ಒಂದು ನಾಯಿಗೆ 5 ಸಾವಿರಬೇಕು; 500 ರೂ. ಗೆ ಮತಹಾಕಬೇಡಿ ಹಾಕಿದರೆ ಪ್ರಾಣಿಗಳಿಗಿಂತ ಕೀಳಾಗುತ್ತೇವೆ; ಮಂಡ್ಯದ ಮತದಾರರಿಗೆ ನಟ ದರ್ಶನ್ ವಿಶೇಷ ಮನವಿ..

0
105

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ಮಂಡ್ಯದಲ್ಲಿ ಪ್ರಚಾರದ ಜ್ವಾಲೆ ಹೊತ್ತಿ ಉರಿಯುತ್ತಿದೆ. ದಿನಕ್ಕೊಂದು ವಾದ ವಿವಾದಗಳ ನಡುವೆ ಇಡಿ ಕರ್ನಾಟಕದಲ್ಲಿ ಹೆಸರು ಪಡೆದುಕೊಂಡಿದೆ. ಬೇರೆ ಕಡೆಗೆ ಚುನಾವಣಾ ಒಂದು ರೀತಿಯಲ್ಲಿ ನಡೆಯುತ್ತಿದ್ದರೆ ಮಂಡ್ಯದಲ್ಲಿ ಮಾತ್ರ ವಿಭಿನ್ನವಾಗಿದೆ. ಒಂದು ಕಡೆ ಮುಖ್ಯಮಂತ್ರಿಗಳ ಪುತ್ರ ಇನ್ನೊಂದು ಕಡೆ ಅಂಬರೀಶ್ ಅವರ ಪತ್ನಿ ಸುಮಲತಾ ಸ್ಪರ್ಧೆಯಲ್ಲಿದ್ದಾರೆ ಸುಮಲತಾ ಪರ ಪ್ರಚಾರಕ್ಕೆ ನಿಂತ ದರ್ಶನ್ ಯಶ್ ಮತ್ತು ನಿಖಿಲ್ ನಡುವೆ ಟೀಕಾಪ್ರಹಾರಗಳು ಜೋರಾಗಿವೆ. ಅದರಂತೆ ಇಂದು ಪ್ರಚಾರಕ್ಕೆ ಇಳಿದ ದರ್ಶನ್ ಇವತ್ತು ಒಂದು ನಾಯಿ ತೆಗೆದುಕೊಳ್ಳಬೇಕಾದರೆ ಐದು ಸಾವಿರ ರೂ. ಹಣ ಬೇಕು, ನಿಮ್ಮ ಮತವನ್ನು ಕೇವಲ 500 ರೂ ಮಾರಬೇಡಿ ಎಂದು ಹೇಳಿದ್ದಾರೆ.

Also read: ಮತ್ತೆ ಜ್ಯೋತಿಷ್ಯ ನುಡಿದು ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ; ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಘೋಷಣೆ..

ಹೌದು ರೈತರು ಎರಡು ಎತ್ತುಗಳನ್ನು ಖರೀಧಿಸಲು ಒಂದೂವರೆ ಲಕ್ಷ ರೂ. ಖರ್ಚು ಮಾಡುತ್ತೇವೆ. ಇನ್ನೂ ಹಾಲು ಕರೆಯುವ ಹಸು ತೆಗೆದುಕೊಳ್ಳಲು 70-80 ಸಾವಿರ ಹಣ ಬೇಕು. ಅದೇ ರೀತಿ ಒಂದು ಕುರಿ ಕೊಳ್ಳಲು 15-20 ಸಾವಿರ ಹಣ ಬೇಕು. ಇದೆಲ್ಲಾ ಬಿಡಿ ಒಂದು ನಾಯಿಗೆ ಐದು ಸಾವಿರ ಬೇಕು. ಇನ್ನು 500-ಸಾವಿರ ಹಣ ಪಡೆದು ನಿಮ್ಮ ಮತ ನೀಡಿದರೆ ಬೆಳೆಯಲ್ಲಿರುತ್ತೆ ಎಂದು ಮತದಾರರಿಗೆ ವಿಶೇಷ ಮನವಿ ಮಾಡಿದ್ದಾರೆ. ಈ ವಿಷಯವನ್ನು ಕೆ.ಆರ್ ನಗರದ ಭೇರ್ಯ ಹೋಬಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ದರ್ಶನ್, ಒಂದು ವೇಳೆ ಹಣ ಪಡೆದು ಮತ ಹಾಕಿದರೆ ನಾವು ಪ್ರಾಣಿಗಳಿಗಿಂತ ಕಡೆಯಾಗುತ್ತೇವೆ.

