ಮುಖ್ಯಮಂತ್ರಿ ಎಚ್.ಡಿ.ಕೆ ಗೆ ವಾರ್ನಿಂಗ್ ನೀಡಿದ ವಿಷ್ಣುವರ್ಧನ್​ರವರ ಅಳಿಯ ಅನಿರುದ್ದ್; ತಿರುಗೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ..

0
461

ಜನಪ್ರಿಯ ನಾಯಕ ಅಂಬಿಯವರ ಸಾವಿನ ಕಣ್ಣಿರು ಆರುವ ಮೊದಲೇ ಅಂಬಿಯ ಕುಚುಕು ಗೆಳೆಯನ ಸ್ಮಾರಕ ನಿರ್ಮಾಣ ಕುರಿತು ವಿವಾದಗಳು ಹುಟ್ಟಿವೆ. ಅಂಬಿಯವರ ಅಂತಿಮ ದರ್ಶನದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಮಾತನಾಡಿ ಅಂಬಿಯವರ ಸ್ಮಾರಕ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದರು. ಇದೆ ಹೇಳಿಕೆಯೇ ವಿಷ್ಟು ಅವರ ಅಭಿಮಾನಿಗಳಿಗೆ ಬೇಸರ ತಂದಿದೆಯೇ?

Also read: ಸಾವಿನ ನಂತರವೂ ಒಂದಾಗಲಿದ್ದಾರೆ ಕನ್ನಡ ಚಿತ್ರರಂಗದ ದಿಗ್ಗಜರು; ಒಂದೇ ಜಾಗದಲ್ಲಿ ರಾಜ್, ವಿಷ್ಣು ಮತ್ತು ಅಂಬಿಯವರ ಸ್ಮಾರಕ!!

ಹೌದು ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮನು ಅಗಲಿ 8. 9 ವರ್ಷಗಳು ಮುಗಿಯಲಿಕ್ಕೆ ಬಂದರು ಅವರ ಸ್ಮಾರಕ ನಿರ್ಮಾಣ ಮಾಡುವಲ್ಲಿ ಸರ್ಕಾರ ವಿಳಂಭ ಮಾಡುತ್ತಿದೆ ಎಂದು ಸಾಹಸ ಸಿಂಹ ವಿಷ್ಣು ವರ್ಧನ್ ಅಳಿಯ ಕುಮಾರಸ್ವಾಮಿಯವರಿಗೆ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಿಷ್ಣುವರ್ಧನ್​ ಸ್ಮಾರಕ ನಿರ್ಮಿಸಲಿ ನಾವು ಶಾಂತಿ ಪ್ರಿಯರು, ಹೇಡಿಗಳಲ್ಲ. ಆದರೆ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಎಷ್ಟು ದಿನ ಕಾಯೋದು. ಇದೆ ವಿಷಯವಾಗಿ ಸಿಎಂ ಕಚೇರಿ ಮುಂದೆ ಗಂಟೆಗಟ್ಟಲೇ ಕಾದಿದ್ದೇವೆ. ನಮ್ಮನ್ನು ತುಂಬಾ ಅಲೆಸುತ್ತಿದ್ದಾರೆ. ಸಿಎಂ ಡಿ.30 ರೊಳಗೆ ವಿಷ್ಣು ಸ್ಮಾರಕ ನಿರ್ಮಾಣ ಆಗದಿದ್ರೆ, ಸಿಂಹಗಳನ್ನು ಬಡಿದೆಬ್ಬಿಸಲಾಗುವುದು; ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯಾದ್ಯಂತ ಸಿಂಹಗಳನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆ.

Also read: ಸಾವಿನ ನಂತರವೂ ಒಂದಾಗಲಿದ್ದಾರೆ ಕನ್ನಡ ಚಿತ್ರರಂಗದ ದಿಗ್ಗಜರು; ಒಂದೇ ಜಾಗದಲ್ಲಿ ರಾಜ್, ವಿಷ್ಣು ಮತ್ತು ಅಂಬಿಯವರ ಸ್ಮಾರಕ!!

