ಆಧಾರ್ ಮೊಬೈಲ್ ನಂಬರ್-ಗೆ ಜೋಡಣೆ ಮಾಡಲು ಮಾ.31, 2017 ಕೊನೆ ದಿನ, ಇದನ್ನು ಬಳಸಿ ನೀವು ಎಲ್ಲಿಂದ ಬೇಕಾದರೂ, ಆಧಾರ್ ಲಿಂಕ್ ಮಾಡಬಹುದಂತೆ.

0
748

ಸರ್ಕಾರ ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಮಾರ್ಚ್ 31, 2017 ಕೊನೆ ದಿನವಾಗಿದೆ. ಮೊಬೈಲ್ ನಂಬರ್-ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಯೋಜನೆ ನಡೆಯುತ್ತಿದ್ದರೂ, ಬಹಳಷ್ಟು ಜನರಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ, ಇದಕ್ಕಾಗಿಯೇ ಸರ್ಕಾರ ಒಂದು ನೂತನ ಹಾಗು ಸುಲಭ ಯೋಜನೆಯನ್ನು ಜಾರಿ ಮಾಡುತ್ತಿದೆ, ಅದನ್ನು ಬಳಸಿ ನೀವು ಎಲ್ಲಿಂದ ಬೇಕಾದರೂ ಆಧಾರ್ ಲಿಂಕ್ ಮಾಡಬಹುದಾಗಿದೆ. ಯಾವುದು ಆ ಯೋಜನೆ ಅಂತೀರ, ನೀವೇ ನೋಡಿ.

ಸರ್ಕಾರದ ಕೆಲ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಮಾರ್ಚ್ 31ರ ಒಳಗಾಗಿ ಜೋಡಣೆ ಮಾಡಬೇಕು ಎಂದಿದೆ. ಅದರಲ್ಲಿ ಪ್ರಮುಖವಾದವು ಬ್ಯಾಂಕ್ ಖಾತೆ, ಪಾನ್ ಕಾರ್ಡ್, ವಿಮೆ , ಮ್ಯೂಚುವಲ್ ಫಂಡ್, ಎಲ್ಪಿಜಿ ಸಬ್ಸಿಡಿ, ವಿದ್ಯಾರ್ಥಿವೇತನ, ಚಲನ ಪರವಾನಗಿ, ಪಿಂಚಣಿ ಸೌಲಭ್ಯ, ಪಡಿತರ ಅಥವಾ ರೇಷನ್ ಕಾರ್ಡ್, ಮತ್ತು ಪೋಸ್ಟ್ ಆಫೀಸ್ ಯೋಜನೆಗಳು, ಇದರಲ್ಲಿ ಪಾನ್ ಕಾರ್ಡ್ ಗಾಗಿ ಹೆಚ್ಚಿನ ಸಮಯ ನೀಡುವುದಾಗಿ ಸರ್ಕಾರ ಹೇಳಿದೆ.

ಈ ಯೋಜನೆ ಜಾರಿಗೂ ಮುನ್ನ ಜನರು, ಕಂಪನಿಗಳ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮೊಬೈಲ್ ನಂಬರ್-ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕಾಗಿತ್ತು, ತಾಂತ್ರಿಕ ತೊಂದರೆಗಳಿಂದಾಗಿ ಸೇವಾ ಕೇಂದ್ರಗಳಲ್ಲಿ ಕೆಲವೊಮ್ಮೆ ತಡವಾಗುತ್ತಿತು, ಕೆಲವೊಮ್ಮೆ ಅಂತು ಸರ್ವರ್ ಡೌನ್ ಅಂತಹ ಸಮಸ್ಯೆಯಿಂದ ಆಧಾರ್ ಲಿಂಕ್ ಆಗುತ್ತಿರಲಿಲ್ಲ.

ಬರುವ ವರ್ಷ ಅಂದರೆ, ಜನವರಿ 1, 2018ರಿಂದ OTP (one time password) ಮೂಲಕ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬಹುದಾಗಿದೆ. one time password ನಿಮ್ಮ ಮೊಬೈಲ್ ನಂಬರ್- ಗೆ ಬರುತ್ತದೆ. ಈ ಯೋಜನೆ, ಧ್ವನಿ ನಿರ್ದೇಶಿತ ವ್ಯವಸ್ಥೆಯಡಿ ಮೊಬೈಲ್ ನಿಂದ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ, ಇದರಿಂದ ಜನರ ಸಮಸ್ಯೆ ಮತ್ತು ಸಮಯ ಎರಡೂ ಉಳಿದಂತಾಗುತ್ತದೆ.

ಒಟ್ಟಿನಲ್ಲಿ ಸರ್ಕಾರದ ಈ ಯೋಜನೆಗೆ ಜನ ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕು…!