ಆಗ ಮನುಷ್ಯರು ಅಂದರೆ ಬೆಲೆ ಇರಲ್ಲ. ಹೀಗಾಗಿ ಯಾವುದೇ ಆಮಿಷಕ್ಕೂ ಒಳಗಾಗದೇ ಅಮ್ಮನಿಗೆ ಅವಕಾಶ ಮಾಡಿಕೊಡಿ. ಅಮ್ಮ ಯಾರನ್ನು ನಂಬಿ ಬಂದಿಲ್ಲ. ನಿಮ್ಮನ್ನ ನಂಬಿ ಬಂದಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ. ಇದೆಲ್ಲ ವಿಚಾರ ಯಾಕೆ ಬರುತ್ತಿದೆ ಎಂದರೆ ಜೆಡಿಎಸ್ ಪಕ್ಷದಿಂದ ಹಣದ ಹೊಳೆ ಹರಿದಿದೆ ಎನ್ನುವ ಅನುಮಾನ ಮಂಡ್ಯದ ತುಂಬೆಲ್ಲ ಹರಿದಾಡುತ್ತಿದೆ. ಅದರಲ್ಲಿ ರಾಜ್ಯದ ಮುಖ್ಯಮಂತ್ರಿಯವರ ಮಗ ಅವರ ಬಾಲಿ ಸಾಕಷ್ಟು ಹಣ ವಿರುತ್ತದೆ. ಅದಕ್ಕಾಗಿ ಈ ಬಾರಿ ಚುನಾವಣೆ ಹಣದಿಂದಲೇ ವೋಟ್ ಪಡೆಯುತ್ತಿದ್ದಾರೆ ಎಂದು ಪ್ರತಿಪಕ್ಷಗಳು ದೂರಿವೆ.

ಸುಮಲತಾ ವಿರುದ್ದ ಸಿಎಂ ಆರೋಪ:

Also read: ಸುಮಲತಾ ಅವರಿಗೆ ವೋಟ್ ಹಾಕಲ್ಲ, ಮಂಡ್ಯದಲ್ಲಿ ಮುಸ್ಲಿಮರಿಂದ ಬಹಿರಂಗ ಹೇಳಿಕೆ; ಮೋದಿ ಆಶೀರ್ವಾದ ಸುಮಲತಾಗೆ ಮುಳುವಾಯಿತೆ??

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವಾಗ ಸುಮಲತಾ ಅವರು ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದು ತಲೆಗೆ ಪೆಟ್ಟು ಮಾಡಿಕೊಂಡು ನಾಟಕ ಮಾಡಲು ಯೋಜನೆ ರೂಪಿಸಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿ ರೀತಿ ತಾವು ಯಾವುದೇ ಕುತಂತ್ರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿ. ಮಾತನಾಡುತ ಮೈತ್ರಿ ಅಭ್ಯರ್ಥಿ ನಿಖಿಲ್​ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿವೆ. ತಮಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಇನ್ನೊಂದು ಮುಖ ನೋಡಿಲ್ಲ ಅಂತಾರೆ. ಅವರು ಬಂದಾಗ ಇನ್ನೊಂದು ಮುಖ ತೋರಿಸಿ ಎಂದು ಕೇಳಿ. ಅವರ ಬಗ್ಗೆ ನಮಗೆಲ್ಲ ಗೊತ್ತಿದೆ, ಈಗ ಆ ಚರ್ಚೆ ಬೇಡ ಎಂದು ಅವರು ಹೇಳಿದ್ದಾರೆ.

ಸಿಎಂ ಗೆ ಸುಮಲತಾ ತಿರುಗೇಟು:

Also read: ಮನೆಗೆ ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ; ಎಂದು ಯಶ್ ಗೆ ಟೀಕೆ ಮಾಡಿದ ನಿಖಿಲ್ ಗೆ ಯಶ್ ಹೇಳಿದ್ದೇನು ಗೊತ್ತಾ..

ಸುಮಲತಾ ಅಂಬರೀಶ್ ಬಗ್ಗೆ ಕುಮಾರಸ್ವಾಮಿ ನೀಡಿದ ಕುತಂತ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು , ತಮಗೆ ನಾಟಕ ಮಾಡಿ ಏನೂ ಆಗಬೇಕಾಗಿಲ್ಲ. ಏ.16 ರಂದು ಜೆಡಿಎಸ್ ನಾಯಕರೇ ಹಲ್ಲೆ ಮಾಡಲು ಯೋಜನೆ ರೂಪಿಸಿರಬಹುದು. ಏಕೆಂದರೆ ಅವರೇ ಡೇಟ್​, ಟೈಮ್​ ಎಲ್ಲವನ್ನು ಹೇಳಿದ್ದಾರೆ. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಅವರ ಕೈಯಲ್ಲಿದೆ. ಅದಕ್ಕಾಗಿ ಮಾಧ್ಯಮದ ವರದಿಗಾರರ ಮೇಲ್ಲೆ ಹಲ್ಲೆ ನಡೆದರೆ ತಾವು ಜವಾಬ್ದಾರರಲ್ಲ ಎಂದು ಹೇಳುವ ಮೂಲಕ ಹಲ್ಲೆ ನಡೆಸಿ ಎಂಬ ಸಂದೇಶವನ್ನು ನೀಡಿದ್ದಾರೆ. ಆ ಮೂಲಕ ಮಾಧ್ಯಮಗಳಿಗೂ ಬೆದರಿಕೆ ಒಡ್ಡುತ್ತಿದ್ದಾರೆ. ಈ ರೀತಿ ಮುಖ್ಯಮಂತ್ರಿ ಅವರೇ ಪ್ರಚೋದನೆ ನೀಡಿದರೆ ಸಾಮಾನ್ಯರಾದ ನಮ್ಮ ಗತಿಯೇನು? ಇದು ಪ್ರಜಾಪ್ರಭುತ್ವ ರಾಜ್ಯವೇ ಎಂಬ ಅನುಮಾನ ಮೂಡುತ್ತಿದೆ ಎಂದು ಸಿಎಂ ಗೆ ತಿರುಗೇಟು ನೀಡಿದ್ದಾರೆ.