ಇಲ್ಲಿಯ ವರೆಗೂ 5 ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ, ಡಿಸಿ ಅವರನ್ನೂ ಭೇಟಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಸರ್ಕಾರ ಕ್ರಮ ಕೈಗೊಂಡಿಲ್ಲ. ನಾವು ಈಗಲೂ ಕಳಕಳಿಯಿಂದ ಮನವಿ ಮಾಡುತ್ತಿದ್ದೇವೆ. ಇಡೀ ಸರ್ಕಾರದ ಬಗ್ಗೆ ಮತ್ತು ಕುಮಾರಸ್ವಾಮಿ ಕುಟಂಬದ ಬಗ್ಗೆ ನಮಗೆ ವೈಯಕ್ತಿಕ ಗೌರವ ಇದೆ. ಸಿಎಂ ಕುಮಾರಸ್ವಾಮಿ ಮೇಲೆ ನಮಗೆ ಕೋಪವಿಲ್ಲ. ಪ್ರೀತಿಯಿಂದ, ಕಾಳಜಿಯಿಂದ, ಗೌರವದಿಂದ ಸಿಎಂ ಬಳಿ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಮುಂದಾಳತ್ವದಿಂದ ವಿಷ್ಣು ಸ್ಮಾರಕ ಮಾಡಿಸಿಕೊಡಿ ಎಂದು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ಕಂಠೀರವ ಸ್ಟುಡಿಯೋದಲ್ಲಿ ಒಪ್ಪಿಗೆ ಇಲ್ಲ?

ಡಾ. ರಾಜ್​ಕುಮಾರ್, ಡಾ. ಅಂಬರೀಷ್​ ಅವರಿಗೆ ಇರುವಂತೆ, ಡಾ. ವಿಷ್ಣುವರ್ಧನ್​ ಅವರಿಗೆ ಅವರದೇ ಆದ ವಿಶೇಷ ಸ್ಥಾನಮಾನ ಇದೆ. ಮೈಸೂರಿನಲ್ಲಿ ಈಗಾಗಲೇ ತೋರಿಸಿರುವ ಜಾಗದ ವಿವಾದವನ್ನು ಬಗೆಹರಿಸಿ ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಿಕೊಡಬೇಕು ಇದು ಸರ್ಕಾರದ ಕೆಲಸ. ಆದರೆ ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮಾಡಲು ಸರ್ಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ ಮೈಸೂರು ನಲ್ಲೆ ಸ್ಮಾರಕ ನಿರ್ಮಾಣ ಮಾಡಲಿ ಎಂದರು.

ಅನಿರುದ್ದ್ ವಿರುದ್ದ ಸಿಎಂ ಕಿಡಿ:

ವಿಷ್ಣುವರ್ಧನ್​ ಅವರಿಗೆ ನಾವು ಕೊಟ್ಟಿರುವ ಗೌರವಕ್ಕೆ ನೀವು ಕೃತಜ್ಞತೆ ಸಲ್ಲಿಸಬೇಕು. ವಿಷ್ಣುವರ್ಧನ್​ ನಿಧನರಾದಾಗ ನಾನು ಅಧಿಕಾರದಲ್ಲಿ ಇರಲಿಲ್ಲ. ಆದರೂ ಅವರ ಪಾರ್ಥಿವ ಶರೀರದ ಅಂತ್ಯ ಕಾರ್ಯ ಎಲ್ಲಿ ಮಾಡುತ್ತೀರಿ ಎಂದು ಭಾರತಿ ವಿಷ್ಣುವರ್ಧನ್ ಅವರನ್ನು ಕೇಳಿದ್ದೆ. ಕಂಠೀರವ ಸ್ಟುಡಿಯೋದಲ್ಲೇ ಮಾಡಿ ಎಂದೂ ಕೂಡ ಹೇಳಿದ್ದೆ. ಅಲ್ಲದೆ, ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮಾಡಿ ಮನವಿಯನ್ನೂ ಮಾಡಿದ್ದೆ. ಆದರೆ, ಈಗ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​ ಅವರು, ಸರ್ಕಾರಕ್ಕೆ ಮರ್ಯಾದೆ ಇದೆಯಾ ಎಂದು ಕೇಳುತ್ತಾರೆ. ನನಗೆ ಉಡಾಫೆ ಮುಖ್ಯಮಂತ್ರಿ ಎನ್ನುತ್ತಾರೆ. ಇದೆಲ್ಲ ನನಗೆ ತುಂಬ ನೋವು ತಂದಿದೆ ಎಂದು ಹೇಳಿದರು.