ಸತ್ತಂತಿರುವ ಶವವಾಗಬೇಡಿ.. ಬದುಕಿದ್ದಾಗ ಏನನ್ನಾದರೂ ಸಾಧಿಸಲು ಪಣ ತೊಟ್ಟು ನಿಲ್ಲಿ ವಿಜಯ ನಿಮ್ಮದೇ… ನಿಮಗಾಗಿ ಒಂದಿಷ್ಟು ಸಲಹೆ ಇಲ್ಲಿದೆ ನೋಡಿ

0
1230

Kannada News | kannada Useful Tips

ಹುಟ್ಟಿದ ಮೇಲೆ ಮನುಷ್ಯ ಸಾಯಲೇ ಬೇಕು.. ಸತ್ತ ಮೇಲೆ ಚಿರನಿದ್ರೆ ಮಾಡುವುದು ಇದ್ದೇ ಇದೆ.. ನಾವು ಸತ್ತ ಮೇಲೂ ಬದುಕಬೇಕೆಂದರೆ ಅದು ಸಾಧ್ಯವಾಗುವುದು ನಾವು ಏನನ್ನಾದರು ಸಾಧಿಸಿದರೇ ಮಾತ್ರವೇ..

ಸಾಧನೆ ಎಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕೆಂಬುದಲ್ಲ.. ಇರುವಷ್ಟು ದಿನ ನಮ್ಮ ಗುಣ ನಡತೆ.. ಜೊತೆಗೆ ನಾವು ಮಾಡುವ ಕೆಲಸದಲ್ಲಿಯೇ ಸಣ್ಣದಾಗಿ ಸಾಧಿಸಿದರೂ ಅದು ಸಾಧನೆಯೇ..

ಏನನ್ನಾದರೂ ಮಾಡಬೇಕು ಎಂದು ಮನಸ್ಸಿಗೆ ಬಂದ ತಕ್ಷಣ ಇನ್ನು ಕಾಯಬೇಡಿ.. ನಿಮಗೆ ಸಾಧಿಸಬೇಕು ಎಂದು ಅನಿಸಿದ್ದೇ ನಿಮ್ಮ ಶುಭ ಸಮಯ..‌ಆಗಲೇ ನಿಮ್ಮ ಮೊದಲ ಹೆಜ್ಜೆಯನ್ನು ಇಡಿ.. ನಾಳೆ ಎಂಬುವ ನಮ್ಮ ಮನಸ್ಸಿನಲ್ಲಿ ಮೂಡುವ ಕೆಟ್ಟ ಚಾಳಿಯನ್ನು ಕಿತ್ತೊಗೆಯಿರಿ..

ಸೋಮಾರಿತನವೆಂಬುದನ್ನು ಶತ್ರುವಾಗಿ ಪರಿಗಣಿಸಿ.. ಅದನ್ನೂ ಪ್ರತಿನಿತ್ಯ ದ್ವೇಷಿಸುತ್ತಲೇ ಬನ್ನಿ.. ಆಗ ವಿಜಯದ ಕಡೆ ಹೆಜ್ಜೆ ಇಡಲು ಹಾದಿ ಸುಗಮವಾಗುದು..

ಇರುವಷ್ಟು ದಿನ ಇನ್ನೊಬ್ಬರಿಗೆ ಹೊರೆಯಾಗಿ ಬದುಕುವುದಕ್ಕಿಂತ ಸ್ವಂತ ದುಡಿಮೆಯಲ್ಲಿ ಒಂದಿಷ್ಟು ದಿನ ರಾಜನಂತೆ ಬದುಕುವುದು ಲೇಸಲ್ಲವೇ..

ಪ್ರತಿಯೊಬ್ಬರಲ್ಲೂ ತಮಗೆ ಗೊತ್ತಿಲದ ರೀತಿಯ ಶಕ್ತಿಯೊಂದು ಅಡಗಿರುತ್ತದೆ.. ನಿಮ್ಮೊಳಗಿರುವ ಆತ್ಮಬಲವನ್ನು ಒಮ್ಮೆ ಹೊರ ಹಾಕಿ ನೋಡಿ.. ಇತಿಹಾಸ ಸೃಷ್ಟಿ ಯಾಗದಿದ್ದರೂ ಇತಿಹಾಸದ ಪುಟದಲ್ಲಿ ನಿಮ್ಮದೊಂದು ಹೆಸರು ಇದ್ದೇ ಇರುತ್ತದೆ..

ಸಾಧನೆಯ ಹಾದಿಯಲ್ಲಿ ನಿಮ್ಮ ಗುರಿ ಮಾತ್ರ‌ ಕಾಣುತ್ತಿರಲಿ.. ಇತರರೂ ಕೂಡ ನಿಮ್ಮ ಪಕ್ಕದ ಹಾದಿಯಲ್ಲಿ ಬರುತ್ತಿರುತ್ತಾರೆ.‌..‌ ಅಸೂಹೆ ಎಂಬುದನ್ನು ದೂರವಿಡಿ ಏಕೆಂದರೆ ಅದೇ ನಮ್ಮನ್ನು ಸುಟ್ಟು ಬಿಡುತ್ತದೆ..

ಏನು ಮಾಡಬೇಕೆಂದಿದ್ದೀರೋ ಅದನ್ನು ಮಾಡಲು ಈಗಲೇ ಪಣ ತೊಡಿ.. ಇಂದೇ ಮೊದಲ ಹೆಜ್ಜೆ ಇಡಿ.. ಆ ಸಾಧನೆಗೆ ಬೇಕಾದ ಮೊದಲ ಕೆಲಸವನ್ನು ಇಂದೇ ಮಾಡಿ.. ಶುಭವಾಗಲಿ.. ಈ ಸಾಲುಗಳು ನಿಮಗೆ ಸ್ಪೂರ್ತಿ ತುಂಬಿದ್ದರೇ ಶೇರ್ ಮಾಡಿ ಇನ್ನಷ್ಟು ಜನರಿಗೆ ಉಪಯೋಗವಾಗಲಿ.. ಸಾಧಿಸಲು ಇನ್ನೊಬ್ಬರಿಗೆ ಸಹಾಯವಾಗಬಹುದು..

Also Read: ಯಾವ ದಿನ, ಯಾವ ದೇವರನ್ನು ನೆನೆದರೆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ?