ನಿಮ್ಮ ಜೀವನಕ್ಕೆ ಬೇಕಾಗಿರುವ ಅಬ್ದುಲ್ ಕಲಾಂ ರವರ ಅದ್ಭುತ ಹಿತನುಡಿಗಳು..!

0
3662

ನಿನ್ನ ಕನಸು ನನಸಾಗಬೇಕಿದ್ದರೆ ಮೊದಲು ನೀನು ಕನಸು ಕಾಣು
ನಿದ್ದೆಯಲ್ಲಿ ಕಾಣುವುದಲ್ಲ ನಿದ್ದೆಗೆಡಿಸಿ ಕಾಡುವುದು ನಿಜವಾದ ಕನಸು

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ
ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು

ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ
ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು

ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ
ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ

ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ
ಯುವಕರು ಕೆಲಸ ಹುಡುಕಬಾರದು ಕೆಲಸದ ಉತ್ಪಾದಕರಾಗಬೇಕು

ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು

ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ.
ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ.
ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸುತ್ತೀರಿ ಎನ್ನುವುದು ಮುಖ್ಯ

ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ.
ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ ಪ್ರಯತ್ನ ಪಡಿ

ನಮಗೆಲ್ಲರಿಗೂ ಒಂದೇ ಪ್ರತಿಭೆ ಅನ್ನೋದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ
ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು

ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ.
ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ,
ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ

ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟ
ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಶ್ರದ್ಧೆಯಿಂದ ಕೆಲಸ ಮಾಡಿ ಆತ್ಮಶುದ್ಧಿ ಮಾಡಿಕೊಳ್ಳಿ

ನಿಮ್ಮ ಭವಿಷ್ಯ ಬದಲಾಗಬೇಕಾದ್ರೆ, ಮೊದಲು ನಿಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಿ
ಸ್ಪಷ್ಟ ಗುರಿ ವಿಷಯ ಜ್ಞಾನ ನಿರಂತರ ಶ್ರಮ ಅಧ್ಯಯನ ಶೀಲತೆ

ಜೀವನ ಮತ್ತು ಸಮಯ ನಮ್ಮ ಉತ್ತಮ ಶಿಕ್ಷಕರು
ಜೀವನ ನಮ್ಮ ಗುರಿಯನ್ನು ನಿರ್ದೇಶಿಸುತ್ತದೆ. ಸಮಯ ಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