ಮುದ್ದು ಲವ್ ಸ್ಟೋರಿ: ತನ್ನ ಹುಡುಗಿಯ ಪ್ರೀತಿ ಮುಂದೆ ಅಮ್ಮನ ಪ್ರೀತಿ ಉಳಿಯುತ್ತ..?

0
2279

ಮನುಷ್ಯನ ಜೀವನದಲ್ಲಿ ಪ್ರೀತಿ ಅನ್ನೋದು ತುಂಬ ಮುಖ್ಯ. ಅದು ತಾಯಿ ಪ್ರೀತಿ ಅಥವಾ ತನ್ನ ಹುಡುಗಿ ಪ್ರೀತಿ ಯಾವುದೇ ಆಗಲಿ ಅದಕ್ಕೆ ತನ್ನದೇ ಆದ ಮೌಲ್ಯವನ್ನು ಹೊಂದಿರುತ್ತದೆ.

ಒಂದು ಚಿಕ್ಕ ಪ್ಯಾಮಿಲಿ ತಾಯಿ ಮಗ ಇವರದ್ದೇ ಒಂದು ಚಿಕ್ಕ ಗೂಡು. ತುಂಬ ಪ್ರೀತಿಯಿಂದ ಮಗನನ್ನ ಬೆಳಸಿರುವ ತಾಯಿ ಬೆಟ್ಟದಷ್ಟು ಪ್ರೀತಿ ತೋರಿಸುವ ಮಗ.
ಮಗ ಬೆಳೆದು ದೊಡ್ಡವನಾಗಿ ಕಾಲೇಜಿಗೆ ಹೋಗುವ ದಿನಗಳು ಹತ್ತಿರ ಬರುತ್ತವೆ. ಕಾಲೇಜಿಗೆ ಸೇರಿದ ಮಗನನ್ನು ಇನ್ನು ಚಿಕ್ಕ ಮಗುವಿನಂತೆ ನೋಡಿಕೊಳ್ಳುವ ತಾಯಿ. ಇವರದ್ದೇ ಒಂದು ಪುಟ್ಟ ಜಗತ್ತು.

ಹುಡುಗ ಒಂದು ದಿನ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಒಂದು ದಿನ ರಸ್ತೆ ಯಲ್ಲಿ ಹೋಗುವಾಗ ಒಂದು ಸುಂದರ ಹುಡುಗಿ ರಸ್ತೆಯ ಬದಿಯಲ್ಲಿ ಮೆಲ್ಲ ಮೆಲ್ಲ ಹೆಜ್ಜೆ ಹಿಡುತ್ತ ಮುಂದೆ ಸಾಗುತ್ತಾಳೆ. ಸಾಗುವ ದಾರಿಯಲ್ಲಿ ಹುಡಗು ಹಿಂದೆ ಇರುತ್ತಾನೆ ಅದರಿಂದ ಆ ಚಲುವೆಯ ಮುಖ ಹುಡುಗನಿಗೆ ಕಾಣುವುದಿಲ್ಲ. ಹೀಗೆ ಹೋಗುವಾಗ ಹುಡುಗಿಯ ಬ್ಯಾಗ್ ನಿಂದ ಒಂದು ಪುಟ್ಟ ಕಾಲ್ಗೆಜ್ಜೆ ಕೆಳಗೆ ಬೀಳುತ್ತದೆ.

ಅದನ್ನು ಆ ಸುಂದರ ಚಲುವೆ ಗಮನಿಸದೆ ಆಟೋದಲ್ಲಿ ಹೋಗುತ್ತಾಳೆ. ಇದನ್ನು ನೋಡಿದ ಹುಡುಗ ಆ ಕಾಲ್ಗೆಜ್ಜೆ ಯನ್ನು ಏನಾದ್ರು ಮಾಡಿ ಆ ಹುಡುಗಿಗೆ ಕೊಡ್ಬೇಕು ಅಂತ ಓಡಿ ಬರುತ್ತಾನೆ. ಆದರೆ ಅಷ್ಟರಲ್ಲಿ ಆಟೋ ಮುಂದೆ ಸಾಗಿತು. ಆದರೆ ಪೆದ್ದು ಹುಡುಗ ಅದನ್ನ ತನ್ನ ಜೇಬಿನಲ್ಲಿ ಭದ್ರವಾಗಿಟ್ಟುಕೊಂಡು ಮನೆಗೆ ತೆರುಳುತ್ತಾನೆ. ಅಂದು ತನ್ನ ಮನದಲ್ಲಿ ಹಾಗೆ ಲೈಟ್ ಹಾಗಿ ಪ್ರೀತಿಯ ಮೊಳಕೆ ಚಿಗುರುತ್ತದೆ. ಆದರೆ ಅವನಿಗೆ ಗೊತ್ತೇ ಆಗದೆ ಅದನ್ನ ಅವಳಿಗೆ ಕೊಡುವ ನೆಪದಲ್ಲಿ ಅವಳನ್ನು ಹುಡುಕಿ ಹುಡುಕಿ ತನ್ನದೆಯಲ್ಲಿ ಪ್ರೀತಿಯ ಹೆಮ್ಮರವನ್ನು ಬೆಳೆಸಿಕೊಂಡಿರುತ್ತಾನೆ.

