ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಸಾವಿನ ವಿಚಾರದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಒಳಗಾದ ರಾಜ್ಯದ ನಂಬರ್ ಒನ್ ವಾಹಿನಿ tv9…!

0
4985

ಹೌದು ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವಿನ ವಿಚಾರವಾಗಿ ನಮ್ಮ ಕನ್ನಡ ಮಾಧ್ಯಮಗಳಲ್ಲಿ ಹಲುವು ರೀತಿಯ ವಿಚಾರಗಳು ಚರ್ಚೆಗೆ ಬಂದಿವೆ ಮತ್ತು ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೈಗೆತ್ತಿಕೊಂಡಿದೆ. ಪೊಲೀಸ್ ಇಲಾಖೆ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಬೆನ್ನಿಗೆ ಇದೀಗ ಮಕ್ಕಳ ಹಕ್ಕುಗಳ ಆಯೋಗವೂ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಆಳ್ವಾಸ್ ಕಾಲೇಜ್ ವಿದ್ಯಾರ್ಥಿನಿ ನಿಗೂಢ ಸಾವಿನ ಸುತ್ತ ‘ಅನುಮಾನ’ದ ಹುತ್ತ ಇರುವುದು ಎಲ್ಲರಿಗು ಗೊತ್ತಿರುವ ವಿಚಾರವಾಗಿದೆ. ಮಾಧ್ಯಮಗಳಲ್ಲಿ ಕಾವ್ಯ ನಿಗೂಢ ಸಾವಿನ ಕುರಿತು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಗಂಭೀರ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿ ರಾಜೇಂದ್ರ ಅವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ.

ಈ ಮದ್ಯೆ ನಮ್ಮ ಮಾಧ್ಯಮಗಳನ್ನು ಎಷ್ಟು ನಂಬಬೇಕು ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತಿದ್ದೆ ಯಾಕೆ ಅಂದ್ರೆ
ಆಗಸ್ಟ್ 8 ಸಂಜೆ 3.30ಕ್ಕೆ ‘ಕಾವ್ಯ ಸೀಕ್ರೆಟ್ ಡೆತ್’ ಎಂಬ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬುದಾಗಿ TV9 ಘೋಷಿಸಿತ್ತು. ಅದರ ಪ್ರಕಾರ 3.30ಕ್ಕೆ ಕಾರ್ಯಕ್ರಮ ಆರಂಭವಾಯಿತು ಕೂಡ. ಆದರೆ, 5 ನಿಮಿಷದ ಕಾರ್ಯಕ್ರಮ ಪ್ರಸಾರವಾಗಿತ್ತಷ್ಟೆ. ಕಾರ್ಯಕ್ರಮ ವಸ್ತುನಿಷ್ಠವಾಗಿಯೇ ನಡೆದಿತ್ತು. ಡಿಢೀರನೆ ಕಾರ್ಯಕ್ರಮ ನಿರ್ವಾಹಕರು ಘೋಷಿಸಿದರು- ಸಣ್ಣ ವಿರಾಮದ ಬಳಿಕ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಒಂದು ಬ್ರೇಕ್ ತೆಗೆದುಕೊಳ್ಳಲಾಗಿತ್ತು.

ಆದರೆ ಬ್ರೇಕ್ ಮುಗಿದ ಮೇಲೆ ಎಲ್ಲಾ ವೀಕ್ಷಕರಲ್ಲೂ ಆಶ್ಚರ್ಯ ಕಾರಣವೆಂದರೆ ವಿರಾಮದ ಬಳಿಕ ಬೇರೆಯೇ ಕಾರ್ಯಕ್ರಮವನ್ನು ಅವರು ಪ್ರಸಾರ ಮಾಡಿದರು. ಕಾವ್ಯ ಸಾವಿನ ಕಾರ್ಯಕ್ರಮ ಮತ್ತೆ ಮುಂದುವರಿಯಲಿಲ್ಲ ವೀಕ್ಷಣೆಗಾಗಿ ಕಾಯುತಿದ್ದ ಪ್ರೇಕ್ಷಕರು ನಿರಾಶೆಗೊಂಡರು.

ಈ ರೀತಿಯಾಗಿ ಒಂದು ಕಾರ್ಯಕ್ರಮ ಕೇವಲ ಐದು ನಿಮಿಷದಲ್ಲಿ ಮುಗಿಯಲು ಕಾರಣವೇನು ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ ಮತ್ತು ಈ ರೀತಿ ಕಾರ್ಯಕ್ರಮ ಮುಗಿಯಲು ಕಾಣದ ಕೈಗಳು ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಒಬ್ಬ ವಿದ್ಯಾರ್ಥಿನಿ ಸಾವಿನ ವಿಚಾರದಲ್ಲಿ tv9 ತನ್ನ ಲಾಭ ಮಾಡಿಕೊಳತ್ತಾ ಅನ್ನೋದು ಎಲ್ಲಾರ ಪ್ರಶ್ನೆಯಾಗಿದೆ ಇದಕ್ಕೆ tv9 ಉತ್ತರ ನೀಡಲೇಬೇಕು.