ಪಾರಂಪರಿಕ ವೈದ್ಯರು ಹೇಳುವ ಪ್ರಕಾರ ಶುಂಠಿ ಕಷಾಯ ಆರೋಗ್ಯಕ್ಕೆ ತುಂಬಾ ಒಳ್ಳೇದು, ಕ್ಯಾನ್ಸರ್ ಖಾಯಿಲೆಗೂ ಇದು ರಾಮ ಬಾಣ ಅಂತೆ!!

0
804

ಕೆಲವು ನೈಸರ್ಗಿಕ ಮನೆಮದ್ದುಗಳಿಂದ ದೊಡ್ಡ ಕಾಯಿಲೆಗಳನ್ನೇ ಗುಣಪಡಿಸುವ ಶಕ್ತಿ ಇರುತ್ತದೆ. ಇಂತಹ ಮನೆ ಮದ್ದುಗಳ ಕುರಿತು ಹಲವು ಅಧ್ಯಯನಗಳು ಕೂಡ ನಡೆದಿದ್ದು ಅದರಲ್ಲಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಶುಂಠಿ ಟೀ ಕುಡಿದರೆ ಬಹಳಷ್ಟು ಲಾಭವಿದೆ. ಇದರಿಂದ ಬಹುಮುಖ್ಯವಾಗಿ ಕ್ಯಾನ್ಸರ್‌ಗೆ ನೀಡುವ ಕೀಮೋಥೆರಪಿಗಿಂತ ಹೆಚ್ಚಿನ ಅರೋಗ್ಯ ಗುಣ ಶುಂಠಿ ಟೀ ಕುಡಿಯುದರಲ್ಲಿದೆ. ಏಕೆಂದರೆ ಶುಂಠಿ ಎಣ್ಣೆಯು ನೋವಿಗೆ, ಥಂಡಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಶುಂಠಿಯಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಪ್ಯಾರಾಸಿಟಿಕ್ ಅಂಶಗಳಿವೆ.

Also read: ಅಜೀರ್ಣಕ್ಕೆ, ಪಿತ್ತದೋಷಕ್ಕೆ ಶುಂಠಿಗಿಂತ ಔಷಧಿ ಬೇಕಾ??

ಶುಂಠಿಯಲ್ಲಿರುವ ಅರೋಗ್ಯ ಗುಣಗಳು:

1. ಕ್ಯಾನ್ಸರ್ ವಿರೋಧಿ

ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಶುಂಠಿಯನ್ನು ಕಿಮೋಥೆರಪಿಯ ಡ್ರಗ್‌ಗಿಂತಲೂ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕೀಮೋಥೆರಪಿ ಕ್ಯಾನ್ಸರ್ ಕೋಶಗಳೊಂದಿಗೆ ಒಳ್ಳೆಯ ಕೋಶಗಳನ್ನೂ ಸಾಯಿಸುತ್ತದೆ. ಆದರೆ, ಶುಂಠಿಯಲ್ಲಿರುವ ಆ್ಯಂಟಿ ಕ್ಯಾನ್ಸರ್ ಗುಣವು ಕೇವಲ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಶುಂಠಿಯಲ್ಲಿ 6-ಜೆಂಜೆರಾಲ್ ಹಾಗೂ ಥೈಸೋನ್ ಎಂಬ ಕಾಂಪೌಂಡ್‌ಗಳಿದ್ದು, ಅವು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ಹೋರಾಡುತ್ತವಲ್ಲದೆ, ಬೆಳೆದ ಕೋಶಗಳ ವಿರುದ್ಧವೂ ಹೋರಾಡುತ್ತವೆ. ಹೀಗಾಗಿ, ಸಂಶೋಧಕರ ಚಿತ್ತ ಈಗ ಶುಂಠಿಯತ್ತ ಹರಡಿದೆ.

2. ಕಿಮೊತೆರಪಿ ನಂತರದ ವಾಕರಿಕೆ:

ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಂತರ ಕಿಮೊತೆರಪಿ ಯನ್ನು ವೈದ್ಯರು ಸೂಚಿಸುತ್ತಾರೆ. ಇದರ ಪ್ರಮುಖ ಉದ್ದೇಶ ಕ್ಯಾನ್ಸರ್ ಜೀವಕೋಶಗಳ ಮರುಕಳಿಸದಿರುವಂತೆ ನೋಡಿಕೊಳ್ಳುವುದು. ಇದು ಕ್ಯಾನ್ಸರ್ ಮರುಕಳಿಸದಂತೆ ನಿಮ್ಮನ್ನು ಕಾಪಾಡಿದರೂ, ವಾಂತಿ ಮತ್ತು ವಾಕರಿಕೆ ಅಂತಹ ತೊಂದರೆಯನ್ನು ಉಂಟುಮಾಡುತ್ತದೆ. ಇದನ್ನು ಶುಂಠಿ ಪರಿಣಾಮಕಾರಿಯಾಗಿ ಶಮನಗೊಳಿಸುತ್ತದೆ.

3. ಲಿವರ್ ಕ್ಯಾನ್ಸರ್ ತಡೆಯುತ್ತೆ:

Also read: ಆಯುರ್ವೇದದ ಸಪ್ತ ಚೂರ್ಣಗಳನ್ನು ಬಳಸಿ ಮಲೇರಿಯಾ, ಡೆಂಗ್ಯೂ ಹಾಗು ಇನ್ನಿತರ ರೋಗಗಳಿಂದ ಮುಕ್ತಿ ಪಡೆಯಿರಿ..!