ಹೀಗೆ ದಿನ ಕಾಳದಂತೆ ತನ್ನ ತಾಯಿಗೆ ಒಂದು ಭಯಾನಕ ರೋಗ ಬರುತ್ತದೆ. ಮಗ ಕಷ್ಟ ಪಟ್ಟು ಎಲ್ಲಾ ಆಸ್ಪತ್ರೆಗಲ್ಲಿ ತೋರಿಸ್ತಾನೆ. ಆದರೆ ತಾಯಿ ಉಳಿಯೋದು ಕಷ್ಟ ಅಂತ ಗೊತ್ತಾಗುತ್ತದೆ. ತಾಯಿ ಮಗನನ್ನ ಹತ್ತಿರ ಕರೆದು ಕಂದ ಬಾ ಅಂದಳು ಮಗ ಮೆಲ್ಲ ಮೆಲ್ಲ ಹೆಜ್ಜೆ ಹಿಡುತ್ತ ತಾಯಿ ಹತ್ತಿರ ಹೋಗ್ತಾನೆ ತಾಯಿ ಮಗನನ್ನು ಕೇಳ್ತಾಳೆ. ಮಗ ನಂಗೆ ಒಂದು ಆಸೆ ಇದೆ ಅದುನ್ನ ನೆರವೇರಿಸ್ತೀಯ ಮಗ ಅಂತಾಳೆ. ಮಗ ಅಮ್ಮ ನಿನಗೋಸ್ಕರ ನನ್ನ ಪ್ರಾಣ ಬೇಕಾದ್ರು ಕೊಡ್ತೀನಿ ಏನ್ ಹೇಳು ಅಮ್ಮ ಅಂತ ತುಂಬ ಭಾವುಕನಾಗುತ್ತಾನೆ.

ತಾಯಿ ಮಗನ ಕೈ ಹಿಡಿದು ಮಗ ನಾನು ನಿನ್ನ ಮದುವೆ ನೋಡಿ ನನ್ನ ಕೊನೆ ಉಸಿರು ಬಿಡ್ತೀನಿ ಮಗ ನೀನು ಮದುವೆ ಆಗಬೇಕು ಅಂತಾಳೆ. ಮಗ ಏನು ಮಾತನಾಡದೆ ಮುಂದೆ ಬಂದು ತನ್ನ ಸ್ನೇಹಿತನಿಗೆ ಕರೆ ಮಾಡಿ ಮಗ ಮಾತಾಡಬೇಕು ಬಾ ಅಂತಾನೆ. ತನ್ನ ಸ್ನೇಹಿತನ ಮುಂದೆ ತನ್ನ ತಾಯಿ ಪ್ರೀತಿ ಮತ್ತು ತನ್ನ ಮನದಲ್ಲಿರುವ ಪ್ರೀತಿಯ ಬಗ್ಗೆ ವಿವರಿಸುತ್ತಾ. ಮಗ ನೋಡು ನಾನು ಇವಾಗ ಏನ್ ಮಾಡೋದು ಹೇಳು ಅಂದಾಗ ಗೆಳೆಯ ಯೋಚನೆ ಮಾಡಿ ಹೇಳ್ತಾನೆ. ಮಗ ನಿಂಗೆ ಆ ಹುಡುಗಿ ಯಾರು ಆಂತಾನೆ ಗೊತ್ತಿಲ್ಲ ಎಲ್ಲಿದ್ದಾಳೆ ಅಂತಾನೂ ಗೊತ್ತಿಲ್ಲ ಅಂತ ಹುಡುಗಿಗಾಗಿ ನಿನ್ನ ಹೆತ್ತು ಹೊತ್ತು ಕಷ್ಟ ಪಟ್ಟು ನೀನೆ ಜಗತ್ತು ಅಂತಿರುವ ನಿನ್ನ ತಾಯಿ ಪ್ರೀತಿ ದೊಡ್ದುದು ಮಗ ನೀನು ನಿನ್ನ ತಾಯಿ ಅಸೆ ನೆರವೇರಿಸು ಮಗ ಅಂತ ಹೇಳ್ತಾನೆ.

