ರಸ್ತೆ ಅಪಘಾತದಲ್ಲಿ ಧೈರ್ಯದಿಂದ ಮುಂದೆ ಬಂದು ಪ್ರಥಮ ಚಿಕಿತ್ಸೆಮಾಡಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ.

0
427

ಜನಸಂಖ್ಯೆ ಹೆಚ್ಚಾದಂತೆ ವಾಹನಗಳು ಹೆಚ್ಚಾಗಿವೆ ಇದರಿಂದ ರಸ್ತೆ ಅಪಘಾತಗಳು ಕೂಡ ಹೆಚ್ಚಾಗಿ ನೆಡೆಯಿತ್ತಿವೆ ಪ್ರತಿದಿನವೂ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಕೆಲವೊಂದು ಅಪಘಾತಗಳು ಅಂತ್ರು ಭಯಾನಕವಾಗಿರುತ್ತೆ ಇಂತಹ ಅಪಘಾತದಲ್ಲಿ ಸಾಯುವ ಜನರಲ್ಲಿ 80% ಜನ ಪ್ರಥಮ ಚಿಕಿತ್ಸೆ ಇಲ್ಲದೆ ಸಾಯಿತ್ತಿದ್ದಾರೆ ಏಕೆಂದರೆ ಆ ಸ್ಥಳದಲ್ಲಿ ನೂರಾರು ಜನರಿದರು ಒಬ್ಬರು ಸಹಾಯಕ್ಕೆ ಬರುವುದಿಲ್ಲ ಏಕೆಂದರೆ ಅವರ ಕೈ ಕೊಳೆಯಾಗುತ್ತೆ, ರಕ್ತವನ್ನು ನೋಡೋಕೆ ಭಯವಾಗಿತ್ತೆ, ಪೊಲೀಸ್ ಕೇಸ್, ಕೋರ್ಟು ಅಲಿಯಬೇಕು ಅಂತ ವಿಚಾರ ಮಾಡಿ ನಮಗ್ಯಾಕ್ಕೆ ಇದರ ಉಸಾಬರಿ ಎಂದು ಕಣ್ಣು ಮುಂದೆಯೇ ಬಿದ್ದುವದ್ಯಾಡಿ ಸತ್ರು ಸುಮ್ಮನ್ನೇ ಹೋಗುವ ಜನರೆ ಹೆಚ್ಚು.

Also read: ರಸ್ತೆ ಅಪಘಾತಗಳಿಂದ ಮರಣ : ಕರ್ನಾಟಕಕ್ಕೆ ಅಗ್ರ ಸ್ಥಾನ

ಎರಡು ದಿನಗಳ ಹಿಂದೆ ಇಂತಹದೆ ಒಂದು ಘಟನೆ ಹೈದರಾಬಾದ್ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿಡೆ ಶ್ರೀಕಾಂತ ಎಂಬಾತ ವಿಮಾನ ನಿಲ್ದಾಣದ ನೌಕರ ತನ್ನ ಬೈಕ್ ಮೇಲೆ ಆಫೀಸಿಗೆ ಹೋಗುವಾಗೆ ಎದುರುಗಡೆ ಕಾರಿಗೆ ಡಿಕ್ಕಿ ಹೊಡೆದು ಭಯಂಕರವಾಗಿ ಗಾಯಗೊಂಡ, ಆ ವ್ಯಕ್ತಿಯ ಬಾಯಿ ಎರಡು ತುಂಡಾಗಿ ಛಿದ್ರವಾಗಿ ಅತಿಯಾದ ರಕ್ತ ಸೋರಿಕೆಯಾಗುತ್ತಿತು, ಆ ಸ್ಥಳದಲ್ಲಿದ ‘ಜ್ಯಾಸ್ಪರ್ ಪೌಲ್’ ಎಂಬ ವ್ಯಕ್ತಿ ಸಾರ್ವಜನಿಕರಿಂದ ಸಹಾಯಕ್ಕೆ ಬಂದು ಕೊಡಲೇ ಪ್ರಥಮ ಚಿಕಿತ್ಸೆ ನೀಡಿ ಪ್ರಾಣವನ್ನು ಕಾಪಾಡಿದ್ದಾನೆ. ಈ ವಿಷಯವನ್ನು ತನ್ನ facebook ಕ್ಕಿನಲ್ಲಿ ಹಚ್ಚಿಕೊಂಡು ಮಹತ್ವದ ತಿಳುವಳಿಕೆಯನ್ನು ಹೇಳಿದ್ದಾನೆ “ಅಪಘಾತ ಸಮಯದಲ್ಲಿ ಸಹಾಯ ಮಾಡಿದರೆ ನಿಮ್ಮ ಕೈ ಕೊಳಕಾಗುವುದಿಲ್ಲ ಅದರಿಂದ ಒಂದು ಜೀವವೇ ಉಳಿವುತ್ತೆ ಅಂತ ಸಂದೇಶವನ್ನು ತಿಳಿಸಿದ್ದಾನೆ. ಇದರಿಂದ ಪ್ರತಿಯೊಬ್ಬರೂ ತಿಳಿದುಕೊಳುವುದು ಇಷ್ಟೇ ಇವತ್ತು ಅವನಿಗೆ ಈ ಪರಿಸ್ಥಿತಿ ಬಂದಿದೆ ನಾಳೆ ನಮಗೆ ಯಾವ ಪರಿಸ್ಥಿತಿ ಬರುತ್ತೆ ಗೊತಿಲ್ಲ. ಆದರಿಂದ ರಸ್ತೆ ಅಪಘಾತದ ಸಂದರ್ಭದಲ್ಲಿ ನೀವೂ ಧೈರ್ಯದಿಂದ ಸಹಾಯಕ್ಕೆ ಹೋಗಿ, ಅದಕ್ಕಾಗಿಯೇ ಕಾನೂನಿನ ಕೆಲವೊಂದು ವಿಷಯಗಳು ಇಲ್ಲಿವೆ ನೋಡಿ.

Also read: ದ್ವಿಚಕ್ರ ಹಾಗೂ ಕಾರ್ ಮಾಲೀಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರದ ಹೊಸ ಆದೇಶ!! ನಿಮ್ಮ ಗಾಡಿ ಸೀಜ್ ಆಗಬಾರದು ಅಂದ್ರೆ ಮೊದಲು ಇದನ್ನ ಓದಿ…

 • ಅಪಘಾತ ಸಮಯದಲ್ಲಿ ಯಾವ ಜಾತಿ, ಧರ್ಮ, ಲಿಂಗ, ರಾಷ್ಟ್ರೀಯತೆ, ಯಾವುದೇ ಇತರ ಆಧಾರದ ಮೇಲೆ ತಾರತಮ್ಯ ಮಾಡದೆ ಸಹಾಯವನ್ನು ಮಾಡಬೇಕು ಇದರಿಂದ ವ್ಯಕ್ತಿಯ ಪ್ರಾಣಕ್ಕೆ ಬೆಲೆ ಸಿಗುತ್ತದೆ.
 • ಪ್ರತ್ಯಕ್ಷವಾಗಿ ಕಂಡ ಅಪಘಾತದಲ್ಲಿ ಆದ ಗಾಯ, ಮರಣದ ಬಗ್ಗೆ ಮಾಹಿತಿ ನೀಡಲು ಪೋಲಿಸ್ ನಿಯಂತ್ರಣ ಕೊಠಡಿ ಅಥವಾ ಪೊಲೀಸ್ ಠಾಣೆಗೆ ಕರೆ ಮಾಡಬೇಕು. ಪೊಲೀಸ್ ಇಂತಹ ಮಾಹಿತಿಯನ್ನು ತಿಳಿಸಿದ ವ್ಯಕ್ತಿಯ ಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.
 • ಇಂತಹ ಮಾಹಿತಿ ನೀಡಿದ ವ್ಯಕ್ತಿ ಯಾರೇ ಆಗಿದ್ದರು ಅವರ ವಿಳಾಸ, ರೆಕಾರ್ಡ್ ಫಾರ್ಮ್, ಅಥವಾ ಲಾಂಗ್ ರಿಜಿಸ್ಟರ್ನಲ್ಲಿ ವಿವರಗಳನ್ನು ಬಹಿರಂಗಪಡಿಸಲು ಪೊಲೀಸ್ ಅಧಿಕಾರಿ ಒತ್ತಾಯಿಸಬಾರದು.
 • ಇಂತಹ ಮಾಹಿತಿಯ ವಿಷಯವಾಗಿ ಪೊಲೀಸ್ ಅಧಿಕಾರಿಗಳಿಗೆ ಗಾಯಗೊಂಡ ವ್ಯಕ್ತಿಯ ಹೆಸರು ಮತ್ತು ರಸ್ತೆಯ ಬಗ್ಗೆ ತಿಳಿಸಿದ ನಂತರ ನೀವೇ ಸಾಕ್ಷಿದಾರರು ಎಂದು ನಿಮಗೆ ಯಾವುದೇ ರೀತಿಯ ದೊಡ್ಡ ವಿಚಾರಣೆ ಮತ್ತು ಶಿಕ್ಷೆಯನ್ನು ನೀಡುವುದಿಲ್ಲ.
 • ಅಪಘಾತದ ಮಾಹಿತಿ ತಿಳಿಸಿದ ವ್ಯಕ್ತಿಗೆ ಯಾವುದೇ ಬೇಧವಿಲ್ಲದೆ ಗೌರವ ನೀಡಬೇಕು ಆ ವ್ಯಕ್ತಿ ಬೇರೊಂದು ಭಾಷೆಯನ್ನು ಮಾತನಾಡಿದರು ಅದಕ್ಕೆ ಅವಕಾಶ ಮಾಡಿಕೊಡಬೇಕು.

