ದರ್ಶನ್-ರೊಂದಿಗೆ ಮಾತನಾಡಬೇಕೆನ್ನುವ ತನ್ನ ಕೊನೆಯಾಸಿ ಈಡೇರಿಸಿಕೊಂಡು ಚಿರನಿದ್ರೆಗೆ ಜಾರಿದ ದರ್ಶನ್-ರವರ ದೊಡ್ಡ ಅಭಿಮಾನಿ!!

0
648

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಪ್ಪಟ ಅಭಿಮಾನಿ ರೇವಂತ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಹಲವು ವರ್ಷಗಳಿಂದ ದರ್ಶನ್ ಅವರನ್ನೇ ಆರಾಧಿಸುತ್ತಿದ್ದ ರೇವಂತ್, ತನ್ನ ಕೊನೆಯಾಸೆ ನೆರವೇರಿದ ನಂತರ ಕೊನೆಯುಸಿರೆಳೆದಿದ್ದಾರೆ.

ರೇವಂತ್ ಬದುಕುವುದು ಇನ್ನು ಕೆಲವೇ ದಿನಗಳು ಎಂದು ವೈದ್ಯರು ತಿಳಿಸಿದ್ದರು. ಈ ವೇಳೆ ರೇವಂತ್ ಸಾಯುವ ಮುನ್ನ ದರ್ಶನ್ ಅವರನ್ನ ಭೇಟಿ ಮಾಡಬೇಕು ಅದೇ ನನ್ನ ಜೀವನದ ಕಡೆ ಆಸೆ ಎನ್ನುವುದನ್ನ ತಿಳಿಸಿದ್ದರು. ಈ ವಿಚಾರ ತಿಳಿದ ದರ್ಶನ್ ಅಭಿಮಾನಿಗಳು ದರ್ಶನ್ ಅವರನ್ನ ರೇವಂತ್ ಅವರಿಗೆ ಭೇಟಿ ಮಾಡಿಸುವ ಪ್ರಯತ್ನವನ್ನ ಮಾಡಿದ್ದರು.

ವಿಚಾರ ತಿಳಿಸಿದ ತಕ್ಷಣ ರೇವಂತ್ ಅವರೊಂದಿಗೆ ವಿಡಿಯೋ ಕಾಲ್ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು ದರ್ಶನ್. ಕೆಲಸದ ಮಧ್ಯೆ ತೊಂದರೆ ಕೊಟ್ಟೆ ಎಂದು ರೇವಂತ್, ದರ್ಶನ್ ಅವರ ಬಳಿ ಕ್ಷಮೆ ಕೇಳಿದ್ದರು. ನೆಚ್ಚಿನ ಸ್ಟಾರ್ ನನ್ನು ಕಣ್ಣು ತುಂಬಾ ನೋಡಿ ಆನಂದ ಪಟ್ಟಿದ್ದ ರೇವಂತ್ ಮತ್ತೆಂದಿಗೂ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ರೇವಂತ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ವೈದ್ಯರು ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ಎನ್ನುವುದನ್ನ ಖಚಿತ ಪಡಿಸಿದ್ದರು. ಆದರೆ ಸಾಯುವ ಮುನ್ನ ದರ್ಶನ್ ಅವರನ್ನ ನೋಡಲೇಬೇಕು ಎನ್ನುವುದು ರೇವಂತ್ ಆಸೆ ಆಗಿತ್ತು ಅದರಂತೆ ದರ್ಶನ್ ಅವರನ್ನ ನೋಡಿ ಆಸೆ ತೀರಿಸಿಕೊಂಡ ನಂತರ ಪ್ರಾಣ ಬಿಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿ ರೇವಂತ್  ಶಿವಮೊಗ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ರೇವಂತ್ ಸಾವನ್ನಪ್ಪಿದ್ದಾರೆ.

ರೇವಂತ್ ದರ್ಶನ್ ಅವರ ಅಪ್ಪಟ ಅಭಿಮಾನಿ. ಸಾಕಷ್ಟು ವರ್ಷಗಳಿಂದ ದರ್ಶನ್ ಅವರ ಸಿನಿಮಾಗಳನ್ನ ನೋಡಿಕೊಂಡು ಬೆಳೆದು ಬಂದವರು. ತುಂಬಾ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ.ಮತ್ತೊಂದು ವಿಶೇಷ ಅಂದರೆ, ದರ್ಶನ್ ಹಾಗೂ ರೇವಂತ್ ಇಬ್ಬರದ್ದೂ ಇದೇ ತಿಂಗಳಲ್ಲಿ ಹುಟ್ಟುಹಬ್ಬ. ಪ್ರತಿವರ್ಷ ರೇವಂತ್ ದರ್ಶನ್ ಅವರ ಬರ್ತಡೇ ಆಚರಣೆ ಮಾಡಲು ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡುವ ಮುನ್ನವೇ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾರೆ.

Also read: ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೀರೋ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್…!!