ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದ ನಾಯಕನಿಗೆ ಅಪಘಾತ…!!

0
1447

ಖ್ಯಾತ ತೆಲುಗು ಚಿತ್ರ ನಟ, ಅಭಿಮಾನಿಗಳ “ನ್ಯಾಚುರಲ್ ಸ್ಟಾರ್” ನಾನಿ ಅವರ ಕಾರು ಅಪಘಾತಕೀಡಾಗಿದೆ. ಮೆರ್ಲಪಾಕ ಗಾಂಧಿ ನಿರ್ದೇಶನದ “ಕೃಷ್ಣಾರ್ಜುನ ಯುದ್ದಂ” ಚಿತ್ರದ ಚಿತ್ರೀಕರಣ ಮುಗಿಸಿ ಮನೆಗೆ ಹಿಂದಿರುತ್ತಿದ್ದಾಗ ಅಪಘಾತ ಸಂಭವಿಸಿದೆ. ನಾನಿ ಅವರು ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ನಟ ನಾನಿಯ ಕಾರು ನಿನ್ನೆ ಸಂಜೆ 4.30 ಕ್ಕೆ ಜುಬಿಲಿ ಹಿಲ್ಸ್ ರಸ್ತೆ ನ.45 ರಲ್ಲಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ನಟ ನಾನಿ ಮತ್ತು ಅವರ ಡ್ರೈವರ್’ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರಿನಲ್ಲಿ ಏರ್ ಬ್ಯಾಗ್’ ಗಳನ್ನು ಅಳವಡಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ಕೂಡಲೇ ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಆತಂಕ ಪಡುವ ಅವಶ್ಯಕತೆ ಏನು ಇಲ್ಲ, ನಾನು ಚೆನ್ನಾಗಿ ಇದ್ದೇನೆ, ಒಂದೇ ವಾರದಲ್ಲಿ ಚೇತರಿಸಿಕೊಳ್ಳುತ್ತೇನೆ, ಎಂದು ನಾನಿ ಅವರು ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ. ನಾನಿಯವರು, ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಯಶಸ್ವಿ ಚಿತ್ರವಾದ “ಈಗ” ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಈ ಚಿತ್ರ ದೇಶದೆಲ್ಲೆಡೆ ಪ್ರಸಿದ್ದಿ ಹೊಂದಿ ಹಲವಾರು ಭಾಷೆಯಲ್ಲಿ ಡಬ್ ಕೂಡ ಆಗಿತ್ತು.

ನಾನಿಯವರು ಕಳೆದ 2 ವರ್ಷಗಗಳಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ ಮತ್ತು ಅವರ ಪ್ರತಿ ಚಿತ್ರವೂ ವಿಶೇಷತೆಯಿಂದ ಕೂಡಿರುತ್ತದೆ. ಅವರು ಇತ್ತೀಚಿಗೆ ನಟಿಸಿದ ಜಂಟಲ್ ಮೆನ್, ನಿನ್ನ ಕೋರಿ, ನೇನು ಲೋಕಲ್, ಮತ್ತು ಮಿಡೆಲ್ ಕ್ಲಾಸ್ ಅಬ್ಬಾಯಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಗಳಿಕೆಯನ್ನು ಕಂಡಿವೆ.