ಬಿಸಿ ಬಿಸಿ ಆಲೂ-ಬ್ರೆಡ್ ರೋಲ್‌ ಮಾಡುವ ವಿಧಾನ

0
1300

ಹೆಚ್ಚಾಗಿ, ಜನರು ಚಳಿಗಾಲದಲ್ಲಿ ಸಂಜೆ ಸಮಯದಲ್ಲಿ ಅಥವಾ ಮಳೆಗಾಲದಲ್ಲಿ ಬ್ರೆಡ್ ರೋಲ್ ನ್ನು ತಿನ್ನಲು ಬಯಸುತ್ತಾರೆ. ಚಹಾ ಕುಡಿಯುವಾಗ, ಬ್ರೆಡ್ ರೋಲ್ ನ್ನು ತಿನ್ನವುದು ಸಾಮಾನ್ಯವಾಗಿದೆ. ಅದರಲ್ಲೂ ಆಲೂ ಬ್ರೆಡ್ ರೋಲ್ ತುಂಬಾ ರುಚಿಕರವಾದ ಮತ್ತು ತಯಾರಿಸಲು ತುಂಬಾ ಸುಲಭವಾದ ರೆಸಿಪಿ. ಆಲೂಗಡ್ಡೆ, ಬೇಯಿಸಿದ ಬಟಾಣಿ ಮತ್ತು ಬ್ರೆಡ್‌ಗಳನ್ನು ಜೊತೆಯಾಗಿಸಿದಾಗ ಇದರ ರುಚಿ ಮತ್ತು ಕುರುಕು ಎಲ್ಲರ ಮನ ಗೆಲ್ಲುತ್ತದೆ.

Image result for aloo bread roll

ಅಗತ್ಯವಿರುವ ಸಾಮಗ್ರಿಗಳು

 • ಆಲೂಗಡ್ಡೆ – 3 (ಮಧ್ಯಮ ಗಾತ್ರ)
 • ಹಸಿರು ಬಟಾಣಿ – 1 ಕಪ್ (ನೀರಿನಲ್ಲಿ ನೆನೆಸಿಟ್ಟಿದ್ದು, ಅಥವಾ ಫ್ರೋಜನ್ ಸಹಾ ಆಗಬಹುದು)
 • ಈರುಳ್ಳಿ- 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
 • ಬಿಳಿಯ ಬ್ರೆಡ್ ಹೋಳುಗಳು (slice) – 8 ರಿಂದ 10
 • ಹಸಿಮೆಣಸು – 3 ರಿಂದ 4
 • ಕೊತ್ತೊಂಬರಿ ಪುಡಿ – 1/2 ಚಿಕ್ಕ ಚಮಚ
 • ಉಪ್ಪು: ರುಚಿಗನುಸಾರ
 • ಎಣ್ಣೆ: ಹುರಿಯಲು ಅಗತ್ಯವಿರುವಷ್ಟು

ಮಾಡುವ ವಿಧಾನ:

