ಸೌತ್ ಬೆಂಗಳೂರಿನಲ್ಲೊಂದು ತವರು ಮನೆ…ಅಜ್ಜಿಮನೆಯ ಅಭ್ಯಂಗ ಮಿಸ್ ಮಾಡ್ಕೊಳ್ತಾ ಇದ್ರೆ ಹನುಮಂತನಗರದ ಈ ಪ್ರಕೃತಿ ಚಿಕಿತ್ಸಾಲಯಕ್ಕೆ ಖಂಡಿತ ಭೇಟಿ ನೀಡಲೇಬೇಕು..

1
2200

ಬೆಂಗಳೂರಿನವರದ್ದು ಫಾಸ್ಟ್ ಲೈಫ್, ಮನೆ, ಕೆಲಸ, ಟ್ರಾಫಿಕ್, ಮಾಲಿನ್ಯ , ಒತ್ತಡ ಇವೆಲ್ಲದರ ಮದ್ಯೆ ನಮ್ಮ ದೇಹದ ಆರೋಗ್ಯದ ಬಗ್ಗೆ ನಿಗಾ ವಹಿಸುವುದನ್ನೇ ಮರೆತು ಬಿಡುತ್ತೇವೆ. ವಾರದ ಐದು ದಿನ ಮನೆ ಆಫೀಸ್ ಅಂತ ಏಗಿ ವೀಕೆಂಡ್ ಬಂದ ತಕ್ಷಣ ಪಾರ್ಕ್,ಮೂವಿ ಹೋಟೆಲ್ ಅಂತ ತಿರುಗ್ತಾ ಒಂದರೆಡು ಗಂಟೆ ನಿದ್ದೆ ಮಾಡಿ, ಅದೋ ಇದೋ ಕಾರ್ಯಕ್ರಮಗಳನ್ನು ಅಟೆಂಡ್ ಮಾಡ್ಬಿಟ್ರೆ ಅಲ್ಲಿಗೆ ಮುಗಿತು ರಜ..ಮತ್ತೆ ನೆಕ್ಸ್ಟ್ ವೀಕ್ ಎಂಡ್ ಬರೋವರ್ಗು ಕಾಯ್ತಾ ಬೆಂಗಳೂರು ಟ್ರಾಫಿಕ್, ಜನಸಂದಣಿ ಧೂಳು ಮಾಲಿನ್ಯನ ಬೈಕೊಳ್ತಾ ದಿನಗಳನ್ನ ದೂಡ್ತಾ ಇದ್ದಿವಿ.

ಈ ಒತ್ತಡಯುಕ್ತ ಜೀವನ ನಮ್ಮನ್ನ ಎಷ್ಟೋ ಖಾಯಿಲೆಗಳ ದಾಸರಾಗುವಂತೆ ಮಾಡುತ್ತಾ ಇದೆ. ಆಧುನಿಕ ವೈದ್ಯ ಪದ್ಧತಿ ಎಷ್ಟು ಮುಂದುವರೆದಿದ್ದರೇನಂತೆ ನಮ್ಮ ಅಜ್ಜಿ ಅಜ್ಜರಲ್ಲಿ ಇದ್ದ ಅರೋಗ್ಯ ನಮಗೆ ಲಭ್ಯವಿಲ್ಲ. ನಮ್ಮ ಪೂರ್ವಿಕರ ಉತ್ತಮ ಆರೋಗ್ಯದ ಗುಟ್ಟು ಅವರ ಜೀವನಶೈಲಿ ಅಲ್ಲದೆ ಮತ್ತೇನು ಅಲ್ಲ. ಹಸಿವಾದಾಗ ತಿನ್ನುವುದು ಅದಕ್ಕೆ ತಕ್ಕ ಹಾಗೆ ಕೆಲಸ ಮಾಡಿದ್ದರಿಂದ, ಚಿಂತೆ ಒತ್ತಡಗಳಿಂದ ಮುಕ್ತವಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಕಾಳಜಿವಹಿಸಿದ್ದರಿಂದಲೇ ದೀರ್ಘಆಯುಷಿಗಳಾಗಿ ರೋಗಮುಕ್ತರಾಗಿ ಉತ್ತಮ ಜೀವನ ನಡೆಸುತ್ತಿರುವ ಜೀವಂತ ಉದಾಹರಣೆಗಳು ನಮ್ಮಲ್ಲೆರ ಮದ್ಯೆಯೇ ಇದೆ.

ಈ ಬ್ಯುಸಿ ಲೈಫನಲ್ಲಿ ಹೇಗಪ್ಪಾ ಅಭ್ಯಂಗಕ್ಕೆ ಟೈಮ್ ಕೊಡೋದು ಅಂತ ಯೋಚ್ನೆ ಮಾಡ್ತಿದ್ರೆ ನಿಮ್ಮ ಸಮಸ್ಯೆಗೆ ನ್ಯೂಲೈಫ್ ಪ್ರಕೃತಿ ಚಿಕಿತ್ಸಾಲಯ ನೆರವಿಗೆ ಬರುತ್ತದೆ. ಈಗಂತೂ ಮಸಾಜ್ ಪಾರ್ಲರ್ ಗಳು ಹಾಡಿಗೊಂದು ಬೀದಿಗೊಂದು ತಲೆ ಎತ್ತಿಕೊಂಡು ಬಿಟ್ಟಿವೆ. ಸೇಫ್ ಆಗಿ, ವೈದ್ಯರಿಂದ ತರಬೇತಿ ಪಡೆದ, ವೈದ್ಯರ ಮುತುವರ್ಜಿಯಲ್ಲಿ ನಿಮ್ಮ ತೊಂದರೆಗೆ ಅನುಗುಣವಾಗಿ ಅಭ್ಯಂಗ ಮಾಡಿಸ್ಕೊಳ್ಬೇಕಂತಿದ್ರೆ MRR ನ್ಯೂಲೈಫ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಹನುಮಂತನಗರ, ಬೆಂಗಳೂರು ಇಲ್ಲಿಗೆ ಭೇಟಿ ನೀಡಿ.

