ಕಾಮುಕರಿಗೆ ಸರಿಯಾದ ಪಾಠ..? ಪತ್ನಿಯ ಮೇಲೆ ಅತ್ಯಾಚಾರಗೈದವನಿಗೆ ಆ್ಯಸಿಡ್ ಎರಚಿ ಸೇಡು ತಿರಿಸಿಕೊಂಡ ಪತಿ.!

0
314

ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚು ಕೇಳಿಬರುತ್ತಿದ್ದು, ಕಾಮುಕರು ಚಿಕ್ಕ ಮಕ್ಕಳು, ವಯಸ್ಸಾದ ವೃದ್ಧ ಮೇಲಿವೂ ಅತ್ಯಾಚಾರ ಮಾಡುತ್ತಿದ್ದಾರೆ. ಇದಕ್ಕೆ ಜೈಲು ಶಿಕ್ಷೆ ವಿಧಿಸಿದರು ಕೂಡ ಹೆದರದೆ ಪಾಪಿಗಳು ಮತ್ತೆ ಅಂತಹ ಕೃತ್ಯ ಎಸಗುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಅದೆಷ್ಟೋ ಕೇಸ್-ಗಳು ಇನ್ನೂ ಕೋರ್ಟ್ ನಲ್ಲಿವೇ. ಹೀಗೆ ಇಂತಹದೆ ಒಂದು ಅತ್ಯಾಚಾರಕ್ಕೆ ಸಂಬಂಧಪಟ್ಟ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು. ಪತ್ನಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಮೇಲೆ ಮಹಿಳೆಯ ಪತಿ ಆ್ಯಸಿಡ್ ದಾಳಿ ಮಾಡಿದ ಘಟನೆ ನಡೆದಿದೆ.

ಹೌದು ರಾಜಸ್ಥಾನದ ಅಜ್ಮೇರ್ ನಲ್ಲಿ ಪತ್ನಿಯನ್ನು ಅತ್ಯಾಚಾರ ಮಾಡಿದ ಆರೋಪಿ ಮೇಲೆ ಪತಿ ಆ್ಯಸಿಡ್ ದಾಳಿ ಮಾಡಿದ ಘಟನೆ ನಡೆದಿದ್ದು, ಕೆಲವು ದಿನಗಳ ಹಿಂದೆ ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾದ ಬಳಿಕ ಇಬ್ಬರ ನಡುವೆ ಜಗಳವಾಯಿತು. ಸಂಜಯ್ ಹಾಗೂ ಆರೋಪಿ ಖಿನ್ವರಾಜ್ ಇಬ್ಬರು ಸ್ನೇಹಿತರು. ಕಳೆದ ವರ್ಷ ಸಂಜಯ್ ಪತ್ನಿ ಖಿನ್ವರಾಜ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಆದರೆ ಆರೋಪಿಯ ಮೇಲೆ ಸೇಡು ತಿರಿಸಿಕೊಳ್ಳಲು ಕಾಯುತ್ತಿದ್ದ ಸಂಜಯ್.

ಜಗಳವಾದ ಬಳಿಕ ಅಲ್ಲಿಂದ ಹೊರಟು ಹೋದ ಖಿನ್ವರಾಜ್ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ನಿಂತಿದ್ದನು. ಈ ವೇಳೆ ಸಂಜಯ್ ಆತನನ್ನು ಹಿಂಬಾಲಿಸಿ ಏಕಾಏಕಿ ಆತನ ಮೇಲೆ ಆ್ಯಸಿಡ್ ಹಾಕಿದ್ದಾನೆ. ಆ್ಯಸಿಡ್ ಎಸೆದಿದ್ದಕ್ಕೆ ಪೊಲೀಸರು ಸಂಜಯ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಈ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಜಯ್ ಆ್ಯಸಿಡ್ ಬಾಟಲ್‍ನ ಕ್ಯಾಪ್ ತೆರೆಯುತ್ತಿರುವುದು ಕಂಡ ಖಿನ್ವರಾಜ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಸಂಜಯ್ ಆ್ಯಸಿಡ್ ಅನ್ನು ಆತನ ಮೇಲೆ ಎಸೆದಿದ್ದಾನೆ.

ಆ್ಯಸಿಡ್ ಬಿದ್ದ ಕಾರಣ ಖಿನ್ವರಾಜ್ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಪೆಟ್ರೋಲ್ ಬಂಕ್‍ನಲ್ಲಿದ್ದ ಜನರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಖಿನ್ವರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೊದಲೇ ಆದ ಘಟನೆಯಿಂದ ಸೇಡು ಇಟ್ಟುಕೊಂಡಿದ ಸಂಜಯ್ ಮತ್ತೆ ಜಗಳವಾದ ಕಾರಣ ಕೊಪಿತಗೊಂಡು ಈ ಕೃತ್ಯ ಮಾಡಿದ್ದಾನೆ. ಎಂದು ಪೊಲೀಸರು ತಿಳಿಸಿದ್ದಾರೆ.