Also read: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡಿದ್ದಕ್ಕೆ ಏನಾಗಿದೆ ಗೊತ್ತೇ?

 • ಪೊಲೀಸ್ ಅಧಿಕಾರಿಗಳು ಸಾಕ್ಷಿಯಾದ ವ್ಯಕ್ತಿಯ ವಿಚಾರಣೆಯನ್ನು ಸಾಕ್ಷಿದಾರನಿಗೆ ಅನುಕೂಲವಾಗುವ ಸಮಯ, ಸ್ಥಳ, ಅಥವಾ ನಿವಾಸದಲ್ಲಿ ನಾರ್ಮಲ್ ಡ್ರೆಸ್ ಮೇಲೆ ಬಂದು ವಿಚಾರಣೆ ಮಾಡಬೇಕು ಇದರಿಂದ ಅವನ ಘನತೆಗೆ ಧಕ್ಕೆಯಾಗುವುದಿಲ್ಲ.
 • ಒಂದು ವೇಳೆ ಸಾಕ್ಷಿದಾರರು ಪೋಲಿಸ್ ಸ್ಟೇಷನ್ಗೆ ಭೇಟಿ ಯಾಗುವ ಸಂದರ್ಭದಲ್ಲಿ ಒಂದೇ ಸಾರಿ ಸಾಕ್ಷಿಯನ್ನು ಪರೀಕ್ಷಿಸಬೇಕು ಅದೇ ವಿಷಯವಾಗಿ ಬಲಿಪಶು ಮಾಡುವುದು ಸರಿಯಲ್ಲ.
 • ಸಾಕ್ಷಿದಾರ ಬೇರೊಂದು ಭಾಷೆಯಲ್ಲಿ ಸಾಕ್ಷಿ ಹೇಳಿದರೆ ಆ ಭಾಷೆಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಕರೆದುಕೊಂಡು ಬರಬೇಕು.

  ಕ್ರಿಮಿನಲ್ ಪ್ರೊಸಿಜರ್, 1973 (2 ರ 1974) ರ ಸಂಹಿತೆಯ 296 ರ ಪ್ರಕಾರ, ಒಂದು ವೇಳೆ ಕೋರ್ಟಿನಲ್ಲಿ ಸಾಕ್ಷಿದಾರ ಬೇಕಾದರೆ ಅವನನ್ನು ಕರೆದುಕೊಂಡು ಬರುವುದು ಪೊಲೀಸ್ ಜವಾಬ್ದಾರಿ ಆ ವ್ಯಕ್ತಿಯಿಂದ ಯಾವುದೇ ಹಣವನ್ನು ಪಡೆಯಬಾರದು ಅಂತಹ ವಿಚಾರಣೆಗಳು ಒಂದೇ ಸಾರಿ ನಡೆಯಬೇಕು
  ಇಂತಹ ಕ್ರಮದಿಂದ ಸಹಾಯ ಮಾಡಲು ಪ್ರತಿಯೊಬ್ಬರೂ ಬಂದೆ ಬರುತ್ತಾರೆ. ಮತ್ತು ಮೊದಲಿಗೆ ದಿನಗಳಿಗೆ ಹೋಲಿಕೆ ಮಾಡಿದರೆ ಈಗಿನ ಕಾನೂನಿನ ಕ್ರಮಗಳು ಸಾಕ್ಷಿದಾರರಿಗೆ ಅನುಕೂಲಕರವಾಗಿದೆ. ಆದರಿಂದ ನೀವು ಅಪಘಾತವನ್ನು ನೋಡಿದರೆ ಸಹಾಯ ಮಾಡಲು ಭಯಪಡಬೇಡಿ. ಆಸ್ಪತ್ರೆ ಅಥವಾ ಯಾವುದೇ ಅಧಿಕೃತರ ಪ್ರಶ್ನೆಯೊಂದಕ್ಕೆ ಸರಿಯಾದ ಉತ್ತರ ನೀಡಿದರೆ ಸಾಕು ನಿಮ್ಮನು ಬಲಿಪಶುಮಾಡುವ ಅಧಿಕಾರ ಯಾರಿಗೂ ಇಲ್ಲ.