ತಾಮ್ರದ ಬಾಟೆಲ್‍ನಲ್ಲಿ ನೀರು, ಹಾಲು ಕುಡಿಯುವ ಮುನ್ನ ಎಚ್ಚರ; ಕಾಪರ್ ಅತಿಯಾದ್ರೆ ಬರುತ್ತೆ ಲಿವರ್ ಕಾಯಿಲೆ, ಹೇಗೆ ಅಂತ ಈ ಮಾಹಿತಿ ನೋಡಿ.!

0
1083

ತಾಮ್ರದ ಬಾಟೆಲ್‍, ಲೋಟದಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎನ್ನುವ ವಿಚಾರವಾಗಿ ಪ್ರತಿಯೊಬ್ಬರೂ ತಾಮ್ರದ ವಸ್ತುಗಳನ್ನು ಬಳಸುತ್ತಿದ್ದಾರೆ. ಅದರೆ ಈ ಕುರಿತು ಆಘಾತಕಾರಿ ಸುದ್ದಿಯೊಂದು ಬಂದಿದ್ದು, ರಾತ್ರಿಯಿಡೀ ತಾಮ್ರದಲ್ಲಿ ನೀರಿಟ್ಟು ಕುಡಿದರೆ ಕಾಯಿಲೆ ಬರಲಿದೆ. ಪೌಷ್ಠಿಕತೆಗೆ ಕಾಪರ್ ವರವೂ ಹೌದು, ವಿಷವೂ ಹೌದು. ಎನ್ನುವ ವಿಚಾರ ವಿಶ್ವ ಮಟ್ಟದಲ್ಲಿ ವರದಿಯಾಗಿದೆ. ಆದರೆ ಬರಿ ಒಳ್ಳೆಯ ಉದ್ದೇಶದಿಂದ ಜನರು ತಾಮ್ರದ ವಸ್ತುಗಳು ಖರಿಧಿಸುವ ಮುನ್ನ ವ್ಯಾಪಾರಿಗಳನ್ನು ಕೇಳಿದರೆ ಮಾತನಾಡಲು ಹಿಂದೇಟು ಹಾಕುತ್ತಾರೆ.

Also read: ಕೇವಲ ಪ್ಯಾಶನ್ ಎಂದು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಎಚ್ಚರ; ಸ್ವಲ್ಪ ಹೆಚ್ಚು ಕಡಿಮೆಯಾದರೆ ಬರುತ್ತವೆ ಈ ಕಾಯಿಲೆಗಳು.!

ಹೌದು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಇನ್ನೂ ಹತ್ತು ಹಲವು ವಿಷಯಕ್ಕೆ ಸಂಬಂಧಪಟ್ಟಂತೆ ತಾಮ್ರದ ಪ್ರಯೋಜನವನ್ನು ತಿಳಿದ ಜನರು ತಾಮ್ರದ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಅದರಂತೆ ಮಾಲ್‍ನಿಂದ ಹಿಡಿದು ಗಲ್ಲಿಗಲ್ಲಿಗಳಲ್ಲೂ ತಾಮ್ರದ ಮಾರಾಟ ಜೋರಾಗಿದೆ. ಒಂದು ಲೀಟರ್ ನೀರು ಹಿಡಿಯುವ ತಾಮ್ರದ ಬಾಟೆಲ್‍ಗೆ ಕನಿಷ್ಠ ಅಂದರೂ 1300 ರೂ. ಕೊಡಲೇ ಬೇಕು. ಇಷ್ಟಾದರೂ ಆರೋಗ್ಯ ಎಂದು ಹೇಳಿ ಜನ ತಾಮ್ರದ ಮೇಲೆ ಹಣ ಹಾಕುತ್ತಿದ್ದಾರೆ. ರಾತ್ರಿಯಲ್ಲಿ ತಾಮ್ರದೊಳಗೆ ನೀರಿಟ್ಟು ಬೆಳಗ್ಗೆ ಕುಡಿದರೆ ಗ್ಲೋ ಬರುತ್ತೆ, ಆರೋಗ್ಯವಾಗಿರುತ್ತಾರೆ ಎಂದು ಹತ್ತು ಹಲವು ಕಾರಣಗಳಿಗೆ ಕಾಪರ್ ಫೇಮಸ್ ಆಗಿದೆ.

ಕಾಪರ್ ಬಳಕೆಯ ಸೈಡ್ ಎಫೆಕ್ಟ್ ?

Benefits of drinking water from copper vessels

Also read: ಜೀರ್ಣಕ್ರಿಯೆ ಸಮಸ್ಯೆ ಕುರಿತು ಹೊಸ ಅಧ್ಯಯನ; ನಿದ್ರಾ ಹೀನತೆಯಿಂದ ವ್ಯಕ್ತಿಯ ಜೀರ್ಣಕ್ರಿಯೆಗೆ ತೊಂದರೆಯಂತೆ.!

