ಎರಡು ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ನಟಿ ರಮ್ಯಾ ಏನು ಹೇಳಿದರು ಅಂತ ಗೊತ್ತ…

0
1107

ಈಗಾಗಲೇ ಗುಜುರಾತ್ ಮತ್ತು ಹಿಮಾಚಲ್-ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾದಿಸುತ್ತಿದ್ದಂತ್ತೆಯೇ, ಎಲ್ಲರೂ ತಮ್ಮ, ತಮ್ಮ ಶೈಲಿಯಲ್ಲಿ ಅಭಿನಂದನೆಯನ್ನು ತಿಳಿಸುತ್ತಿದ್ದಾರೆ. ಬಿಜೆಪಿಯ ಗೆಲುವಿನ ಬಗ್ಗೆ ಹಾಗು ತಮ್ಮ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ನಟಿ ಹಾಗು ಮಂಡ್ಯ ಜಿಲ್ಲೆಯ ಮಾಜಿ MP ಏನೆಂದರು ನೋಡಿ.

ಬೇರೆ ರಾಜ್ಯಗಳ ಚುನಾವಣೆ ಹೋಲಿಸಿದರೆ ಬಿಜೆಪಿಯ ದೊಡ್ಡ ನಾಯಕರು ಗುಜುರಾತ್ ಮತ್ತು ಹಿಮಾಚಲ್-ಪ್ರದೇಶದಲ್ಲಿ ಅತಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಹೀಗಾಗಿ ಕೇಸರಿ ಪಕ್ಷ ಇಲ್ಲಿ ಅರಳಿದೆ, ಇಲ್ಲಿ ಪ್ರಚಾರ ಮಾಡಿದಂತೆ ಬೇರೆ ರಾಜ್ಯದಲ್ಲಿ ಬಿಜೆಪಿ ಪ್ರಚಾರ ನಡೆಸಿಲ್ಲ ಎಂದು ಹೇಳಿದ್ದಾರೆ ರಮ್ಯಾ.

ರಮ್ಯಾ “ಬಿಜೆಪಿಗೆ ಧನ್ಯವಾದ”, “ಇಷ್ಟಕ್ಕೆ ನಾವು ಸುಮ್ಮನಾಗಲ್ಲ” ನಮ್ಮ ಹೋರಾಟ ಮುಂದುವರೆಯಲಿದೆ ಅಂತ ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದಾರೆ. ರಮ್ಯಾ ಅವರ ಈ ಟ್ವೀಟ್-ಗೆ ಸಾಕಷ್ಟು ಜನ ಪ್ರತಿಕ್ರಹಿಸಿದ್ದಾರೆ.

ಅಂದಹಾಗೆ ಗುಜುರಾತ್-ನಲ್ಲಿ ಬಿಜೆಪಿ 99 ಸ್ಥಾನ ಪಡೆದಿದೆ, ಕಾಂಗ್ರೆಸ್ 79 ಕ್ಕೆ ತೃಪ್ತಿ ಪಟ್ಟಿದೆ ಮತ್ತು ಇತರರು 4 ಸ್ಥಾನ ಪಡೆದಿದ್ದಾರೆ. ಹಿಮಾಚಲ್ ಪ್ರದೇಶದಲ್ಲಿ ಬಿಜೆಪಿ 44 ಸ್ಥಾನ ಗಳಿಸಿದರೆ, ಕಾಂಗ್ರೆಸ್ 21 ಸ್ಥಾನ ಪಡೆದಿದೆ ಮತ್ತು ಇತರರು 3 ಸ್ಥಾನಗಳನ್ನು ಪಡೆದಿದ್ದಾರೆ.