ಮದ್ಯ ಪ್ರಿಯರಿಗೆ ಬಿಗ್ ಶಾಕ್; ಸರಾಯಿ ಖರೀದಿಗೂ ಬೇಕು ಆಧಾರ್ ಕಾರ್ಡ್? ಏನಿದು ಹೊಸ ನಿಯಮ.?

0
432

ಆಧಾರ್ ಕಾರ್ಡ್ ಬಂದಾಗಿನಿಂದ ಬ್ಯಾಂಕ್, ಸ್ಕೂಲ್, ರೇಷನ್ ಕಾರ್ಡ್ ಸೇರಿದಂತೆ ಎಲ್ಲದಕ್ಕೂ ಅಧಾರ್ ಬೇಕಾಗಿದೆ. ಕೆಲವು ವ್ಯವಹಾರಗಳು ಕೂಡ ಇದರ ಮೇಲೆ ನಿಂತುಕೊಂಡಿದ್ದು, ಇನ್ನೂ ಆಧಾರ್ ಬಿಸಿ ಮದ್ಯ ಪ್ರಿಯರಿಗೆ ಮುಟ್ಟಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು. ಇನ್ಮುಂದೆ ನೇರವಾಗಿ ಮದ್ಯದ ಅಂಗಡಿಗೆ ಹೋಗಿ ಎಣ್ಣೆ ತೆಗೆದುಕೊಳ್ಳಲು ಕೂಡ ಆಧಾರ್ ಕಾರ್ಡ್ ಬೇಕಾಗುತ್ತೆ, ಎನ್ನುವುದು ವರದಿಯಲ್ಲಿ ತಿಳಿದಿದ್ದು ಅದರಂತೆ ಮದ್ಯ ಖರೀದಿಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ ಅಂತೆ.

ಸಾರಾಯಿ ಖರೀದಿಸಲು ಆಧಾರ್ ಕಡ್ಡಾಯ?

ಹೌದು ಇನ್ನು ಮುಂದೆ ಸೀದಾ ಮದ್ಯದಂಗಡಿಗೆ ಹೋಗಿ ದುಡ್ಡುಕೊಟ್ಟು ಮದ್ಯ ಖರೀದಿ ಮಾಡುವಂತಿಲ್ಲ. ನಿಮ್ಮ ಜೇಬಿನಲ್ಲಿ ಹಣದ ಜತೆಗೆ ಆಧಾರ್ ಕೂಡ ಇರಲೇಬೇಕು. ಎನ್ನುವುದು ಚರ್ಚೆಯಾಗುತ್ತಿದ್ದು ಸರ್ಕಾರ ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿದೆ. ಸದ್ಯ ಈ ಸಂಬಂಧ ಸರ್ಕಾರದ ನಿರ್ದೇಶನ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಇಲಾಖಾ ಆಯುಕ್ತರಿಗೆ ಪತ್ರ ಬರೆದು ಜಿಲ್ಲಾ ಕೇಂದ್ರಗಳಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಮಂಗಳೂರಿನ ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ’ವು ಮದ್ಯದ ಬಾಟಲಿಗಳನ್ನು ಎಸೆಯುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿತ್ತು. ಬಳಿಕ ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಟೆಟ್ರಾ ಪ್ಯಾಕ್ ಹಾಗೂ ಬಾಟಲಿಗಳಿಂದ ಆಗುತ್ತಿರುವ ಹಾನಿ ತಡೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿತ್ತು. ಅದರೊಂದಿಗೆ ಕೆಲವು ಶಿಫಾರಸುಗಳನ್ನು ನೀಡಿತ್ತು. ಅವುಗಳಲ್ಲಿ ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡುವುದೂ ಒಂದಾಗಿದೆ.

ಮದ್ಯ ಖರೀಧಿಸಲು ಆಧಾರ್ ಏಕೆ?

ಈ ನಿಯಮ ಯಾರು ಎಷ್ಟು ಮದ್ಯ ಸೇವಿಸುತ್ತಾರೆ, ಎಷ್ಟು ಖರೀದಿಸುತ್ತಾರೆ ಎನ್ನುವ ಲೆಕ್ಕಾಚಾರಕ್ಕೆ ಎನ್ನವುದಕ್ಕಲ್ಲ, ಬದಲಿಗೆ ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್ ಗಳಿಂದ ಉಂಟಾಗುತ್ತಿರುವ ಮಾಲೀನ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಬಲವಾಗಿದೆ. ಮದ್ಯದ ಟೆಟ್ರಾ ಪ್ಯಾಕ್‌ಗಳು ಮತ್ತು ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಕೆರೆಗಳು, ನದಿಗಳು, ಉದ್ಯಾನಗಳು, ರಸ್ತೆ ಬದಿ ಹೀಗೆ ಎಲ್ಲ ಕಡೆಯೂ ಮದ್ಯದ ಬಾಟಲಿಗಳು ಕಾಣಿಸುತ್ತಿವೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಲ್ಲದೆ, ಪ್ರಾಣಿಗಳಿಗೆ ಅಪಾಯ ತಂದೊಡ್ಡುತ್ತಿರುವ ಅನೇಕ ದೂರುಗಳು ಕೂಡ ಬಂದಿವೆ. ಹೀಗಾಗಿ ಅದನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸಲಹೆಯಲ್ಲಿ ಏನಿದೆ?

ಮದ್ಯ ಬಾಟಲಿಗೆ ಆಧಾರ್ ಕಡ್ಡಾಯ ಮಾಡಿದರೆ ಖರೀದಿದಾರರಲ್ಲಿ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಪ್ರಜ್ಞೆ ಮೂಡಬಹುದು. ಖರೀದಿದಾರರ ವಿವರಗಳು ಸರ್ಕಾರಕ್ಕೆ ಲಭ್ಯವಾಗಲಿದೆ. ಈ ಮೊದಲು ಖರೀದಿ ಮಾಡಿದ ಬಾಟಲಿಯನ್ನು ವಾಪಸ್ ತಂದುಕೊಟ್ಟರೆ ಮಾತ್ರ ಹೊಸ ಬಾಟಲಿ ನೀಡುವ ನಿಯಮ ಜಾರಿಗೆ ಸಹ ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲದೆ ಮದ್ಯದಂಗಡಿಯವರು ಮದ್ಯ ಮಾರಾಟ ಮಾಡುವ ಮೊದಲು ವ್ಯಕ್ತಿಯ ಆಧಾರ್ ಪಡೆದು ಕಂಪ್ಯೂಟರ್‌ನಲ್ಲಿ ಮಾಹಿತಿ ದಾಖಲಿಸಬೇಕು. ಎಲ್ಲೆಂದರಲ್ಲಿ ಮದ್ಯದ ಬಾಟಲಿ ಬಿದ್ದಿದ್ದರೆ, ಅವುಗಳ ಬಾರ್ ಕೋಡ್ ಸ್ಕ್ಯಾನ್ ಮಾಡಬೇಕು. ಬಾಟಲಿಯನ್ನು ಮಾರಾಟ ಮಾಡಿದ ಅಂಗಡಿಗೆ ದಂಡ ವಿಧಿಸಬೇಕು. ಅವರ ಪರವಾನಗಿ ರದ್ದುಗೊಳಿಸಬೇಕು. ಎಂದು ತಿಳಿಸಿದ್ದಾರೆ.

Also read: ತಂಬಾಕು ಗುಟ್ಕಾ ಪ್ರಿಯರಿಗೆ ಬಿಗ್ ಶಾಕ್; ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್.!