MRR ನ್ಯೂಲೈಫ್ ಕ್ಲಿನಿಕ್ ನಲ್ಲಿ ಹತ್ತು ಹಲವು ರೀತಿಯ ಮಸಾಜ್ ವಿಧಗಳಿದ್ದು ಅದರಲ್ಲಿ ಅಭ್ಯಂಗ, ಬಸ್ತಿ, ಸಾಲ್ಟ್ ಗ್ಲೋ ಆಯಿಲ್ ಮಸಾಜ್, ಸ್ಪಾ ಥೆರಪಿಗಳು ಮುಖ್ಯವಾಗಿವೆ. ನೀವು ಕ್ಲಿನಿಕ್ ನ ಒಳಹೊಕ್ಕರೆ ನಗು ಮುಖದಿಂದ ನಿಮ್ಮ ಕೇಸ್ ಹಿಸ್ಟರಿ ತೆಗೆದುಕೊಳ್ಳುವ ಡಾ ಮೇಘಶ್ರೀ ನಿಮ್ಮ ದೇಹಕ್ಕೆ ಅನುಸಾರವಾಗಿ ಯಾವ ಮಸಾಜ್ ಒಳ್ಳೆಯದಂದು ಹೇಳುತ್ತಾರೆ. ಮಸಾಜ್ ಕೊಠಡಿಯು ಸುವ್ಯವಸ್ಥಿತವಾಗಿದ್ದು ಸುರಕ್ಷತೆಯ ದೃಷ್ಟಿಯಲ್ಲಿ ಯಾವುದೇ ಲೋಪವು ಕಾಣಸಿಗುವುದಿಲ್ಲ. ನುರಿತ ಥೆರಪಿಸ್ಟ್ ಗಳು ಡಾಕ್ಟರ್ ನೇತೃತ್ವದಲ್ಲಿ ಸುಮಾರು ೧ ಗಂಟೆಗಳ ಕಾಲ ಮಸಾಜ್ ಥೆರಪಿಯನ್ನು ನೀಡಿ ಅದರ ಜೊತೆ ಹಬೆ ಸ್ನಾನವನ್ನು ನೀಡುತ್ತಾರೆ. ಒಟ್ಟಾರೆ ಮಸಾಜ್, ಹಬೆ ಸ್ನಾನ ಮುಗಿಸಿದಲ್ಲಿ ನಿಮ್ಮ ದೇಹದವು ಹಗುರವಾಗಿ ಅತ್ಯಂತ ವಿಶ್ರಾಂತಿದಾಯಕವಾಗುವುದರಲ್ಲಿ ಸಂಶಯವೇ ಇಲ್ಲ.

ಅಭ್ಯಂಗದ ನಂತರ ವೈದ್ಯರು ಹೇಳಿದ ದಿನಚರಿಮತ್ತು ಪಥ್ಯವನ್ನು ಮಾಡಿದ್ದಲ್ಲಿ ದೇಹವು ಸಂಪೂರ್ಣ ರೆಜುವಿನೇಟ್ ಆಗಿ ಚರ್ಮದ ಕಾಂತಿಯು ಹೆಚ್ಚಾಗಿ ನಿಮ್ಮಲ್ಲಿ ಒಂದು ತರಹದ ನವೋಲ್ಲಾಸವನ್ನು ಮೂಡಿಸುತ್ತದೆ.ಅಂಗಮರ್ದನ ಮಾಡಿಸಿಕೊಳ್ಳಲು ಬಯಸುವವರು 3 ದಿನದ ಮೊದಲೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದು ಒಳಿತು.
ನಿದ್ರಾಹೀನತೆ , ಉದ್ವೇಗ, ಅಧಿಕ ರಕ್ತದೊತ್ತಡ, ಚಿಂತೆ, ಸ್ತೂಲಕಾಯ, ಮೈಕೈ ನೋವು, ಕಟ್ಟು ಮತ್ತು ಬೆನ್ನು ನೋವು ಮಂಡಿ ನೋವು ಹೀಗೆ ಹತ್ತಾರು ಸಮಸ್ಯೆಗಳಿಗೆ ರಾಮಬಾಣ ಈ ಅಂಗಮರ್ದನ. ವಾರಕ್ಕೊಮ್ಮೆಯಾದರೂ ತಲೆಗೆ ಹರಳೆಣ್ಣೆ ಹಚ್ಚಿ ಒಂದು ಗಂಟೆ ಬಿಟ್ಟು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬಿಸಿ ಊಟವನ್ನುಉಂಡು ಮಲಗುವುದರಲ್ಲಿ ಸಿಗುವ ವಿಶ್ರಾಂತಿ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ ಬಿಡಿ.

ಈಗಲಾದರೂ ತಿಂಗಳಿಗೊಮ್ಮೆ ನಿಮಗಾಗಿ ಸಮಯವನ್ನು ಮೀಸಲಿಟ್ಟು ಅಂಗಮರ್ಧನವನ್ನು ಮಾಡಿಸಿಕೊಳ್ಳಿ ಜೀವನ ಶೈಲಿಯ ರೋಗಗಳಿಂದ ದೂರವಿರಿ. ಡಾ ಮೇಘಶ್ರೀಯವರನ್ನ ಸಂಪರ್ಕಿಸಬಹುದಾದ ವಿಳಾಸ:

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840