ಕೊರೊನಾ ಇದ್ದರೂ ಈ ವರ್ಷ ಸತ್ತವರ ಪ್ರಮಾಣ ಕಡಿಮೆಯಂತೆ: ಶಾಕ್ ಆಯ್ತಾ ಈ ಸುದ್ದಿ ನೋಡಿ..

0
365

ಕೊರೊನಾ ಮಹಾಮಾರಿಗೆ ಜಗತ್ತು ನಲುಗಿದ್ದು, ನಿತ್ಯ ಕೋವಿಡ್ ಪಿಡುಗಿಗೆ ಸಾವನ್ನಪ್ಪುತ್ತಿರುವ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಆದರೆ ಆಶ್ಚರ್ಯ ಎಂದರೆ, ಪ್ರತಿ ವರ್ಷ ಸಾವನ್ನಪ್ಪುತ್ತಿದ್ದವರಿಗಿಂತಲೂ ಈ ವರ್ಷ ಮೃತಪಟ್ಟವರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಶಾಕ್ ಆಯ್ತಾ..? ಆದ್ರೂ ಇದು ಸತ್ಯ..

ಕರಾಚಳಿಯಲ್ಲಿ ಪ್ರತಿ ವರ್ಷಕ್ಕಿಂತಲೂ ಈ ವರ್ಷ ಮೃತಪಟ್ಟವರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಕರಾವಳಿಯಲ್ಲಿ Department Of Numerology ಪ್ರಕಾರ, ಹಿಂದಿನ ವರ್ಷಕ್ಕಿಂತ ಈ ವರ್ಷ ಮೃತಪಟ್ಟವರ ಸಂಖ್ಯೆ ಕಡಿಮೆ. ಆಗಸ್ಟ್ವರೆಗೂ ಒಟ್ಟು ಮರಣ ಪ್ರಮಾಣ ನೋಡಿದ್ರೆ, 2019ರಲ್ಲಿ 10,916 ಮಂದಿ ಮೃತಪಟ್ಟಿದ್ದರೆ, ಈ ವರ್ಷ ಇದುವರೆಗೆ ಸತ್ತವರ ಸಂಖ್ಯೆ 10,647 ಆಗಿದೆ. ಆದರೆ ಈ ವರ್ಷ ಸತ್ತವರು ಹೆಚ್ಚು ಮಂದಿ ಕೊರೊನಾ ವೈರಸ್’ಗೆ ತುತ್ತಾದವರು ಎಂದು ತಿಳಿದು ಬಂದಿದೆ.

ವಯಸ್ಸಾದವರು, ಇತರೆ ಖಾಯಿಲೆಗಳಿಂದ ಕಳೆದ ವರ್ಷ ಜನ ಸಾಯುತ್ತಿದ್ದರು. ಆದರೆ ಅದನ್ನು ಯಾರೂ ಪರಿಗಣಿಸುತ್ತಿರಲಿಲ್ಲ, ಈ ಬಾರಿ ಕರೊನಾದಿಂದಾಗಿ ಸಾವಿನ ಸಂಖ್ಯೆ ಎಲ್ಲರಿಗೂ ದೊಡ್ಡದಾಗಿ ಕಾಣುತ್ತಿದೆ. ಆದರೆ ಸತ್ತವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಅಷ್ಟೇ ಅಲ್ಲದೇ, ಲಾಕ್‌ಡೌನ್ ಅವಧಿಯಲ್ಲಿ ಇತರ ಕಾರಣಗಳಿಂದ ಆಗುವ ಮರಣದ ಸಂಖ್ಯೆಯೂ ತೀವ್ರವಾಗಿ ಕಡಿಮೆಯಾಗಿದೆ.

ಲಾಕ್‌ಡೌನ್‌ನಿಂದಾಗಿ ಜನರ ಓಡಾಟ ಕಡಿಮೆಯಾಗಿರುವುದು ಇದಕ್ಕೆ ಪ್ರಮುಕ ಕಾರಣವಾಗಿದ್ದು, ಇದರೊಂದಿಗೆ ರಸ್ತೆ ಅಪಘಾತಗಳು, ಕಳ್ಳತನ, ದರೋಡೆಗಳ ಸಂಖ್ಯೆಯು ಕಾರಣ ಎನ್ನಲಾಗಿದೆ.

2019ರ ಮಾರ್ಚ್‌ನಲ್ಲಿ 1,527 ಮಂದಿ ಸಾವನ್ನಪ್ಪಿದ್ದರೆ, ಕಳೆದ ಮಾರ್ಚ್‌ನಲ್ಲಿ 1,224 ಮೃತಪಟ್ಟಿದ್ದಾರೆ. 2019ರ ಏಪ್ರಿಲ್‌ನಲ್ಲಿ 1,424 ಮಂದಿ ಸಾವನ್ನಪ್ಪಿದ್ದರೆ, ಕಳೆದ ಏಪ್ರಿಲ್‌ನಲ್ಲಿ 731 ಮೃತಪಟ್ಟಿದ್ದಾರೆ. 2019ರ ಏಪ್ರಿಲ್‌ನಲ್ಲಿ 1,424 ಮಂದಿ ಸಾವನ್ನಪ್ಪಿದ್ದರೆ, ಕಳೆದ ಏಪ್ರಿಲ್‌ನಲ್ಲಿ 731 ಮೃತಪಟ್ಟಿದ್ದಾರೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರು. ಇನ್ನು ಕೋವಿಡ್‌ನಿಂದ ಮೃತರಾದವರಲ್ಲಿ ಶೇ.99ರಷ್ಟು ರೋಗಿಗಳು ಇತರ ಕಾಯಿಲೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ. ಆದರೂ ಲೆಕ್ಕಕ್ಕೆ ತೆಗೆದುಕೊಳ್ಳುವಾಗ ಅವರನ್ನು ಕೋವಿಡ್ ಸಾವು ಎನ್ನುವ ಪಟ್ಟಿಯಲ್ಲಿ ಬಳಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 1, ಜೂನ್ 2, ಜುಲೈ 32 ಹಾಗೂ ಆಗಸ್ಟ್‌ನಲ್ಲಿ ಇದುವರೆಗೆ 32 ಮಂದಿ ಕೋವಿಡ್ ಕಾರಣಕ್ಕೆ ಮೃತರಾಗಿದ್ದಾರೆ. ದ.ಕ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಇದುವರೆಗೆ ಅನುಕ್ರಮವಾಗಿ 3, 3, 9, 146 ಹಾಗೂ 66 ಮಂದಿ ಮೃತಪಟ್ಟಿದ್ದಾರೆ.

ಪ್ರತಿ ವರ್ಷದ ಸರಾಸರಿ ಸಾಯುವ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿಲ್ಲ, ಮೃತಪಟ್ಟವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಜನರು ಈ ವರ್ಷ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದಾರಷ್ಟೇ ಎನ್ನುತ್ತಾರೆ.