ಮತ್ತೆ ಕುತಂತ್ರಿ ಬುದ್ದಿಯನ್ನು ತೋರಿಸಿದ ಪಾಕ್ ಇದೆ 16 ರಂದು ನಡೆಯಿವ IND-PAK ವಿಶ್ವಕಪ್ ಪಂದ್ಯದ ಜಾಹಿರಾತಿನಲ್ಲಿ ಅಭಿನಂದನ್‌ ಅಣಕವಾಡಿದ ಪಾಕ್‌..

0
379

ಕ್ರಿಕೆಟ್ ಇತಿಹಾಸದಲ್ಲಿ ಇಂಡಿಯಾ ಪಾಕಿಸ್ತಾನ ಪಂದ್ಯವೆಂದರೆ ಅದೇನೋ ಗೊತ್ತಿಲ್ಲ ಇಡಿ ಭಾರತ ಅಷ್ಟೇ ಅಲ್ಲ ಪ್ರಪಂಚದ ಎಲ್ಲ ದೇಶಗಳು ಈ ಪಂದ್ಯವನ್ನು ವೀಕ್ಷಣೆ ಮಾಡುತ್ತಿರುತ್ತೇವೆ. ಅದರಂತೆ ಇಷ್ಟು ದಿನ ನಡೆದ ಎಲ್ಲ IND-PAK ಪಂದ್ಯಗಳಲ್ಲಿ ಭಾರತ ಸೋತ ಇತಿಹಾಸಗಳೆ ಬಹಳ ಇಲ್ಲ, ಆದರೆ ಪ್ರತಿಬಾರಿಯೂ ದೊಡ್ಡ ಮಟ್ಟದಲ್ಲಿ ಅವಮಾನ ಮಾಡಿಕೊಂಡು ಸೋಲುತ್ತಿರುವ ಪಾಕಿಸ್ತಾನ. ಇದೆ ತಿಂಗಳ 16 ರಂದು ನಡೆಯಿವ ವರ್ಲ್ಡ್ ಕಪ್ ಮ್ಯಾಚ್-ಗೆ ಜಾಹಿರಾತು ಮಾಡಿ ಮತ್ತೆ ತನ್ನ ನಾಯಿ ಬುದ್ದಿ ತೋರಿಸಿದೆ. ಆ ಜಾಹಿರಾತಿನಲ್ಲಿ ಪಾಕ್-ಗೆ ಬಗಣಿಗುಟಾ ಬಡಿದ ಹೆಮ್ಮೆಯ ವಿರ ವಿಂಗ್ ಕಮಾಂಡರ್ ಅಂತ ನಕಲಿ ವ್ಯಕ್ತಿಯನ್ನು ಬಳಸಿ ಅವಮಾನ ಮಾಡಿದ್ದು. ಈ ಜಾಹಿರಾತು ಬಾರಿ ವಿರೋಧಕ್ಕೆ ಗುರಿಯಾಗಿದೆ.

ಏನಿದು ಪಾಕ್ ಕುತಂತ್ರ?

ವಿಶ್ವಕಪ್ ಮೊದಲನೇ ಭಾರತ-ಪಾಪಿಸ್ತಾನದ ಪಂದ್ಯದ ಜಾಹಿರಾತನ್ನು ಮಾಡಿದ ಪಾಕಿಸ್ತಾನದ ಸುದ್ದಿವಾಹಿನಿಯೊಂದು ಕ್ರಿಕೆಟ್‌ ವಿಶ್ವಕಪ್‌ ಕುರಿತು ಜಾಹೀರಾತಿನಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಅಣಕವಾಡಿದ್ದು, ಕ್ರಿಕೆಟ್‌ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತದೊಂದಿಗೆ ಮೇಲ್ನೋಟಕ್ಕೆ ಸ್ನೇಹ ಸಂಬಂಧಕ್ಕೆ ಸಿದ್ಧ ಎಂದು ತೋರ್ಪಡಿಸಿಕೊಂಡು ತನ್ನ ಕುತಂತ್ರಿ ಬುದ್ಧಿಯನ್ನ ಪಾಕಿಸ್ತಾನ ಮುಂದುವರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಆನ್‍ಲೈನ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಜಾಜ್ ಟಿವಿ ಪಾಕಿಸ್ತಾನ ಈ ಬಾರಿ ವಿಶ್ವಕಪ್ ಕುರಿತ ಪಂದ್ಯದ ಜಾಹೀರಾತಿನಲ್ಲಿ ಅಭಿನಂದನ್‍ರನ್ನ ಎಳೆದುತಂದಿದೆ.

ಏನಿದು ಜಾಹಿತಾರು?