ಶುಂಠಿಯಲ್ಲಿ ಕೆಲ ಹೆಪಾಟೋ-ಪ್ರೊಟೆಕ್ಟಿವ್ ಗುಣಗಳಿದ್ದು, ಲಿವರ್‌ನಲ್ಲಿ ಟಾಕ್ಸಿನ್ಸ್ ಸ್ಟೋರ್ ಆಗದಂತೆ ನೋಡಿಕೊಳ್ಳುತ್ತದೆ. ಇದರ ಆ್ಯಂಟಿ ಇನ್ಫಮೇಟರಿ ಗುಣವು ಲಿವರ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

4. ಉಸಿರಾಟದ ತೊಂದರೆ ನಿವಾರಣೆ:

ಹಲವಾರು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಶುಂಠಿ ಪುಡಿಯನ್ನು ಬಳಸಬಹುದು. ಅದರ ಆಂಟಿ-ಹಿಸ್ಟಾಮೈನ್ ಗುಣದಿಂದಾಗಿ ಹಲವಾರು ಬಗೆಯ ಅಲ್ಲೆರ್ಜಿಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಮ್ಯೂಕಸ್ ಉತ್ಪಾದಿಸಿ, ಉಸಿರಿನ ನಾಳದ ಸಂಕೋಚನವನ್ನು ಪ್ರತಿಬಂಧಿಸುವಲ್ಲಿ ಇದು ಸಹಾಯ ಮಾಡುತ್ತದೆ. ಶುಂಠಿ ಬೇರಿನ ಪುಡಿಯ ಅರೋಗ್ಯ ಪ್ರಯೋಜನಗಳಲ್ಲಿ ಒಂದು ಅದು ಶೀತ ಮತ್ತು ಜ್ವರದ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ತಾಜಾ ಶುಂಠಿ ರಸದೊಂದಿಗೆ ಮೆಂತೆ ಸೇವಿಸುವುದರಿಂದ ಆಸ್ತಮಾ ಕೂಡಾ ತಡೆಗಟ್ಟಬಹುದು.

5. ಕಿಡ್ನಿ ಕಲ್ಲಿಗೆ ರಾಮಬಾಣ:

ಪ್ರತಿದಿನ ಶುಂಠಿ ಟೀ ಸೇವನೆಯು ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸುತ್ತದೆ. ಕಿಡ್ನಿಗಳಿಂದ ವಿಷಪದಾರ್ಥಗಳನ್ನು ಶುಂಠಿ ಹೊರಹಾಕುತ್ತದೆ. ಈ ಟೀಗೆ ಸ್ವಲ್ಪ ನಿಂಬೆರಸ ಬೆರೆಸಿದಿರಾದರೆ ಆರೋಗ್ಯಕ್ಕೆ ಹೆಚ್ಚಿನ ಲಾಭ ದೊರೆಯುತ್ತದೆ.

6. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ:

ಜೀರ್ಣಕ್ರಿಯೆಗೆ ಸಹಾಯ ಮಾಡುವ ಹಲವಾರು ಮೂಲಿಕೆಗಳಲ್ಲಿ ಅತ್ಯುತ್ತಮ ಮೂಲಿಕೆ ಶುಂಠಿ. ಇದು ಪಿತ್ತರಸವನ್ನು ಬಿಡುಗಡೆಗೊಳಿಸಿ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನಾವು ಸೇವಿಸಿರುವ ಆಹಾರದ ಪೌಷ್ಟಿಕತೆಯ ಸಮೀಕರಣವನ್ನು ಇದು ಉತ್ತೇಜಿಸುತ್ತದೆ. ಶುಂಠಿ ಪುಡಿಯ ಇತರ ಪ್ರಯೋಜನಗಳು ಹೊಟ್ಟೆನೋವಿನ ಸೆಳೆತದಿಂದ ಬಿಡುಗಡೆ, ಬೇಧಿ ನಿವಾರಣೆ.

7. ಶುಂಠಿ ಪುಡಿ ತೂಕ ಇಳಿಸಲು ಸಹಾಯ ಮಾಡುತ್ತದೆ:

ಶುಂಠಿ ಪುಡಿ ಊಟದ ನಂತರ ನಿಮ್ಮ ಹೊಟ್ಟೆಯನ್ನು ತಣಿಸುತ್ತದೆ. ಇದು ಹೆಚ್ಚಿನ ಆಹಾರದ ಸೇವನೆಯನ್ನೂ ತಡೆಗಟ್ಟುತ್ತದೆ ಮತ್ತು ನಿಮ್ಮ ದೇಹದ ಕೊಬ್ಬನಾಶವನ್ನು ಕುಗ್ಗಿಸುತ್ತದೆ.

8. ಶುಂಠಿ ಪುಡಿ ರಕ್ತದ ಸಕ್ಕರೆ ಮಟ್ಟವನ್ನು ನಿವಾರಿಸುತ್ತದೆ:

Also read: ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ : ಅಂಗೈಯಲ್ಲಿ ಆರೋಗ್ಯ

ಶುಂಠಿ ನಿಮ್ಮ ದೇಹದ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಶುಂಠಿಯ ಈ ಕಾರ್ಯಾಚರಣೆಯಿಂದ ನಿಮ್ಮ ತೂಕ ಗಳಿಕೆ ಅಥವಾ ಇಳಿಕೆಯಲ್ಲಿ ಇದು ಪಾತ್ರ ನಿರ್ವಹಿಸುತ್ತದೆ.