ತನ್ನ ಪ್ರಾಣದ ಹಂಗನ್ನು ತೊರೆದು ಕಾಲುವೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕರ ಪ್ರಾಣ ಕಾಪಾಡಿದ ಬಾಲಕ..!!

0
588

ನಾವು ನೀವು ರಸ್ತೆಯಲ್ಲಿ ಹೊರಟಾಗ ಏನಾದ್ರೂ ಸಮಸ್ಯೆಯಿಂದ ಬಳಲುತ್ತಿದ್ದ ಜನರನ್ನು ನೋಡಿದ್ರೆ, ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿರುವ ನಾವುಗಳ ಅವರ ಸಹಾಯಕ್ಕೆ ಹೋಗುವುದಿಲ್ಲ. ಅಲ್ಲದೆ ಫೋನ್ ಮಾಡಿ ಸಂಬಂಧ ಪಟ್ಟವರಿಗೂ ಹೇಳೋದಿಲ್ಲ. ಏಕೆಂದ್ರೆ ಮತ್ತೆ ಕೇಸು.. ಕೋರ್ಟ್ ಅಂತ ಹೆದರುತ್ತೇವೆ. ಆದ್ರೆ ಈ ಪೋರನಿಗೆ ಅದ್ಯಾವದರ ಪರಿವೇ ಇದ್ದಿರಲಿಲ್ಲ. ಬದಲಿಗೆ ಆ ಪುಟ್ಟ ಇಬ್ಬರು ಬಾಲಕರ ಜೀವ ರಕ್ಷಣೆ ಮಾಡುವುದಷ್ಟೇ ಅವನ ಮೂಲ ಉದ್ದೇಶವಾಗಿತ್ತು.

source: publictv.in

ಶಿವಮೊಗ್ಗದ ತುಂಗಾ ಕಾಲುವೇಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕರನ್ನು ರಕ್ಷಿಸಲು ಅಂಜದೇ ನೀರಿಗೆ ದುಮಕ್ಕಿದವನೇ ಕೃಷ್ಣಾ ನಾಯ್ಕ್. ನವಲೆ ಸಮೀಪದ ಕಾಲುವೆ ಬಳಿ ಐದನೇ ತರಗತಿಯ ದರ್ಶನ ಹಾಗೂ ಅನೀಷ್ ಆಟವಾಡ್ತಾ ಇದ್ದರು. ತಮ್ಮ ಮುಂದೆ ನೀರು ಹರಿಯುತ್ತಿರುವುದು ಇವರ ಮನಸ್ಸನ್ನು ಚಂಚಲ ಗೊಳಿಸಿತು. ಅಲ್ಲದೆ ತಮ್ಮ ಕಣ್ಣಿಗೆ ಕಂಡ ಟಿವಿ ಬೆಂಡಿನ ಸಹಾಯದಿಂದ ನೀರಿಗೆ ಇಳಿಯುವ ನಿರ್ಧಾರವನ್ನು ಮಾಡ್ತಾರೆ. ಬೆಂಡು ತಂದು ಅದರ ಮೇಲೆ ಇಬ್ಬರೂ ತೆಲುತ್ತಾ ಮುಂದೆ ಸಾಗುತ್ತಾ ಮೋಜು ಪಡುತ್ತಾರೆ. ಆದ್ರೆ ವಿಧಿ ಆಟವೇ ಬೆರೆಯದ್ದು. ಬೆಂಡು ಇವರ ಭಾರಕ್ಕೆ ಮುರಿಯುತ್ತದೆ, ಪರಿಣಾಮ ಇಬ್ಬರೂ ಜಾರಿ ಕಾಲುವೆಗೆ ಬೀಳುತ್ತಾರೆ.

source: publictv.in

ಈ ದೃಷ್ಯವನ್ನು ಸೈಕಲ್ನಲ್ಲಿ ಹೋಗುತ್ತಿದ್ದ ಕೃಷ್ಣ ನೋಡ್ತಾನೆ. ಅಲ್ದೆ ಆ ಪೋರರಿಗೆ ಬೆಂಡಿನ ಮೇಲೆ ಬರಲು ಸೂಚಿಸುತ್ತಾನೆ. ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ. ಲಘು ಬಗೆಯಿಂದ ಸೈಕಲ್ನಿಂದ ಇಳಿದ ಕೃಷ್ಣ ಹಿಂದು, ಮುಂದು ಯೋಚನೆ ಮಾಡದೆ ನೀರಿಗೆ ನೆಗೆಯುತ್ತಾನೆ. ನೀರಿನಲ್ಲಿ ಬಿದ್ದು ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದ ಇಬ್ಬರನ್ನು ಕಂಡು, ಆತ, ಇಬ್ಬರನ್ನೂ ದಡ ಮುಟ್ಟಿಸಲು ಮುಂದಾಗ್ತಾನೆ. ಅದ್ರಲ್ಲಿ ಒಬ್ಬರನ್ನು ದಡ ಮುಟ್ಟಿಸಿ ಇನ್ನೊಬರನ್ನು ಕರೆತರಲು ಮುಂದಾಗ್ತಾನೆ. ಆದ್ರೆ ಅನೀಷ್ನಿಗಾಗಿ ಎಷ್ಟು ಹುಡಕಿದ್ರೂ, ಆತ ಸಿಗೋದಿಲ್ಲ.

source: publictv.in

ನೀರಿನಲ್ಲಿ ಸಾವು ಬದುಕಿನ ಮಧ್ಯ ಹೊರಾಟ ನಡೆಸಿದ್ದ ಇಬ್ಬರನ್ನು ಕೃಷ್ಣ ನೋಡಿ, ಪ್ರಾಣದ ಹಂಗನ್ನು ತೊರೆದು ನೀರಿಗೆ ಜಿಗಿತಾನೆ. ಆಗ ದರ್ಶನ್ಗೆ ನನ್ನ ಕೈ ನೀನು ಹಿಡಿದುಕೋ, ಆನೀಷ್ ದರ್ಶನ್ ಕೈ ಹಿಡಿದುಕೊ ಎಂದು ಹೇಳ್ತಾನೆ. ಆದ್ರೆ ದಡ ಮುಟ್ಟುವ ಮುನ್ನವೇ ದರ್ಶನ್ ಕೈ ಬಿಡಿಸಿಕೊಂಡ ಅನೀಷ್ ನೀರು ಪಾಲಾಗಿದ್ದಾನೆ. ದರ್ಶನ್ ದಡ ಸೇರಿದ್ದಲದೆ, ಪ್ರಾಣ ಉಳಿಸಿಕೊಂಡಿದ್ದಾನೆ. ಅಂದಹಾಗೆ ಇಬ್ಬರನ್ನು ಉಳಿಸಲು ಹೋದ ಕೃಷ್ಣ ಹೀರೊ ಆಗಿ ಮಿಂಚುತ್ತಿದ್ದಾನೆ.