ಟ್ವಿಟ್ಟರ್-ನಲ್ಲಿ ಕಿಚ್ಚ ಸುದೀಪ್-ಗೆ ಬುದ್ಧಿವಾದ ಹೇಳಿದ ನಟ ಚೇತನ್-ಗೆ ಕ್ಲಾಸ್ ತೆಗೆದುಕೊಂಡು ಕಿಚ್ಚ ಅಭಿಮಾನಿಗಳು!!

0
163

ಭಾನುವಾರ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಮನವಿ ಮಾಡಿದ್ದರು ಅದರಂತೆ ಕರ್ಫ್ಯೂ ಯಶಸ್ವಿಯಾಗಿದೆ. ಈಗ ಇದಕ್ಕೆ ಸಂಬಂಧ ಪಟ್ಟಂತೆ ಚಿತ್ರರಂಗದಲ್ಲಿ ವಿವಾದ ಸೃಷ್ಟಿಯಾಗಿದ್ದು, ಪ್ರಭಾವಿ ನಟ ಇಬ್ಬರ ನಡುವೆ ಟ್ವೀಟ್ ಶುರುವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಏಕೆಂದರೆ ಪ್ರಧಾನಿ ಮೋದಿ ಅವರ ಕರೆಯಂತೆ ಜನತಾ ಕರ್ಫ್ಯೂಗೆ ಪಾಲ್ಗೊಳ್ಳುವಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಅದರೊಂದಿಗೆ ಮಹಿಳೆಯೊಬ್ಬರ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.ಇದಕ್ಕೆ ನಟ ಚೇತನ್ ಟ್ವೀಟ್ ಮಾಡಿ ಸುದೀಪ್ ಅವರಿಗೆ ಬುದ್ದಿವಾದ ಹೇಳಿದ್ದಾರೆ ಸಾಧ್ಯ ಇದು ಸಾಕಷ್ಟು ವೈರಲ್ ಆಗಿದೆ.

ನಟ ಸುದೀಪ್ ಗೆ ಕ್ಲಾಸ್?

ಹೌದು ಸುದೀಪ್ ಅವರು ಭಾನುವಾರ ವಿಡಿಯೋ ಒಂದನ್ನು ಟ್ವೀಟ್ ಮಾಡಿ, ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ ಎಂದು ಬರೆದುಕೊಂಡಿದ್ದರು. ಆ ವಿಡಿಯೋದಲ್ಲಿ ಮಹಿಳೆಯೊಬ್ಬರು ಪ್ರಧಾನಿಯವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಸೃಷ್ಟಿಸುತ್ತಿದ್ದಾರೆ. ನಿಮ್ಮ ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ ಕೇಳಿಕೊಂಡಿದ್ದಾರೆ. ಇದು ನಿಜಕ್ಕೂ ಅದ್ಭುತ ಕೆಲಸ. 5 ನಿಮಿಷ ಚಪ್ಪಾಳೆ ತಟ್ಟಿ, ಅಲ್ಲದೆ ಸಾಧ್ಯವಾದಷ್ಟು ಬೇರೆಯವರಿಗೂ ತಿಳಿಸಿ ಕೇಳಿಕೊಂಡಿದ್ದರು. ಇದೇ ವಿಡಿಯೋವನ್ನು ಕಿಚ್ಚ ಶೇರ್ ಮಾಡಿದ್ದರು.

ಚೇತನ್ ಹೇಳಿದ್ದೇನು?

ಇದೇ ಟ್ವೀಟ್ಗೆ ನಟ ಚೇತನ್ ಪ್ರತಿಕ್ರಿಯಿಸಿದ್ದಾರೆ. ಸುದೀಪ್ ಸರ್… ನೀವು ಚಿತ್ರರಂಗದಲ್ಲಿ ಮಾಡಿರುವ ಕೆಲಸಗಳನ್ನು ಮತ್ತು ಸಾಧನೆಗಳನ್ನು ನಾನು ಗೌರುವಿಸುತ್ತೇನೆ. ನನ್ನ ಅಪ್ಪ-ಅಮ್ಮ ವೈದ್ಯರು, ಅವರ ಮಗನಾಗಿ ಪ್ರತಿಯೊಬ್ಬ ವೈದ್ಯರಿಗೆ ಗೌರವ ನೀಡಬೇಕಾಗುತ್ತದೆ. ಅದನ್ನು ಕೂಡ ನಾನು ಒಪ್ಪುತ್ತೇನೆ. ಆದರೆ ಎನರ್ಜಿ ಮೆಡಿಸಿನ್ ಥಿಯರಿ ಎಂಬುದು ಅವೈಜ್ಞಾನಿಕ ವಿಚಾರವಾಗಿದೆ. ಇಂತಹ ಮೆಸೇಜ್ಗಳು ನಮ್ಮನ್ನು ತಪ್ಪುದಾರಿಗೆ ಕೊಂಡೊಯ್ಯುತ್ತದೆ. ಹಾಗೆಯೇ ಮೌಢ್ಯವನ್ನು ಸೃಷ್ಟಿಸುತ್ತದೆ. ವಿಜ್ಞಾನದ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡೋಣ ಎಂದು ಚೇತನ್ ಹೇಳಿದ್ದಾರೆ.

ಅಭಿಮಾನಿಗಳಿಂದಲೂ ಸುದೀಪ್‌ಗೆ ಸಲಹೆ

ಈ ರೀತಿ ತಪ್ಪು ಮಾಹಿತಿ ಹಂಚಿಕೊಳ್ಳುವುದರಿಂದ ಜನರನ್ನು ತಪ್ಪು ದಾರಿಗೆ ಎಳೆದಂತೆ ಆಗುತ್ತದೆ ಎಂಬ ಅಭಿಪ್ರಾಯ ಅನೇಕರಿಂದ ಕೇಳಿಬಂದಿದೆ. ಸುದೀಪ್‌ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ‘ಸುದೀಪ್ ಅವರೇ ನಿಮ್ಮ ಕಳಕಳಿಯ ಬಗ್ಗೆ ಎರಡು ಮಾತಿಲ್ಲ. ಆದರೆ ನೀವು ಬರೀ ಸಿನಿಮಾ ನಟ ಮಾತ್ರವಲ್ಲ. ವಿದ್ಯಾವಂತರು ಕೂಡ ಹೌದು. ಇದು ವಿಜ್ಞಾನದ ವಿಚಾರ. ಯಾವುದೋ ಗೊಡ್ಡು ನಂಬಿಕೆಗಳಿಗೆ ಸೊಪ್ಪು ಹಾಕುವ ವಸ್ತು ಅಲ್ಲ. ಹುಚ್ಚು ಮೂಢನಂಬಿಕೆಗಳಿಗೆ, ವದಂತಿಗಳಿಗೆ ಇಂಬು ಕೊರಬಾರದಾಗಿ ಕೋರಿಕೆ’ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.