ಆಧಾರ್ ಇಲ್ಲದಿದ್ದರೆ ಸಿಮ್ ಕಾರ್ಡ್ ಬಂದ್

0
584

ನವದೆಹಲಿ, ಮಾರ್ಚ್ 24: ಹೊಸ ಸಿಮ್ ಕಾರ್ಡ್ ಪಡೆಯುವ ಯಾವುದೇ ಗ್ರಾಹಕನಿಗೆ ಶೀಘ್ರದಲ್ಲೇ ಆಧಾರ್ ಕಡ್ಡಾಯವಾಗಲಿದೆ ಎಂದು ಮೂಲಗಳು ಹೇಳಿವೆ.

ನೂತನ ಮೊಬೈಲ್ ಸಂಪರ್ಕ ಪಡೆಯುವ ಗ್ರಾಹಕನಿಗೆ ಇನ್ನು ಆಧಾರ್ ಕಾರ್ಡ್ ಕಡ್ಡಾಯಗೊಳಿಸಬೇಕೆಂದು ಈಗಾಗಲೇ ಕೇಂದ್ರ ಸರ್ಕಾರ, ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಟೆಲಿಕಾಂ ಸರ್ವೀಸ್ ಕಂಪನಿಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ ಎಂದು ಹೇಳಲಾಗಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಹಾಗಾಗಿ, ಹೊಸ ಸಿಮ್ ಕಾರ್ಡ್ ಪಡೆಯ ಬಯಸುವ ಯಾವುದೇ ಗ್ರಾಹಕ ತನ್ನ ಗುರುತಿಗಾಗಿ ನೀಡುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ನ ನಕಲು ಪ್ರತಿ ಕಡ್ಡಾಯವಾಗಲಿದೆ.

ಹಾಲಿ ಗ್ರಾಹಕರಿಗೂ ಕಡ್ಡಾಯ: ಅಷ್ಟೇ ಅಲ್ಲ, ಈಗಾಗಲೇ ಸೆಲ್ಯೂಲಾರ್ ಸೇವೆ ಪಡೆಯುತ್ತಿರುವ ಗ್ರಾಹಕರೂ ತಮ್ಮ ಸೇವೆಗಳನ್ನು ಮುಂದುವರಿಸಲು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕಿದೆ.

ಹೀಗೆ, ಲಿಂಕ್ ಆದ ಆಧಾರ್ ಕಾರ್ಡ್ ಸಂಖ್ಯೆಗಳನ್ನು ಸಂಬಂಧಪಟ್ಟ ಸೆಲ್ಯೂಲಾರ್ ಕಂಪನಿಗಳು ಮರುಪರಿಶೀಲಿಸಿ, ಆನಂತರವಷ್ಟೇ ಸೇವೆ ಮುಂದುವರಿಸಬೇಕು ಎಂದೂ ಹೇಳಲಾಗಿದೆ.