ಪ್ರಧಾನಿ ಮೋದಿಯವರಿಗೆ ಮತ್ತೆ ರಮ್ಯಾ ಟ್ವೀಟ್; ಪಾಕಿಗೆ ಹೋಗಿ ಬಿರಿಯಾನಿ ತಿಂದು ಬಂದ ನಿಮ್ಮನ್ನು ನಂಬುವುದು ಹೇಗೆ..

0
878

ಪ್ರಧಾನಿ ಮೋದಿಯವರನ್ನು ಕೆಣಕುತ ಜನರಿಂದ ಒಂದಿಲ್ಲದೊಂದು ವ್ಯಂಗ್ಯ ಮಾತುಗಳಿಗೆ ಗುರಿಯಾಗುತ್ತಿರುವ ರಮ್ಯಾ ಸುಮ್ಮನೆ ಕೆರದು ಹುಣ್ಣು ಮಾಡಿಕೊಳ್ಳುತ್ತಿದ್ದಾಳೆ. ಟ್ವೀಟ್ ಮೂಲಕ ಮೋದಿಯವರಿಗೆ ವಿರುದ್ದವಾಗಿ ನೇರವಾಗಿ ಟ್ವೀಟ್ ಮಾಡಿ ಹಲವು ಬಾರಿ ಚಿಮಾರಿ ಹಾಕಿಸಿಕೊಂಡ ಸಿನಿಮಾ ಸುಂದರಿ ರಮ್ಯಾ ವಿರುದ್ದ ಮೋದಿ ಕಾರ್ಯಕರ್ತರು ಹೋರಾಟಕ್ಕೆ ಇಳಿದು ಬಂಧಿಸಲು ಒತ್ತಾಯಿಸಿದ ಪ್ರಕರಣಗಳು ಇವೆ ಇದೆಲ್ಲವುಗಳ ನಂತರವೂ ಮತ್ತೊಂದು ಟ್ವೀಟ್ ಮಾಡಿ ಬಾರಿ ವ್ಯಂಗ್ಯೆಗೆ ಗುರಿಯಾಗಿದ್ದಾರೆ.

Also read: ಪ್ರಧಾನಿಯನ್ನು ಚೋರ್ ಎಂದ ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಕಂಪ್ಲೇಂಟ್..!

ಹೌದು ಪ್ರಧಾನಿಯವರು ಗುಜರಾತಿನಲ್ಲಿ ಭಾಷಣ ಮಾಡಿದ ವಿಡಿಯೋ ಮೋದಿ ಟ್ವಿಟ್ಟರ್ ಖಾತೆಯಿಂದ ಅಪ್ಲೋಡ್ ಆಗಿತ್ತು. ಅದರಲ್ಲಿ ಹಿಂದೆ ನಡೆದ ಸರ್ಕಾರ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದು ಹೊಸ ಭಾರತ ಎಂದು ಮೋದಿ ಮಾತನಾಡಿದರು ಇದಕ್ಕೆ ಮರು ಟ್ವೀಟ್ ಮಾಡಿದ ರಮ್ಯಾ, 2014ರಲ್ಲಿ ನೀವು ಇದನ್ನೇ ಹೇಳಿ ನಂತರ ಪಾಕಿಸ್ತಾನಕ್ಕೆ ತೆರಳಿ ನವಾಜ್ ಷರೀಫ್ ಜೊತೆ ಬಿರಿಯಾನಿ ತಿಂದು ಮರಳಿದಿರಿ. ಹೀಗಾಗಿ ಈ ಸಮಯದಲ್ಲಿ ನಾವು ನಿಮ್ಮನ್ನು ನಂಬುವುದು ಹೇಗೆ? ನೋಟು ನಿಷೇಧ ಮಾಡಿದರೆ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದೀರಿ. ಆದರೆ ಇದು ಕಾರ್ಯಗತವಾಗಲಿಲ್ಲ. ನನ್ನ ಪ್ರಕಾರ ಸ್ಟ್ರೈಕ್ ಎಲ್ಲರನ್ನು ಹತ್ಯೆ ಮಾಡಿರಬಹುದು ಅಲ್ಲವೇ ಎಂದು ಪ್ರಶ್ನಿಸಿ ಮೋದಿ ಅವರನ್ನು ಟ್ವೀಟ್ ಮಾಡಿದ್ದಾಳೆ.

ಇದಕ್ಕೆ ಮೋದಿ ಖಾತೆಯಿಂದ ಮರು ಟ್ವೀಟ್ ಒಂದು ಬಂದು ಉಗ್ರರ ಮೇಲಿನ ಏರ್ ಸ್ಟ್ರೈಕ್ ವಿಚಾರವನ್ನು ಪ್ರಶ್ನಿಸಿದವರಿಗೆ ಪ್ರಧಾನಿ ಮೋದಿ, ಉಗ್ರರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಯನ್ನು ಸಂಶಯದಿಂದ ನೋಡುತ್ತೀರಿ. ನಿಮಗೆ ಅವರ ಮೇಲೆ ನಂಬಿಕೆ ಇಲ್ಲವೇ? ನಮ್ಮ ಸೇನೆಯ ಬಗ್ಗೆ ನಿಮಗೆ ಹೆಮ್ಮೆ ಇಲ್ಲವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಯಾಗಿ ರಮ್ಯಾ ನಮಗೆ ಸೇನೆ ಮೇಲೆ ನಂಬಿಕೆಯಿದೆ. ಸೇನೆ ಯಾವಾಗಲೂ ದಾಖಲೆ ಇಟ್ಟುಕೊಂಡು ಮಾತನಾಡುತ್ತದೆ. ಆದರೆ ನಮಗೆ ನಿಮ್ಮ ಮೇಲೆ ನಂಬಿಕೆಯಿಲ್ಲ. ನೀವು ಸದಾ ಸುಳ್ಳು ಹೇಳುತ್ತೀರಿ ಎಂದು ಮೋದಿ ವಿರುದ್ಧ ಟ್ವೀಟ್ ಮಾಡಿದ್ದಾರೆ.

