ಈ ಲಕ್ಷಣಗಳು ನಿಮ್ಮ ಮಕ್ಕಳಲ್ಲಿದಿಯಾ??ಹಾಗಿದ್ದರೆ ಅವರು ಅಟೆನ್ಷನ್ ಡಿಫೀಸಿಟ್ ಹೈಪೆರಾಕ್ಟಿವ್ ಡಿಸ್ಆರ್ಡರ್ ನಿಂದ ಬಳಲುತ್ತಿರಬಹುದು….

0
1294

Kannada News | Health tips in kannada

ಅಟೆನ್ಷನ್ ಡಿಫೀಸಿಟ್ ಹೈಪೆರಾಕ್ಟಿವ್ ಡಿಸ್ಆರ್ಡರ್ (ADHD) ಒಂದು ಮಾನಸಿಕ ಖಾಯಿಲೆಯಾಗಿದ್ದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ೬ ವರ್ಷದವರಿಂದ ೧೫ ವರ್ಷದ ಮಕ್ಕಳಲ್ಲಿ ಈ ತೊಂದರೆ ಕಾಡಬಹುದು.

ಏಕಾಗ್ರತೆ ಇಲ್ಲದಿರುವಿಕೆ, ಅತಿಯಾಗಿ ಆಕ್ಟಿವ್ ಆಗಿರುವಂತಹುದು, ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಭಾವನೆ ವ್ಯಕ್ತಪಡಿಸುವಲ್ಲಿ ನಿಯಂತ್ರಣವಿಲ್ಲದಿರುವುದು ಈ ಖಾಯಿಲೆಯ ಪ್ರಮುಖ ಲಕ್ಷಣಗಳು. ಹೆಚ್ಚು ಕೋಪ ಮಾಡಿಕೊಳ್ಳುವುದು, ಇತರೆ ಮಕ್ಕಳೊಂದಿಗೆ ಸರಿಯಾಗಿ ಬೇರೆಯದೇ ಜಗಳ ಮಾಡುವುದು, ಇಬ್ಬರು ಮಾತನಾಡುವಾಗ ಅವಶ್ಯಕತೆಯಿಲ್ಲದಿದ್ದರೂ ಮದ್ಯೆ ಮಾತನಾಡುವುದು, ತಮ್ಮ ಸರದಿ ಬರುವವರೆಗೂ ಕಾಯದಿರುವುದು, ಒಂದು ಕಡೆ ಕುಳಿತುಕೊಳ್ಳದಿರುವುದು, ಯಾವುದೇ ಕೆಲಸಗಲ್ನ್ನು ಪೂರ್ತಿಯಾಗಿ ಮುಗಿಸದಿರುವುದು, ಬೇಗ ಮರೆತುಹೋಗುವಂತದು, ಹಗಲುಕನಸು ಕಾಣುವುದು ಇತ್ಯಾದಿ ಲಕ್ಷಣಗಳು ಸಹ ಮಕ್ಕಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುವುದರಿಂದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆಯಲು ಸಾಧ್ಯವಾಗದೆ ಇರಬಹುದು.

watch:

ಈ ಖಾಯಿಲೆಯ ಮೂಲ ಕಾರಣ ತಿಳಿದಿಲ್ಲವಾದರೂ ಅನುವಂಶಿಕತೆ, ಅಪೌಷ್ಟಿಕ ಆಹಾರ ಪದ್ಧತಿ, ಸಾಮಾಜಿಕ ಅಂಶಗಳು ಸಹ ಕಾರಣವಾಗುತ್ತದೆ. ಮಕ್ಕಳು ಹೆಚ್ಚಾಗಿ ಜಂಕ್ ಫುಡ್ಸ್, ಫಾಸ್ಟ್ ಫುಡ್ಸ್ ಗಳ ದಾಸರಾಗುತ್ತಿದಂತೆ ಅದರೊಳಗಿನ ವಿಷಕಾರಿ ಬಣ್ಣ, ರಾಸಾಯನಿಕಗಳು ದೇಹದೊಳಗೆ ವಿವಿಧ ನರೋತ್ತೇಜಕ ಗಳನ್ನೂ ಉತ್ಪಾದಿಸಿ ದೇಹವನ್ನು ಹಾಗು ಮನಸ್ಸನ್ನು ಅಗತ್ಯಕ್ಕಿಂತ ಹೆಚ್ಚಾಗಿ ಚಟುವಟಿಕೆಯಿಂದ ಇರಿಸುತ್ತದೆ.

ಮನಸ್ಸು ಹುಚ್ಚು ಕುದುರೆಯಂತೆ ಓಡುತ್ತಾ ಸಾಗುತ್ತದೆ. ಗರ್ಭಿಣಿಯರು ಮಧ್ಯಪಾನ ಧೂಮಪಾನ ಮಾಡಿದ್ದಲ್ಲಿ, ಕ್ರಿಮಿನಾಶಕಗಳ ಸಂಪರ್ಕ, ಹೆಚ್ಚು ಸಕ್ಕರೆಯುಕ್ತ ಆಹಾರ ಸೇವನೆ, ಅತಿಯಾಗಿ ಟಿವಿ ನೋಡುವ ಮಕ್ಕಳಲ್ಲಿ ಈ ಖಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ಅವಧಿಯ ಮುಂಚೆ ಹುಟ್ಟುವ ಮಕ್ಕಳಲ್ಲಿ, ಪ್ರೀತಿಯ ಕೊರತೆ, ಶೈಕ್ಷಣಿಕ ಒತ್ತಡ, ವೈರಲ್ ಇನ್ಫೆಕ್ಷನ್ ಗಳು ಈ ತೊಂದರೆಯನ್ನು ಉಲ್ಬಣಗೊಳಿಸುತ್ತದೆ.

ಜೀವನಶೈಲಿಯ ಬದಲಾವಣೆ ಈ ತೊಂದರೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ. ಹೊರಾಂಗಣ ಕ್ರೀಡೆಗಳು, ಉತ್ತಮ ಮನೆ ಆಹಾರ ಸೇವನೆ, ಫಾಸ್ಟ್ ಫುಡ್/ ಜಂಕ್ ಫುಡ್/ ಪೆಪ್ಸಿ ಕೋಲಾ ಗಳಂತಹ ಪಾನಿಯಯಗಳ ನಿಷೇದ, ಯೋಗಾಭ್ಯಾಸಗಳು, ಹವ್ಯಾಸಗಳು ತೊಂದರೆಯನ್ನು ಕಡಿಮೆ ಮಾಡಿ ಮಕ್ಕಳಲ್ಲಿ ಏಕಾಗ್ರತೆ, ಭಾವನೆಗಳ ನಿಯಂತ್ರಣ ವನ್ನುಂಟು ಮಾಡುತ್ತದೆ. ಈ ಲಕ್ಷಣಗಳನ್ನು ಹೊಂದಿಂದ ಮಕ್ಕಳನ್ನು ದಂಡಿಸದೆ ಉತ್ತಮ ರೀತಿಯಲ್ಲಿ ಪ್ರೀತಿಯಿಂದ ತಿಳಿ ಹೇಳಿದ್ದಲ್ಲಿ ಈ ಸಮಸ್ಯೆಯಿಂದ ಬೇಗ ವಿಮುಕ್ತಿ ಹೊಂದಬಹುದು.

Also Read: ಇವೆಲ್ಲಾ ರಾತ್ರಿಯಲ್ಲು ಸಹ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯಗಳು – ಮನೆಯಲ್ಲಿದ್ದರೆ ಬಹಳ ಒಳ್ಳೆಯದು!