ಆಧಾರ್-ಅನ್ನು ಇನ್ನೂ ಲಿಂಕ್ ಮಾಡಿಲ್ಲ ಅಂದ್ರೆ ಪರ್ವಾಗಿಲ್ಲ. ಲಿಂಕ್ ಮಾಡುವ ಗಡುವನ್ನು ಹೆಚ್ಚಿಸಿದೆ ಸರ್ಕಾರ…

0
430

ಆಧಾರ್ ಲಿಂಕ್ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ವಿವಿಧ ಸೇವೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರಕಾರ ಆದೇಶಿಸಿರುವುದು ಗೊತ್ತೇ ಇದೆ. ಆಯಾ ಸೇವೆಗಳನ್ನು ಪಡೆಯಬೇಕಾದರೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು. ಸದ್ಯಕ್ಕೆ ಆರು ಸೇವೆಗಳಿಗೆ ಕೇಂದ್ರ ನಿರ್ಧರಿಸಿರುವ ಆಧಾರ್ ಲಿಂಕ್ ಗಡುವನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಅಂದರೆ ಇದೇ ವರ್ಷ ಡಿಸೆಂಬರ್ 31ಕ್ಕೆ ಇದ್ದ ಗಡುವನ್ನು 2018ರ ಮಾರ್ಚ್ 31ರ ತನಕ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುವುದಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯ.

ಇದನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಗೌಪ್ಯತೆಗೆ ಧಕ್ಕೆ ಬರುತ್ತದೆ ಎಂಬ ಆರೋಪವೂ ಇದೆ. ಈ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಕೇಂದ್ರದ ಪರ ವಾದ ಮಂಡಿಸುತ್ತಿರುವ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, 2018ರ ಮಾರ್ಚ್ 31ರ ತನಕ ಆಧಾರ್ ಕಾರ್ಡ್ ಲಿಂಕ್ ಮಾಡಲು ಗಡುವು ವಿಸ್ತರಿಸಿರುವುಜಾಗಿ ತಿಳಿಸಿದರು. ಈ ಸಂಬಂಧ ನಾಳೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಲಿದೆ.

ಬ್ಯಾಂಕಿಂಗ್, ಮೊಬೈಲ್ ಸಿಮ್, ಪ್ಯಾನ್ ಕಾರ್ಡ್, ಪಿಪಿಎಫ್ ಹೀಗೆ ಜನಸಾಮಾನ್ಯರು ವ್ಯಾಪಕವಾಗಿ ಬಳಕೆ ಮಾಡುವ ಬಹುತೇಕ ಸೇವೆಗಳಿಗೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುತ್ತಿದೆ. ಈ ವಿವಿಧ ಯೋಜನೆ ಮತ್ತು ಸೇವೆಗಳಿಗೆ ಆಧಾರ್ ಲಿಂಕ್ ಮಾಡಬೇಕೆಂಬ ಸರ್ಕಾರ ಆದೇಶಕ್ಕೆ ತಡೆಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗಾಗಿ ಮುಂದಿನ ವಾರ ಪ್ರತ್ಯೇಕ ಪೀಠ ರಚನೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಸೊಚನೆ: ಸುಪ್ರೀಂ ಕೋರ್ಟ್ ಆದೇಶದಂತೆ ನಿಮ್ಮ ಮೊಬೈಲ್ ನಂಬರ್ ಗೆ ಫೆಬ್ರವರಿ 6ರೊಳಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಆ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸುತ್ತಿಲ್ಲ.
ಮೊಬೈಲ್ ನೊಂದಿಗೆ ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಲು 2018 ರ ಫೆ.6 ವರೆಗೆ ಕಾಲಾವಕಾಶ ಇದೆ.