ಇದು ಇಷ್ಟಕ್ಕೆ ನಿಲ್ಲದೆ ಟ್ವೀಟ್-ಗರು ರಮ್ಯಾನನ್ನು ತರಾಟೆಗೆ ತೆಗೆದುಕೊಂಡು ಮೋದಿ ಬಿರಿಯಾನಿ ತಿಂದಿದು ಒಂದು ಫೋಟೋ ಇದ್ದರೆ ಹಾಕಿ ಪುಣ್ಯ ಕಟ್ಟಿಕೊ ಅದು ಬಿಟು ಬಾಯಿಗೆ ಬಂದ ಹಾಗೆ ಟ್ವೀಟ್ ಮಾಡೋದು ಅಲ್ಲಾ.. ನೀನೇ ತಾನೇ ಪಾಕಿಸ್ತಾನ್ ಸ್ವರ್ಗ ಅಂದಿದು. ಇವಾಗೆ ಏನಾಯಿತು? ಯಾಕೆ demonetisation ಇಂದ ಪಾಕಿಸ್ತಾನ್ ಭಿಕಾರಿ ದೇಶ ಆಯ್ತು ಅಂತ ಬೇಜಾರ್? ರಮ್ಯಾ ನೀನು ಪಾಪ.. ನಿನ್ನ ಸ್ವರ್ಗದಂತಹ ದೇಶಕ್ಕೆ ಈ ಗತಿ ಬರಬಾರದಿತ್ತು. ಎಂದು ಟ್ವೀಟ್ ಮಾಡಿದರೆ ಇನ್ನೂ ಕೆಲವರು ಟ್ವೀಟ್ ಮಾಡಿ.

Also read: ರಮ್ಯಾ ಫೇಕ್ ಅಕೌಂಟ್ ಗಳ ಬಗ್ಗೆ ಪಾಠ ಮಾಡಿರುವ ವೀಡಿಯೊ ಎಲ್ಲೆಡೆ ವೈರಲ್, ಇದಕ್ಕೆ ರಮ್ಯಾ ಏನು ಟ್ವೀಟ್ ಮಾಡಿದ್ದಾರೆ ಗೊತ್ತಾ?

ನೀನು ಪಾಕಿಸ್ತಾನಕ್ಕೆ ಹೋಗಿ ಸ್ವರ್ಗ ಕಂಡು ಬಂದಿಲ್ವ?? ಮೊನ್ನೆ ನಿಮ್ಮ ಸಿದ್ದು ಹೋಗಿಲ್ವ?? ನಮ್ಮ ಮೋದಿ ಹೋಗಿರೋದೇನೋ ನಿಜ. ಬಿರಿಯಾನಿ ತಿಂದ್ರು ಅನ್ನೋದುಕ್ಕೆ ಸಾಕ್ಷಿ ಏನು?? ಒಳ್ಳೆ Lkg ಮಗುತರ ಸಿಲ್ಲಿ questions ಕೆಳತ್ತಾಳೆ . ಹೋಗಿ ನಿಮ್ಮ ಪ್ರಾಣಕಾಂತನ ಹತ್ರ ಕೇಳು ಉತ್ತರ ಸಿಕ್ಕರೂ ಸಿಗಬಹುದು.. ಎಂದು ಟ್ವೀಟ್ ಮಾಡಿದ್ದಾರೆ. ಇದೆ ರೀತಿ ದಿವ್ಯಾ ಸ್ಪಂದನ ರಮ್ಯಾ ಮೋದಿಯವರಿಗೆ ಚೋರ್ ಎಂದು ಟ್ವೀಟ್ ಮಾಡಿ ಮೋದಿ ಅವರ ಚಿತ್ರವನ್ನು ಫೋಟೊ ಶಾಪ್​ ಮಾಡಿ ಪ್ರಧಾನಿ ಕಳ್ಳ ಎಂದು ಪೋಟೋವನ್ನು ಟ್ವೀಟ್​ ಮಾಡಿದ್ದರು. ಅಲ್ಲದೇ ‘ಕಳ್ಳ ಪ್ರಧಾನಿ ಸುಮ್ಮನಿದ್ದಾರೆ’ ಎಂದು ಹ್ಯಾಷ್ ಟ್ಯಾಗ್​ ನಲ್ಲಿ ಬರೆದಿದ್ದರು. ಈ ಟ್ವೀಟ್​ ವಿರುದ್ಧ ಸಾಮಾಜಿಕ ಕಾರ್ಯಕರ್ತ, ವಕೀಲರಾದ ಸೈಯ್ಯದ್​ ರಿಜ್ವಾನ್​ ಅವರು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ ಸೆಕ್ಷನ್​ 67 ಮತ್ತು ದೇಶದ್ರೋಹ (ಸೆಕ್ಷನ್​ 124ಎ) ಆಧಾರದ ಮೇಲೆ ಪ್ರಕರಣ ದಾಖಲಿಸಿದರು.