 1. ಮೊದಲು ಆಲೂಗಡ್ಡೆ ಮತ್ತು ಬಟಾಣಿಗಳನ್ನು ಕೊಂಚ ನೀರಿನಲ್ಲಿ ಪ್ರೆಷರ್ ಕುಕ್ಕರಿನಲ್ಲಿ ಎರಡರಿಂದ ಮೂರು ಸೀಟಿ ಬರುವವರೆಗೆ ಬೇಯಿಸಿ.
 2. ಬಳಿಕ ಮುಚ್ಚಳವನ್ನು ತಣಿಸಿ ತೆರೆದು ಹೆಚ್ಚಿನ ನೀರನ್ನು ಬಸಿಯಿರಿ. ಆಲುಗಡ್ಡೆಗಳ ಸಿಪ್ಪೆ ಸುಲಿದು ಒಂದು ತಟ್ಟೆಯಲ್ಲಿಟ್ಟು ಚಮಚವೊಂದರಿಂದ ಜಜ್ಜಿ ಹರಡಿ. ಇನ್ನೊಂದು ತಟ್ಟೆಯಲ್ಲಿ ಬಟಾಣಿಗಳನ್ನು ಹರಡಿ.
 3. ಇದೇ ಹೊತ್ತಿನಲ್ಲಿ ಇನ್ನೊಂದು ಒಲೆಯಲ್ಲಿ ಬಾಣಲೆಯೊಂದರಲ್ಲಿ ಕೊಂಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಇದಕ್ಕೆ ಈರುಳ್ಳಿ, ಹಸಿಮೆಣಸು ಹಾಕಿ ಕೊಂಚ ಹುರಿಯಿರಿ. ಈರುಳ್ಳಿ ಕೊಂಚ ಕಂದು ಬಣ್ಣ ಬರುತ್ತಿದ್ದಂತೆಯೇ ಧನಿಯ ಪುಡಿ ಅಥವಾ ಕೊತ್ತಂಬರಿ ಪೌಡರ್ ಹಾಕಿ ಇನ್ನಷ್ಟು ಬಾಡಿಸಿ.
 4. ಇದಕ್ಕೆ ಬೇಯಿಸಿದ ಬಟಾಣಿ ಹಾಕಿ ಕೊಂಚ ಕಾಲ ಹುರಿಯಿರಿ. ಬಟಾಟಿ ಕಾಳುಗಳು ಕೊಂಚ ಹುರಿದ ಬಳಿಕ ಜಜ್ಜಿದ ಆಲುಗಡ್ಡೆಯನ್ನು ಹಾಕಿ ಕೊಂಚ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉರಿ ಆರಿಸಿ ಬಾಣಲೆಯನ್ನು ಪಕ್ಕದಲ್ಲಿಡಿ.
 5. ಈಗ ಬ್ರೆಡ್‌ನ ಹೋಳುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ ನೀರು ಹೀರಿಕೊಳ್ಳುವಂತೆ ಮಾಡಿ. ಬಳೀಕ ಈ ಹೋಳನ್ನು ಎರಡು ಕೈಗಳ ನಡುವೆ ಇರಿಸಿ ಒತ್ತಿ ನೀರನ್ನು ಬಸಿಯಿರಿ.
 6. ಬಾಣಲೆಯಲ್ಲಿದ್ದ ಆಲುಗಡ್ಡೆ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳಾಗಿಸಿ. ದೊಡ್ಡ ಲಿಂಬೆಹಣ್ಣಿಗಿಂತಲೂ ಕೊಂಚ ದೊಡ್ಡದಾಗಿರಲಿ.
 7. ಈ ಉಂಡೆಯನ್ನು ಬ್ರೆಡ್ ಹೋಳಿನ ನಡುವೆ ಇಟ್ಟು ಅಂಚುಗಳನ್ನು ಈ ಉಂಡೆಯ ಮೇಲೆ ಆವರಿಸುವಂತೆ ಮಾಡಿ.
 8. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ಉಂಡೆಯನ್ನು ಮಧ್ಯಮ ಉರಿಯಲ್ಲಿ ಕರಿಯಿರಿ.
 9. ಎಲ್ಲಾ ಉಂಡೆಗಳನ್ನು ಹೀಗೇ ಕಂದು ಬಣ್ಣ ಬರುವವರೆಗೆ ಕರಿಯಿರಿ.
 10. Image result for aloo bread roll

ಬಿಸಿ ಆಲೂ-ಬ್ರೆಡ್ ರೋಲ್‌ ಜೊತೆಗೆ ಟೊಮೇಟೊ ಸಾಸ್, ಕೆಚಪ್, ಚಟ್ನಿ ಮೊದಲಾದವುಗಳೊಂದಿಗೆ ಸವಿಯಲು ಸಿದ್ದ.