ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ಸ್ಫೋಟ; ಸ್ಫೋಟಗೊಂಡ ಬಾಕ್ಸ್ ಮೇಲ್ಲಿತ್ತು ಈ ಸಂದೇಶ.!

0
149

ಒಂದು ವಾರದ ಹಿಂದೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯಂತೆ ರಾಜ್ಯದ ಹಲವು ನಗರಗಳಲ್ಲಿ ಉಗ್ರರು ಬಾಂಬ್ ಸ್ಪೋಟಗೊಳಿಸಲು ಸಂಚು ನಡೆಸಿದ್ದಾರೆ. ಅದಕ್ಕಾಗಿ ಮುಖ್ಯ ನಗರಗಳಲ್ಲಿ ಬಿಗಿ ಭದ್ರತೆ ಮಾಡಿಕೊಂಡರು ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಉಗ್ರರ ಕರಿನೆರಳು ಬಿದ್ದಿದೆ ಎನ್ನುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ ಬೆನ್ನಲ್ಲೇ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದ್ದು, ಭಾರೀ ಆತಂಕ ಸೃಷ್ಟಿಸಿದೆ.
ಹೌದು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದ್ದು ಜನರು ಭಯಭೀತರಾಗಿದ್ದಾರೆ. ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಸೋಮವಾರ ಮಧ್ಯಾಹ್ನ ಈ ಸ್ಪೋಟ ಸಂಭವಿಸಿದೆ, ಸ್ಪೋಟದಲ್ಲಿ ಸ್ಟೇಷನ್ ಮಾಸ್ಟರ್ಸ್ ಕಚೇರಿಯ ಗಾಜಿನ ಬಾಗಿಲು ಒಡೆದಿದ್ದಲ್ಲದೆ ಓರ್ವನ ಸ್ಥಿತಿ ಗಂಭೀರವಾಗಿದೆ. ಇದೊಂದು ಕಡಿಮೆ ತೀವ್ರತೆಯ ಸ್ಫೋಟವಾಗಿದ್ದು ಹುಬ್ಬಳ್ಳಿಯ ಮಂತೂರು ರಸ್ತೆಯ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಗಾಯಾಳುವನ್ನು ಹುಸೇನ್ ಸಾಬ್ (22) ಎಂದು ಗುರುತಿಸಲಾಗಿದ್ದು ಈತ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಹುಸೇನ್​ ಸಾಬ್​ ಸೇರಿ ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ರೈಲು ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದ್ದು ಭಾರೀ ಅನುಮಾನ ಮೂಡಿಸಿದೆ. ರೈಲು ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್​ ಬಿಗಿ ಭದ್ರತ ಒದಗಿಸಲಾಗಿದೆ. ಈ ಬಾಕ್ಸ್​​ನಲ್ಲಿ ಏನಿತ್ತು ಎನ್ನುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡಿವೆ. ಆದರೆ ತನಿಖೆ ನಡೆಯುವ ತನಕ ಅದರ ಖಚಿತತೆಯನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸದ್ಯದ ಮಾಹಿತಿ ಪ್ರಕಾರ ಬಾಕ್ಸ್​ನಲ್ಲಿ ಸ್ಫೋಟಕವಿದ್ದಿರಬಹುದು ಅಥವಾ ದೀಪಾವಳಿ ಸಂದರ್ಭವಾದ್ದರಿಂದ ಪಟಾಕಿಯಿದ್ದರೂ ಇರಬಹುದು ಎನ್ನಲಾಗುತ್ತಿದೆ. ಜತೆಗೆ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಸ್ಫೋಟ ಗೊಂಡ ಬಾಕ್ಸ್ ಮೇಲೆ ಏನು ಬರೆಯಲಾಗಿತ್ತು?

ಮೂಲಗಳ ಪ್ರಕಾರ ಪಾರ್ಸೆಲ್​ ಪ್ರಕಾಶ್​ ಅಬಿತ್ಕರ್​ ಎಂಬುವವರ ಹೆಸರಲ್ಲಿ ನೋಂದಣಿಯಾಗಿದ್ದು, ಅದರ ಮೇಲೆ ಸಂದೇಶವೊಂದನ್ನು ಬರೆಯಲಾಗಿದೆ. “ಬಿಜೆಪಿ – ಆರ್​ಎಸ್​ಎಸ್​ ಅಲ್ಲ ಕೇವಲ ಶಿವಸೇನೆ,” ಎಂದು ಬರೆಯಲಾಗಿದೆ ಎನ್ನಲಾಗಿದೆ. ಸ್ಫೋಟವಾದ ಹಿನ್ನೆಲೆಯಲ್ಲಿ ವಿಜಯವಾಡ – ಅಮರಾವತಿ ರೈಲು ಹುಬ್ಬಳ್ಳಿ ನಿಲ್ದಾಣದಲ್ಲೇ ಸ್ಥಗಿತಗೊಳಿಸಲಾಗಿದೆ. ಇಡೀ ರೈಲನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ಘಟನೆಯಲ್ಲಿ ಹುಸೇನ್​ ಸಾಬ್​ ಎಂಬಾತನ ಕೈ ಕೂಡ ತುಂಡಾಗಿದ್ದು ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ರೈಲ್ವೇ ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.

ಸೂಕ್ತ ತನಿಖೆಯಾಗಲಿದೆ:

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ಪೋಟದ ಕುರಿತಂತೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು “ಘಟನೆ ಸಂಬಂಧ ತನಿಖೆ ನಡೆದಿದೆ. ಹಿಂದೆ ಬಾಂಗ್ಲಾ ವಲಸಿಗರು ನಗರಕ್ಕೆ ನುಸುಳಿದ್ದರು.ಆಗ ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದ್ದೆ. ಆದರೆ ಅವರುಸೂಕ್ತ ಕ್ರಮ ತೆಗೆದುಕೊಳ್ಳದ ಕಾರಣ ಇದೆಲ್ಲಾ ಆಗುತ್ತಿದೆ.ಈಗ ಸರ್ಕಾರ ಹಾಗೂ ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ತನಿಖೆಗೆ ಆಗ್ರಹಿಸುತ್ತೇವೆ” ಎಂದಿದ್ದಾರೆ.

Also read: ಮತ್ತೆ ಮುಳುಗಿದ ಉತ್ತರ ಕರ್ನಾಟಕ; ರಾಜ್ಯದ ಹಲವೆಡೆ ಭಾರೀ ಮಳೆ, ಕರಾವಳಿಯಲ್ಲಿ ರೆಡ್​ ಆಲರ್ಟ್​​.!