ಜೂನ್‌ 16ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿನ ‘ಜಾಜ್‌ ಟಿವಿ’, 33 ಸೆಕೆಂಡ್‌ಗಳ ಜಾಹೀರಾತನ್ನು ಪ್ರಸರಣ ಮಾಡುತ್ತಿದೆ. ಅದರಲ್ಲಿ ಅಭಿನಂದನ್‌ ರೀತಿ ಮೀಸೆ ಬಿಟ್ಟಿರುವ ವ್ಯಕ್ತಿಯೊಬ್ಬ ಟೀಮ್‌ ಇಂಡಿಯಾದ ಜರ್ಸಿ ಬಣ್ಣದ ಟೀ ಶರ್ಟ್‌ ಧರಿಸಿ ಟೀ ಕಪ್‌ ಹಿಡಿದುಕೊಂಡು ಕುಳಿತಿರುತ್ತಾನೆ. ಆತನನ್ನು ಗಡಸು ಧ್ವನಿಯೊಂದು ವಿಚಾರಣೆ ನಡೆಸುತ್ತಿರುತ್ತದೆ. ನಿಮ್ಮ ಹನ್ನೊಂದರ ಬಳಗದ ಬಗ್ಗೆ ಹೇಳು ಎಂದು ಆ ಧ್ವನಿ ಕೇಳಿದಾಗ ‘ನಾನು ಆ ಬಗ್ಗೆ ಹೇಳುವ ಹಾಗಿಲ್ಲ’ (ಐ ಆ್ಯಮ್‌ ನಾಟ್‌ ಸಪೋಸ್‌ ಟು ಟೆಲ್‌ ಯು ದಿಸ್‌) ಎಂದು ಅಭಿನಂದನ್‌ ವೇಷಧಾರಿ ಉತ್ತರಿಸುತ್ತಾನೆ.

ಅದರಂತೆ ಪ್ರಶ್ನೆಗಳನ್ನು ಕೇಳುವ ವ್ಯಕ್ತಿ. ಟಾಸ್‌ ಗೆದ್ದರೆ ನಿಮ್ಮ ಯೋಜನೆ ಏನು ಎನ್ನುವ ಪ್ರಶ್ನೆಗೆ, ಮತ್ತದೇ ಉತ್ತರ ನೀಡುತ್ತಾನೆ. ಈ ವೇಳೆ ತನಿಖಾಧಿಕಾರಿ ‘ಟೀ ಹೇಗಿದೆ’ ಎಂದು ಪ್ರಶ್ನಿಸುತ್ತಾನೆ. ಈ ವೇಳೆ ‘ಚೆನ್ನಾಗಿದೆ’ ಎನ್ನುತ್ತಾನೆ. ಬಳಿಕ ತನಿಖಾಧಿಕಾರಿ ನೀನಿನ್ನು ಹೊರಡಬಹುದು ಎನ್ನುತ್ತಾನೆ. ಅಭಿನಂದನ್‌ ವೇಷಧಾರಿ ಹೊರಡುತ್ತಾನೆ. ತಕ್ಷಣ ಆತನನ್ನು ತಡೆಯುವ ತನಿಖಾಧಿಕಾರಿ ‘ಒಂದ್ನಿಮಿಷ ನಿಲ್ಲು, ಕಪ್‌ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ’ ಎಂದು ಟೀ ಕಪ್‌ ವಾಪಸ್‌ ಕಸಿದುಕೊಳ್ಳುತ್ತಾರೆ.

ವಿಂಗ್ ಕಮಾಂಡರ್ ಅವರು ಪಾಕಿಸ್ತಾನದಲ್ಲಿ ಸೇರೆಯಾದಾಗ ಅಲ್ಲಿ ಟಿ ಕುಡಿದ ಫೋಟೋವನ್ನು ಅಲ್ಲಿನ ಜನ ವೈರಲ್ ಮಾಡಿ ವ್ಯಂಗ್ಯ ಮಾಡಿದ್ದರು ಈಗ ಅದೇ ರೀತಿಯ ಹುಚ್ಚುತನ ತೋರುತ್ತಿವುದು, ತನಗೆ ತಾನೇ ಅವಮಾನ ಮಾಡಿಕೊಂಡತೆ ಎಂದು ದೇಶದಲ್ಲೇ ವಿರೋಧ ವ್ಯಕ್ತವಾಗಿದ್ದು, 16 ರಂದು ನಡೆಯುವ ಪಂದ್ಯದಲ್ಲಿ ಪಾಕ್ ಹೀನಾಯವಾಗಿ ಸೋಲು ಕಂಡರೆ, ತಾನು ಮಾಡಿದ ಜಾಹಿರಾತು ಅವರಿಗೆ ಬುದ್ದಿ ಕಲಿಸಿದಂತೆ ಆಗುತ್ತೆ, ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅದರಂತೆ ಪುಲ್ವಾಮ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರು ಬುದ್ದಿಕಲಿಯದ ಪಾಕ್ ಒಂದಿಲ್ಲದೊಂದು ಕುತಂತ್ರ ನಡೆಸುತ್ತಾನೆ ಇರುವುದು ವಿರೋಧಕ್ಕೆ ದಾರಿಯಾಗಿದೆ.