ಡ್ರೈವಿಂಗ್ ಲೈಸೆನ್ಸ್ಗೂ ತಟ್ಟಿದ ಆಧಾರ್ ಕಾರ್ಡ್ ಬಿಸಿ; ​ ಕೇಂದ್ರದಿಂದ ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ನಿಯಮ..

0
357

ಆಧಾರ್ ಕಾರ್ಡ್ ಬಂದಾಗಿನಿಂದ ಏನೆಲ್ಲ ಬದಲಾವಣೆ ಕಂಡು ಬರುತ್ತಿದೆ. ಅದೇರೀತಿ ರೇಷನ್ ಕಾರ್ಡ್, ಶಾಲಾ ದಾಖಲಾತಿ, ಸೇರಿದಂತೆ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಜೋಡಣೆ ಮುಖ್ಯವಾಗಿದೆ. ಈ ವಿಷಯವಾಗಿ ಸ್ವಲ್ಪ ದಿನಗಳ ಹಿಂದೆ ವಿವಾದ ಕೇಳಿಬಂದು ನಂತರ ಸಿಮ್ ಕಾರ್ಡ್ ಶಾಲಾ ದಾಖಲಾತಿ ಇತರೆ ಕೆಲವೊಂದಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ಕೇಳಿಬಂತು. ಮತ್ತೆ ಈಗ ಆಧಾರ್ ಕಾರ್ಡ್ ಜೋಡಣೆಗೆ ಸಂಬಂಧಪಟ್ಟಂತೆ ಹೊಸ ಸುದ್ದಿ ಕೇಳಿ ಬರುತ್ತಿದ್ದು. ಬಂದಿದ್ದು ಚಾಲನಾ ಪರವಾನಗಿ (Driving License) ಗೂ ಆಧಾರ್ ಜೋಡಣೆ ಮಾಡಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ ಅಂತೆ.

Also read: ಇನ್ಮೇಲಿಂದ ಜ್ಯೋತಿ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗು ಅವರ ಕುಟುಂಬದವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು!!

ಹೌದು ಚಾಲನಾ ಪರವಾನಗಿಯೊಂದಿಗೆ ಆಧಾರ್ ಕಾರ್ಡ್​​ ಜೋಡಣೆ ಕಡ್ಡಾಯಗೊಳಿಸುವ ಹೊಸ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಪಂಜಾಬ್​ನಲ್ಲಿ ನಡೆದ 106ನೇ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್​ ಹೊಸ ಕಾನೂನಿನ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ನೂತನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಅಂಗೀಕಾರಕ್ಕೆ ಕಾಯುತ್ತಿರುವುದಾಗಿ ಸಚಿವರು ಹೇಳಿದ್ದಾರೆ. ಈ ಬಿಲ್​ ಪಾಸಾದರೆ ವಾಹನ ಚಾಲಕರು ತಮ್ಮ ಡ್ರೈವಿಂಗ್ ಲೈಸನ್ಸ್​ನ್ನು ಆಧಾರ್​ನೊಂದಿಗೆ ಲಿಂಕ್​ ಮಾಡುವುದು ಕಡ್ಡಾಯವಾಗಲಿದೆ. ಎಂದು ತಿಳಿಸಿದ್ದಾರೆ.

ಮುಖ್ಯ ಉದ್ದೇಶವೇನು?

ನಕಲಿಯಾಗಿ ಚಾಲನಾ ಪರವಾನಿಗೆ ಪತ್ತೆಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದೆ ಎಂದು ತಿಳಿದಿದ್ದು, ಒಬ್ಬರೇ ಹಲವು ಚಾಲನಾ ಪರ ವಾನಗಿ (ಡ್ರೈವಿಂಗ್ ಲೈಸೆನ್ಸ್- ಡಿ ಎಲ್) ಹೊಂದುವುದು ಹಾಗೂ ನಕಲಿ ಡಿಎಲ್ ಹಾವಳಿಯನ್ನು ಮಟ್ಟ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಚಾಲನಾ ಪರವಾನಗಿಯನ್ನು ಆಧಾರ್ ಜತೆ ಜೋಡಣೆ ಮಾಡಲು ಮುಂದಾಗಿದೆ. ಏಕೆಂದರೆ ಟ್ರಾಫಿಕ್ ನಿಯಮ ಉಲ್ಲಂಘನೆ, ಅಪಘಾತದ ಬಳಿಕ ಹಲವರು ಲೈಸನ್ಸ್​ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಕಲಿ ಪರವಾನಗಿಯನ್ನು ಪಡೆದು ವಾಹನವನ್ನು ಚಲಾಯಿಸುತ್ತಿದ್ದಾರೆ. ಆದರೆ ಹೊಸ ನಿಯಮದ ಜಾರಿಯಿಂದ ಲೈಸನ್ಸ್​ನಲ್ಲಿ ಹೆಸರು ಬದಲಿಸಬಹುದೇ ಹೊರತು ಬಯೋಮೆಟ್ರಿಕ್ಸ್ ಮಾಹಿತಿ ಬದಲಿಸಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಡಿಎಲ್ ಕಳ್ಳಾಟ ಬಂದ್?

ಲೈಸನ್ಸ್​ ಜೊತೆ ಆಧಾರ್ ಜೋಡಣೆಯಾದರೆ ಚಾಲಕರ ಸಂಪೂರ್ಣ ಮಾಹಿತಿಯು ಲಭ್ಯವಾಗಲಿದ್ದು, ಇದರಿಂದ ನಕಲಿ ಲೈಸನ್ಸ್​ಗಳನ್ನು ನಾಶ ಪಡಿಸಲು ಸಾಧ್ಯವಾಗುತ್ತದೆ. ಅಲ್ಲದೆ ಈ ಮಾಹಿತಿಯಿಂದ ಕ್ರಮಕೈಗೊಳ್ಳಲು ಹೊಸ ನಿಯಮದಿಂದ ಟ್ರಾಫಿಕ್ ಪೊಲೀಸರಿಗೂ ಅನುಕೂಲವಾಗಲಿದೆ ಅಂತೆ. ಈಗಿರುವ ವ್ಯವಸ್ಥೆಯಿಂದ ವ್ಯಕ್ತಿ ಒಂದು ಸ್ಥಳದಲ್ಲಿ ಅಪಘಾತ ಮಾಡಿ ನಂತರ ಬೇರೊಂದು ಸ್ಥಳಕ್ಕೆ ಹೋಗಿ ಬದಲಿ ವಿಳಾಸ ನೀಡಿ ನಕಲಿ ಡಿಎಲ್ ಪಡೆಯಬಹುದು ಅಂದೆ ಕಾರಣಕ್ಕೆ ಆಧಾರ್ ಲಿಂಕ್ ಮಾಡಿದರೆ. ನಕಲಿ ಅಥವಾ ಡ್ಯುಪ್ಲಿಕೇಟ್ ಡಿ.ಎಲ್. ಹಾವಳಿ ತಪ್ಪಲಿದೆ. ಜತೆಗೆ ಸಂಚಾರ ನಿಯಮ ಉಲ್ಲಂಘಿಸಿ ಎಷ್ಟು ದಂಡ ಬಾಕಿ ಉಳಿಸಿಕೊಂಡಿದ್ದೀರಿ ಎಂಬ ದಾಖಲೆ ಸಿಗುತ್ತದೆ ಆದಕಾರಣಕ್ಕೆ ಬಯೋಮೆಟ್ರಿಕ್ಸ್ ವ್ಯವಸ್ಥೆ ಬಹುಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.