ನಾನು ಹುಟ್ಟಿದು Bombay , ಬೆಳೆದಿದ್ದು Delhi , ಆದರೆ ಕನ್ನಡ ಅಂದರೆ ನನಗೆ ಇಷ್ಟ , ನಾನು ಕನ್ನಡತಿ

0
2614

“ನಾನು ಹುಟ್ಟಿದು Bombay , ಬೆಳೆದಿದ್ದು Delhi , ಆದರೆ ಕನ್ನಡ ಅಂದರೆ ನನಗೆ ಇಷ್ಟ , ನಾನು ಕನ್ನಡತಿ”

–ಆದ್ಯ

ಇದು Zee ಕನ್ನಡ ಸರಿಗಮಪ ಸೀಸನ್ 12 ನಲ್ಲಿ ಹಾಡಿದ ಆದ್ಯ ಮೋಡಿ.

“ಹಾಡಾದರೆ ನಾನು ಆದ್ಯ ಬೈಯಲ್ಲಿ ಇರುವೆ”

–ಅರ್ಜುನ್ ಜನ್ಯ

“ಇವಳು ಕನ್ನಡ ವಿವಿಧ ಭಾರತೀ”

–ಹಂಸಲೇಖ

ಆದ್ಯ ಹಾಡಿದ ಆ ಹಾಡು

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಮುದ್ದು ಮುದ್ದು ಕಂದ ಕನ್ನಡದ ಕಂದ
ತವರಿಗೆ ಇಂದು ಪ್ರೀತಿಯ ತಂದ ।। ಪಲ್ಲವಿ ।।

ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಬೆರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ಮುದ್ದು ಮುದ್ದು ಕಂದ ಕನ್ನಡದ ಕಂದ
ತವರಿಗೆ ಇಂದು ಪ್ರೀತಿಯ ತಂದ ।। ೧ ।।

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವನ ಕರದಲಿ ಮೆರೆವೆ
ಬಲವಾದರೆ ನಾನು ಓಬವ್ವನ ಒನಕೆಯ ಬೆರೆವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಮುದ್ದು ಮುದ್ದು ಕಂದ ಕನ್ನಡದ ಕಂದ
ತವರಿಗೆ ಇಂದು ಪ್ರೀತಿಯ ತಂದ ।। ೨ ।।
14650300_677654182408565_2334186162381289295_n

ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!

ಹೀಗೆ ಹಾಡುತಿದ್ದರೆ ಆದ್ಯ Zee ಕನ್ನಡ ಡಾ ಸರಿಗಮಪ ಸೀಸನ್ 12 ನಲ್ಲಿ ಗೆಲ್ಲುವುದು ನಿಶ್ಚಿತ .

ನಿಮಗೆ ಶುಭವಾಗಲಿ ಆದ್ಯ