂ 17 ವರ್ಷದ ಮಗ ಧ್ರುವ್ ನ್ನು ಸಾವಿರಾರು ಮಂದಿ ಎದುರು ತನ್ನ ಸರ್ವಿಸ್ ರಿವಾಲ್ವರ್ ನಿಂದ ದಾಳಿ ಮಾಡಿ ಮಹಿಪಾಲ್ (32) ಪೊಲೀಸ್ ಪೇದೆ ರಕ್ತಸಿಕ್ತವಾಗಿದ್ದ ಧ್ರುವ್ ನ ದೇಹವನ್ನು ಎಳೆದೊಯ್ಯಲು ಯತ್ನಿಸಿದ್ದಾನೆ. ಆದರೆ ವಿಫಲವಾದಾಗ ಅವರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮಹಿಪಾಲ್ ಪರಾರಿಯಾದ ನಂತರ ನ್ಯಾಯಾಧೀಶರ ಕುಟುಂಬದವರ ರಕ್ಷಣೆಗೆ ಸ್ಥಳಿಯರು ಮುಂದಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ನ್ಯಾಯಾಧೀಶರ ಪತ್ನಿ ರಿತು ಹಾಗೂ ಪುತ್ರ ಧ್ರುವ್ ಅವರ ಸ್ಥಿತಿ ಗಂಭೀರವಾಗಿದೆ. ಈ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿಮ್ಮ ಹೆಂಡತಿ, ಮಗನನ್ನು ಗುಂಡಿಟ್ಟು ಕೊಂದಿದ್ದೇನೆ ಹೋಗಿ ನೋಡಿ ಎಂದ ಭೂಪ..!


Also read: ಇತ್ತೀಚಿನ ದಿನಗಳಲ್ಲಿ ಆತಂಕ ಹೆಚ್ಚಿಸಿದ ಆಕಾಶಯಾನ; ದುಬೈಗೆ ಹೋಗಬೇಕಿದ್ದ ವಿಮಾನ ಗೋಡೆಗೆ ಡಿಕ್ಕಿ ಹೊಡೆದು ತಿರುಗಿದ್ದು ಮುಂಬೈನತ್ತ!!

ಅಲ್ಲದೆ, ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿಯು ನೇರವಾಗಿ ಜಡ್ಜ್ಗೆ ಕರೆ ಮಾಡಿ, ನಿಮ್ಮ ಪತ್ನಿ, ಮಗನಿಗೆ ಗುಂಡು ಹಾರಿಸಿದ್ದೇನೆ ಎಂದೂ ಹೇಳಿಕೊಂಡಿದ್ದಾನೆ. ನಂತರ ನಡೆಸಲಾದ ಶೋಧ ಕಾರ್ಯಾ ಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ.


Also read: ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್’ಗೆ ನಡೆದಿತ್ತಾ ಸಂಚು..??

ಕಳೆದ ಎರಡು ವರ್ಷಗಳಿಂದ ನ್ಯಾಯಾಧೀಶರ ಕುಟುಂಬದವರ ಭದ್ರತಾ ಸಿಬ್ಬಂದಿಯಾಗಿದ್ದ ಮಹಿಪಾಲ್ ಏಕಾ ಏಕಿ ಈ ದೃಷ್ಕೃತ್ಯ ಮಾಡಿರುವ ಹಿಂದಿನ ಉದ್ದೇಶ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಆತನನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಮಹಿಪಾಲ್ ಖಿನ್ನತೆಯಿಂದ ಬಳಲುತ್ತಿದ್ದು, ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾನೆ ಎನ್ನಲಾಗಿದೆ.