ನೀವು ಅಜೀರ್ಣದ ತೊಂದರೆ ಅನುಭವಿಸ್ತಾ ಇದ್ರೆ ಈ ಟಿಪ್ಸ್ ಫಾಲೋ ಮಾಡಿ ಅಜೀರ್ಣಕ್ಕೆ ಗುಡ್ ಬೈ ಹೇಳಿ…

0
436

Kannada News | Health tips in kannada

ಕರಿದ ತಿಂಡಿಗಳು, ಸಿಹಿ ತಿಂಡಿಗಳು ಹೆಚ್ಚು ಕೊಂಬಿದ ಆಹಾರಗಳಾಗಿದ್ದು ಸುಲಭವಾಗಿ ಜೀರ್ಣಿಸಲ್ಪಡುವುದಿಲ್ಲ. ಇಂತಹ ತಿನಿಸುಗಳು ಹೊಟ್ಟೆಬಾರ, ಅಜೀರ್ಣವನ್ನುಂಟು ಮಾಡಿ ಹಸಿವನ್ನು ತಗ್ಗಿಸುತ್ತವೆ. ಅಜೀರ್ಣ ನಿವಾರಣೆಗೆ ಕೆಲವು ಮನೆಮದ್ದುಗಳು ಇಲ್ಲಿವೆ.

 • ಬಿಳಿ ದ್ರಾಕ್ಷಿ ಹಣ್ಣಿನ ಸೇವನೆ ಅಜೀರ್ಣವನ್ನು ತಡೆಗಟ್ಟುತ್ತದೆ.
 • ಅಗಸೆ ಸೊಪ್ಪನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದು.
 • ಅನ್ನ ಮಾಡುವಾಗ ಗಂಜಿ ತೆಗೆದು  ಅದಕ್ಕೆ ತುಸು ಉಪ್ಪು ಬೆರೆಸಿ ಕುಡಿಯಬೇಕು.ಅನ್ನದ ಗಂಜಿಯಲ್ಲಿ ಹಲವಾರು ಪೌಷ್ಟಿಕಾಂಶಗಳು ಇರುವುದರಿಂದ ಅದನ್ನು ವ್ಯರ್ಥ ಮಾಡಬಾರದು.
 • ಮಜ್ಜಿಗೆಗೆ ಉಪ್ಪು ಬೆರೆಸಿ ಕುಡಿಯುವುದರಿಂದಲೂ ಹೊಟ್ಟೆಯುಬ್ಬರ, ಅಜೀರ್ಣ ಕಡಿಮೆಯಾಗುತ್ತದೆ.

 • ಪರಂಗಿ ಹಣ್ಣು ಅಥವಾ ಬಾಳೆ ಹಣ್ಣನ್ನು ಊಟದ ನಂತರ ತಿನ್ನಬೇಕು.
 • ಬೆಳ್ಳುಳ್ಳಿಯನ್ನು ನಿತ್ಯ ಅಡುಗೆಯಲ್ಲಿ ಬಳಸಬೇಕು.
 • ಓಮು ಕಾಳನ್ನು ಊಟದ ಬಳಿಕ ಚೆನ್ನಾಗಿ ಜಗಿದು ತಿನ್ನಬೇಕು.
 • ಪುದಿನಾ ಸೊಪ್ಪಿನ ಚಟ್ನಿ, ಚಹಾ ಅಜೀರ್ಣವನ್ನು ಬಡಿದೋಡಿಸುತ್ತೆ.
 • ಹಸಿ ಸೌತೆಕಾಯಿಯನ್ನು ಕಾಳು ಮೆಣಸು ಮತ್ತು ಉಪ್ಪಿನ ಜೊತೆ ತಿಂದರೆ ಅಜೀರ್ಣ ತಗ್ಗುತ್ತದೆ.

 • ಊಟದ ಜೊತೆಗೆ ಹಸಿಮೂಲಂಗಿಯನ್ನು ಉಪಯೋಗಿಸಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ.
 • ಲವಂಗದ ಕಷಾಯವನ್ನು ದಿನಕ್ಕೆ ಮೂರು ಬಾರಿ ಕುಡಿದ್ದಲ್ಲಿ ಊಟವು ಚೆನ್ನಾಗಿ ಜೀರ್ಣವಾಗುತ್ತದೆ.
 • ಯಾವುದೇ ಅಡುಗೆ ತಿಂಡಿಗಳಲ್ಲಿ ಕರಿಬೇವಿನ ಸೊಪ್ಪನ್ನು ಕಡ್ಡಾಯವಾಗಿ ಸೇರಿಸಬೇಕು.
 • ಸ್ವಲ್ಪ ಉಪ್ಪು ಬೆರೆಸಿದ ಕುದಿಸಿ ಆರಿಸಿದ ನೀರಿಗೆ ನಿಂಬೆರಸ ಬೆರೆಸಿ ದಿನಕ್ಕೆರಡು ಬಾರಿಯಾದರೂ ಕುಡಿಯಬೇಕು.
 • ಸೇಬುಹಣ್ಣು ಜೀರ್ಣಶಕ್ತಿಗೆ ಅತ್ಯುತ್ತಮ.
 • ಹಸಿ ಈರುಳ್ಳಿ ಹೂವನ್ನು ತಿಂದರೆ ಹಸಿವು ಹೆಚ್ಚುತ್ತದೆ.
 • ಊಟಕ್ಕೆ ಮೊದಲು ಸ್ವಲ್ಪ ಜೀರಿಗೆ ಕಾಳು ಅಗೆದು ತಿನ್ನುವುದರಿಂದ ಅಜೀರ್ಣ ವಾಸಿಯಾಗುತ್ತದೆ.

 • ಅನಾನಸ್ ಹಣ್ಣು ಅಜೀರ್ಣವನ್ನು ದೂರ ಮಾಡುತ್ತದೆ.
 • ನೇರಳೆ ಮತ್ತು ಮೋಸಂಬಿ ಹಣ್ಣು ಶರೀರದ ಉಷ್ಣತೆಯನ್ನು ತಗ್ಗಿಸುತ್ತವಲ್ಲದೆ ಪಚನ ಶಕ್ತಿಯನ್ನು ವೃದ್ಧಿಸುತ್ತವೆ.
 • ಕೆಸುವಿನ ದಂಟನ್ನು ಬಳಸಿ ತಯಾರಿಸಿದ ಆಹಾರ ಜೀರ್ಣಶಕ್ತಿಗೆ ಪೂರಕವಾಗಿರುವುದು.
 • ಊಟದ ಬಳಿಕ ಒಂದು ಚಿಕ್ಕ ಚೂರು ಶುಂಠಿಯನ್ನು ಅಗಿದು ತಿನ್ನಿ.
 • ದಾಲ್ಚಿನ್ನಿ ಚಕ್ಕೆಯ ಕಷಾಯ ಸೇವನೆ ಮಾಡುವುದು ಉತ್ತಮ.
 • ಊಟದ ನಂತರ ಒಂದೆರಡು ಏಲಕ್ಕಿಗಳನ್ನು ಜಗಿದು ತಿನ್ನುವುದು ಒಳ್ಳೆಯದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Watch:

Also Read: ಮಕ್ಕಳಲ್ಲಿ ಬುದ್ಧಿಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಟಾನಿಕ್ ಮಾತ್ರೆಗಳ ಮೊರೆ ಹೋಗೋ ಮೊದ್ಲು ಈ ಮನೆಮದ್ದುಗಳನ್ನು ಪಾಲಿಸಿ…