ಮನಸ್ಸು, ಆತ್ಮ, ಅಂತರಾತ್ಮ; ಆಧ್ಯಾತ್ಮಿಕ ಜಗತ್ತಿನ ಒಂದು ಪರಿಚಯ!!!

0
1202

ಆತ್ಮದ ಸ್ವಭಾವ
ಆತ್ಮದಲ್ಲಿ ಪಂಚೇಂದ್ರಿಯಗಳು ಮತ್ತು ಆಂತರ್ಯದ ನಾಲ್ಕು ಅಂಶಗಳಾದ ಮನಸ್ಸು, ಬುದ್ಧಿ, ಸ್ಮೃತಿ ಮತ್ತು ಅಹಂಕಾರಗಳು ಈ ನಾಲ್ಕು ವಿಕಾರಗಳಿರುವುದಿಲ್ಲ. ವಿಸ್ತಾರ-ಪ್ರಸರಣ. ಪ್ರಸರಣ, ವಿಸ್ತರಣೆ ಎಂದರೆ ಯಾವುದರೊಳಗೋ ವಿಸ್ತಾರವಾಗಬೇಕು. ಯಾವುದು ಪ್ರಸರಣವಾಗುವುದಿಲ್ಲವೋ ಅದು ವಿಸ್ತಾರವಾಗುವುದರ ಆಧಾರವಾಗಿರಲು ಸಾಧ್ಯವಿಲ್ಲ.

Related image
ಸಂಕುಚಿತವಾಗುವಿಕೆ-ಅಕುಂಚನ : ಅಕುಂಚನ ಎಂದರೆ ಯಾವುದೋ ಒಂದು, ಯಾವುದರಿಂದಲೋ ಸಂಕುಚಿತವಾಗುವುದು. ಆತ್ಮವು ತನ್ನನ್ನು ಹಿಂದೆಗೆದುಕೊಳ್ಳುವುದಿಲ್ಲ ಅಥವಾ ಯಾವುದರಿಂದಲೋ ಸಂಕುಚಿತವಾಗುವುದಿಲ್ಲ. ಆದ್ದರಿಂದ ಅಕುಂಚನವು ಆತ್ಮದಲ್ಲಿಲ್ಲ.
ವೃದ್ಧಿ, ವಿಕಸನವೆಂದರೆ, ನಾವಿನ್ನೂ ಯಾವುದು ಆಗಿಲ್ಲವೋ ಅದಾಗುವುದು. ಆತ್ಮವು ಸದಾ ಒಂದೇ ರೀತಿಯಾಗಿರುತ್ತದೆ. ಆದ್ದರಿಂದ ಅದು ವೃದ್ಧಿಯಾಗಲು ಸಾಧ್ಯವಿಲ್ಲ.

 

ಕ್ಷಯ, ಆತ್ಮವು ಕೊಳೆಯುವುದಿಲ್ಲ, ಕ್ಷಯವಾಗುವುದಿಲ್ಲ; ಅದಕ್ಕೆ ಮುದಿತನವಿಲ್ಲ ಮತ್ತು ಅದು ಹಳತಾಗುವುದಿಲ್ಲ. ಆದ್ದರಿಂದಲೇ, ನಿಮ್ಮ ಆತ್ಮಕ್ಕೆ ನೀವು ಸಮೀಪವಾದಾಗ ನಿಮಗೆ ವಯಸ್ಸಾಗುತ್ತಿದೆಯೆಂದು ನಿಮಗೆ ಅನಿಸುವುದಿಲ್ಲ.ಅನಾದಿ, ಆರಂಭವಿಲ್ಲದ್ದು. ಆತ್ಮವು ಅನಾದಿಯಾದದ್ದು. ಭಗವಂತನಿಗೆ ಆದಿಯೆಂಬುದು ಇದ್ದರೆ ಅವನು ಭಗವಂತನಾಗಲು ಸಾಧ್ಯವಿಲ್ಲ.

ಅಭಾವ ಆತ್ಮದಲ್ಲಿ ಅಭಾವವಿಲ್ಲ. ಯಾವುದಾದರೂ ಪೂರ್ಣಗೊಳ್ಳದಿದ್ದಾಗ ಮಾತ್ರ ಅದರಲ್ಲಿ ಅಭಾವವಿರುತ್ತದೆ. ಆತ್ಮದಲ್ಲಿ ಯಾವುದರ ಅಭಾವವೂ ಇಲ್ಲ; ಅದು ಪರಿಪೂರ್ಣವಾದದ್ದು. ಅಭಾವವೆಂದರೆ ನಮ್ಮಿಂದ ಹೊರಗೆ ಬೇರೆ ಏನೋ ಇರುವುದು ಮತ್ತು ಅದು ಆತ್ಮದಲ್ಲಿ ಇಲ್ಲದಿರುವುದು. ಆದ್ದರಿಂದ, ನೀವು ಬೆಳದೇ ಇಲ್ಲ ಎಂದು ನಿಮಗನಿಸಿದರೆ ಚಿಂತಿಸಬೇಡಿ. ನೀವು ಆತ್ಮಕ್ಕೆ ಸಮೀಪವಾಗಿರುವಿರಿ.

ಈ ರೀತಿಯಗಿ ವಿಸ್ತರಣೆ ಮತ್ತು ಅಕುಂಚನವು ಮನಸ್ಸಿನ ಲೀಲೆ ಮತ್ತು ಪ್ರದರ್ಶನವಾಗಿದೆ. ಮನಸ್ಸು ವಿಸ್ತಾರವಾಗಿ ಸಂಕುಚಿತ ವಾಗುತ್ತದೆ. ಅದು ವಿಸ್ತಾರವಾದಾಗ, ವಿಸ್ತರಣವಾಗದಂತಹ ಸತ್ಯದ ಸಮೀಪಕ್ಕೆ ಬರುತ್ತದೆ.

Image result for adhyatma
ಬಯಕೆ, ಕೃತ್ಯ ಮತ್ತು ಆತ್ಮದ ಬಗೆಗಿನ ಅರಿವು, ಇವೆಲ್ಲವೂ ನೀವೇ ಆಗಿರುವ ಆ ಒಂದೇ ಶಕ್ತಿಯ ಪ್ರಕಟಣೆ. ಈ ಮೂರರಲ್ಲಿ ಯಾವುದಾದರೂ ಒಂದು ಸಮಯದಲ್ಲಿ ಪ್ರಕಟವಾಗುತ್ತದೆ. ಬಯಕೆಯು ಪ್ರಧಾನವಾದಾಗ ಆತ್ಮದ ಪರಿಜ್ಞಾನ ಅತೀ ಕಡಿಮೆಯಾಗಿರುತ್ತದೆ. ಇದರಿಂದ ಒತ್ತಡ ಮತ್ತು ದುಃಖವುಂಟಾಗುತ್ತದೆ. ಆದ್ದರಿಂದಲೇ ಜಗತ್ತಿನ ಎಲ್ಲಾ ತತ್ವಜ್ಞಾನಿಗಳೂ ತ್ಯಾಗವನ್ನು, ಬಯಕೆಗಳನ್ನು ತ್ಯಜಿಸುವುದನ್ನು ಎತ್ತಿ ಹಿಡಿದಿದ್ದಾರೆ.

Related image

ಕೃತ್ಯವು ಪ್ರಧಾನವಾದಾಗ ಚಡಪಡಿಕೆ ಮತ್ತು ಖಾಯಿಲೆ ಉಂಟಾಗುತ್ತದೆ. ಅರಿವು ಪ್ರಧನವಾದಾಗ ಸಂತೋಷ ಉದಯಿಸುತ್ತದೆ. ನಿಮ್ಮ ಬಯಕೆಗಳು ಮತ್ತು ಕೃತ್ಯಗಳು ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಬದ್ಧವಾಗಿದ್ದರೆ ಅಥವಾ ಭಗವಂತನೆಡೆಗೆ ತಿರುಗಿದ್ದರೆ, ಆಗ ಚೈತನ್ಯವು ತಾನಾಗಿಯೇ ಉತ್ಥಾಪಿತವಾಗುತ್ತದೆ ಮತ್ತು ಆತ್ಮಜ್ಞಾನವನ್ನು ಖಂಡಿತವಾಗಿಯೂ ಪಡೆದುಕೊಳ್ಳಬಹುದು.