ಹೌದು ರಾತ್ರಿಯಿಡೀ ತಾಮ್ರದಲ್ಲಿ ನೀರಿಟ್ಟು ಕುಡಿದರೆ ಕಾಯಿಲೆ ಬರಲಿದೆ. ಪೌಷ್ಠಿಕತೆಗೆ ಕಾಪರ್ ವರವೂ ಹೌದು, ವಿಷವೂ ಹೌದು. ರಾತ್ರಿಯಲ್ಲಿ ಕಾಪರಿನಲ್ಲಿ ನೀರಿಟ್ಟು ಬೆಳಗ್ಗೆ ಕುಡಿದರೆ ಶೇ. 4 ಸಾವಿರದಷ್ಟು ಕಾಪರ್ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ನೀರಿನಲ್ಲಿ ಕಾಪರ್ ಲಿಚ್ಚಿಂಗ್ ಆದಾಗ ಮೆಟಲ್ ಪ್ರಮಾಣ ಹೆಚ್ಚಾಗಿ ರಾತ್ರಿಯಿಂದ ಬೆಳಗ್ಗೆ ಆಗುವ ಬದಲಾವಣೆಗಳು ಲಿವರ್ ಡ್ಯಾಮೇಜ್ ಮಾಡುತ್ತದೆ. ಇದನ್ನು ವೀಲಸನ್ ಡಿಸೀಸ್ (ವಿಲ್ಸನ್ ರೋಗ) ಎಂದು ಕರೆಯುತ್ತಾರೆ. ಒಂದು ದಿನಕ್ಕೆ ನಮ್ಮ ದೇಹಕ್ಕೆ 1.1 ಎಂ.ಜಿ ಮಾತ್ರ ತಾಮ್ರ ಸಾಕು. ಅನ್ನ ತಿಂದರು ಅಲ್ಲಿ ಕಾಪರ್ ಸಿಗಲಿದೆ. ಆದರೂ ತಾಮ್ರ ಬಳಸುತ್ತೇವೆ. ಕಾಪರ್ ವಿಷ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಪ್ರಕಾರ ಆತ್ಮಹತ್ಯೆಗೆ ಹಲವೆಡೆ ಕಾಪರ್ ಸೆಲ್ ಫೈಡ್ ಕುಡಿಯುತ್ತಾರೆ, ಕುಡಿದರೆ ಸಾಯುತ್ತಾರೆ ಎಂಬ ಸತ್ಯ ರುಜುವತ್ತಾಗಿದೆ. ಹೀಗಾಗಿ ಕಾಪರ್ ಪ್ರಮಾಣ ದೇಹ ಸೇರಿದರೆ ಅಪಾಯವಾಗುತ್ತದೆ.

ಪಿತ್ತಕೋಶ ನಾಶ?

ಇಷ್ಟಲ್ಲದೇ ಕಾಪರ್ ಎಂದರೆ ಮೆಟಲ್. ಪಿತ್ತಕೋಶಕ್ಕೆ ಹೋದ ಮೆಟಲ್ ಹೊರತರುವುದು ಕಷ್ಟವಾಗುತ್ತದೆ. ಆಗ ದೇಹದಲ್ಲಿ ಮೆಟಲ್ ಸಂಗ್ರಹವಾಗಿ ಕಾಯಿಲೆಗಳು ಉದ್ಭವವಾಗುತ್ತದೆ.

Also read: ಮಾನವನ ಹೈಟ್ ಕುರಿತು ಹೊಸ ಸಂಶೋಧನೆ; ಕುಳ್ಳಗಿರುವವರಿಗೆ ಹೆಚ್ಚು ಆರೋಗ್ಯ ಸಮಸ್ಯೆಯಂತೆ.!

ಕಾಪರ್ ಪ್ರಮಾಣ ಹೆಚ್ಚಾದ್ರೆ ಆಗುವ ತೊಂದರೆಗಳ ಪಟ್ಟಿ;

ಆಹಾರ ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದು. ಕಾಪರ್ ಪ್ರಮಾಣ ಹೆಚ್ಚಾದ್ರೆ ದೇಹದಲ್ಲಿ ಒಂದಲ್ಲ ಎರಡಲ್ಲ ಹತ್ತಾರು ಸಮಸ್ಯೆಗಳು ಕಂಡು ಬರುತ್ತಿದ್ದು. ಕಿಡ್ನಿ ಸಮಸ್ಯೆ, ಖಿನ್ನತೆ, ವ್ಯಕ್ತಿತ್ವ ಬದಲಾವಣೆ, ರಕ್ತ ಸಂಬಂಧಿ ಸಮಸ್ಯೆ, ಅಪಾರ ಪ್ರಮಾಣದ ಹೊಟ್ಟೆ ನೋವು, ಚರ್ಮ ಹಳದಿ ಬಣ್ಣಕ್ಕೆ ತಿರುಗಿ, ಕಣ್ಣುಗಳು ಬೆಳ್ಳಗೆ ಆಗುವುದು, ಹೊಟ್ಟೆ ಹಾಗೂ ಕಾಲುಗಳ ಬಳಿ ನೀರಿನ ಪ್ರಮಾಣ ಶೇಖರಣೆ, ಮಾತನಾಡುವಾಗ ತೊದಲುವುದು, ಮಾತು- ದೇಹ ಸನ್ಹೆಯಲ್ಲಿ ವ್ಯತ್ಯಯ, ಸ್ನಾಯು ಠೀವಿ (ಸೆಳೆತ) ಬ್ರೈನ್ ಸಮಸ್ಯೆ ಅಂತಹ ತೊಂದರೆಗಳು ಕಂಡು ಬರುತ್ತಿದೆ. ಅದಕ್ಕಾಗಿ ಯಾವುದನ್ನು ಉಪಯೋಗಿಸುವ ಮುನ್ನ ಸಾಕಷ್ಟು ಎಚ್ಚರವಹಿಸುವುದು ಒಳ್ಳೆಯದು.