Kannada News | Health tips in kannada
ನೀರಿಗೆ ಶುಂಠಿ ಸೇರಿಸಿ ಕುಡಿದರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ
ಚರ್ಮ ಮತ್ತು ಕೂದಲುಗಳಿಗೆ
ಶುಂಠಿಯಲ್ಲಿರುವ ಪೋಷಕ ಸತ್ವಗಳು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಗುಣವು ಕೂದಲುಗಳು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.
ಮಧುಮೇಹ
ಶುಂಠಿ ಮತ್ತು ನಿಂಬೆ ರಸ ಹಾಕಿದ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹವನ್ನು ದೂರ ಮಾಡಬಹುದು.
ಜೀರ್ಣಕ್ರಿಯೆ
ಪ್ರತಿದಿನ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗಿಸುವುದಲ್ಲದೆ, ತಲೆ ಸುತ್ತುವುದು, ಎದೆಯುರಿ ಮುಂತಾದ ಸಮಸ್ಯೆ ನಿವಾರಣೆಯಾಗಬಹುದು. ಅಷ್ಟೇ ಅಲ್ಲದೆ, ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಬೆಳಗಿನ ಸಂಕಟದಿಂದ ಪಾರಾಗಬಹುದು.
ತೂಕ ಇಳಿಸಲು
ಶುಂಠಿ ಹಾಕಿದ ನೀರು ಸಕ್ಕರೆ ಅಂಶ ನಿಯಂತ್ರಿಸುವುದರಿಂದ ಅತಿಯಾಗಿ ಆಹಾರ ಸೇವಿಸುವ ಮೋಹವೂ ಕಡಿಮೆಯಾಗುವುದು. ಇದು ಕೊಬ್ಬು ಹೀರಿಕೊಳ್ಳುವ ಶಕ್ತಿ ವೃದ್ಧಿಸುವುದರಿಂದ ತೂಕ ಇಳಿಕೆಗೆ ಸಹಕಾರಿ.
Also Read: ತಲೆ ಹೊಟ್ಟು ನಿಯಂತ್ರಣಕ್ಕೆ ಇಲ್ಲಿದೆ ನೋಡಿ ಮನೆ ಮದ್ದು..!