ಹುಡುಗ ತನ್ನ ಗೆಳೆಯನ ಮಾತಿಗೆ ಬೆಲೆ ಕೊಟ್ಟು ಅಮ್ಮನ ಪ್ರೀತಿಯಂತೆ ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆ ಆಗುತ್ತಾನೆ. ಅಮ್ಮ ತುಂಬ ಪ್ರೀತಿಯಿಂದ ಮಗನನ್ನು ಮುದ್ದಾಡುತ್ತಾಳೆ. ಮದುವೆಯಾ ಮಾರನೆ ದಿನ ತನ್ನ ರೂಮಿನಲ್ಲಿ ಹೆಂಡತಿಯ ಕೈಗೆ ಆ ಕಾಲ್ಗೆಜ್ಜೆ ಸಿಗುತ್ತದೆ. ಅದನ್ನು ನೋಡಿದ ಹೆಂಡತಿ ಆಶ್ಚರ್ಯದಿಂದ ತನ್ನ ಪತಿಯನ್ನು ಕರೆದು ರೀ ಇದು ಯಾರು ನಿಮ್ಮ ಹತ್ತಿರ ಯಾಕೆ ಇದೆ ಅಂತ ಕೇಳಿದಾಗ ಅದರ ಹಿನ್ನೆಲೆಯನ್ನು ಹೇಳುತ್ತಾನೆ.

ಆದರೆ ಹೆಂಡತಿ ಮುಖದಲ್ಲಿ ಆದ ಬದಲಾವಣೆ ನೋಡಿ ಇವನಿಗೆ ಆಶ್ಚರ್ಯವಾಗುತ್ತದೆ. ಹೆಂಡತಿ ಹೇಳ್ತಾಳೆ ರೀ ಇದುನ್ನ ನನ್ನ ಅಮ್ಮ ನಂಗೆ ಚಿಕ್ಕವಳಿದ್ದಾಗ ನಂಗೆ ಕೊಡಿಸಿದ್ದು ನನ್ನ ಅಮ್ಮನ ನೆನಪಿಗೆ ಇದುನ್ನ ಹಿಟ್ಟುಕೊಂಡಿದ್ದೆ. ಆದರೆ ಇದು ಮಿಸ್ ಆಗಿತ್ತು ಇವತ್ತು ಇದು ನಂಗೆ ಸಿಕ್ಕಿದ್ದು ನನ್ನ ಅಮ್ಮನೇ ಸಿಕ್ಕಷ್ಟು ಖುಷಿ ಆಗ್ತಿದೆ ಅಂತಾಳೆ. ಅವಳ ಖುಷಿಗಿಂತ ಇವನ ಖುಷಿನೇ ಹೆಚ್ಚಾಗಿರುತ್ತದೆ ಕಾರಣ ತಾನು ಪ್ರೀತಿಸಿದ ಹುಡುಗಿ ನಂಗೆ ಸಿಕ್ಕಳು ಮತ್ತು ತನ್ನ ತಾಯಿ ಮಾತನ್ನು ಸಹ ಉಳಿಸಿಕೊಂಡೇ ಅಂತ ತುಂಬ ಸಂತೋಷ ಪಡುತ್ತಾನೆ.

ನಿಜವಾಗಲೂ ಒಂದು ಒಳ್ಳೆ ಲವ್ ಸ್ಟೋರಿ ಅನುಸುತ್ತೆ. ಯಾಕೆ ಅಂದ್ರೆ ಅವನದು ನಿಜವಾದ ಪ್ರೀತಿ ತನ್ನ ತಾಯಿದು ನಿಜವಾದ ಪ್ರೀತಿ ತನ್ನ ಹುಡುಗಿದು ನಿಜವಾದ ಪ್ರೀತಿ ಅದಕ್ಕೆ ಹೇಳೋದು ನಿಜವಾದ ಪ್ರೀತಿಗೆ ಎಂದು ಮೋಸ ಆಗಲ್ಲ ಅನ್ನೋದು.