ಆಧಾರ್ ಕಾರ್ಡ್ ಅಡಿ ಶೀರ್ಷಿಕೆ ಬದಲಾವಣೆ….

0
672

ಈ ಹಿಂದೆ ಇದ್ದ ಆಮ್ ಆದ್ಮಿ ಟ್ಯಾಗ್ ಲೈನನ್ನು ತೆಗೆದು ಹಾಕಲಾಗಿದ್ದು “ಆಮ್ ಆದ್ಮಿಕ ಅಧಿಕಾರ್” ಎಂಬ ಹೆಸರನ್ನು “ಮೇರಾ ಆಧಾರ್, ಮೇರಿ ಪೆಹಚಾನ್” ಎಂದು ಬದಲಾಹಿಸಲಾಗಿದೆ. ಬಿ.ಜೆ.ಪಿಯ ವಕ್ತಾರೆ ಅಶ್ವಿನಿ ಉಪಾಧ್ಯಾಯ್ ಮತ್ತು ಅನೇಕರು ‘ಆಮ್ ಆದ್ಮಿ’ ಪದಗಳನ್ನು ಕೈ ಬಿಡುವಂತೆ ಸರ್ಕಾರಕ್ಕೆ ವಿನಂತಿಸಿದ್ದರು.

ವಿಶೇಷ ಗುರುತಿನ ಚೀಟಿ ಆಧಾರ್ ಕಾರ್ಡಿನ ಅಡಿ ಶೀರ್ಷಿಕೆಯನ್ನು ಬದಲಾಯಿಸಲಾಗಿರುವುದನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ ಇನ್ನು ಖಚಿತಪಡಿಸಿಲ್ಲದಿದ್ದರೂ ಮೂಲಗಳ ಪ್ರಕಾರ ಈ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ ಎನ್ನಲಾಗಿದೆ. ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಪಟ್ಟಿದ್ದು. ಪುರುಷ, ಮಹಿಳೆ, ಬಡವ, ಶ್ರೀಮಂತ ಎಂಬ ವ್ಯತ್ಯಾಸವಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಅಡಿ ಶೀರ್ಷಿಕೆ ಬದಲಿಸಬೇಕೆಂದು ಸೆಪ್ಟೆಂಬರ್ 19,2015ರಂದು ಪ್ರಧಾನಮಂತ್ರಿ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.