ಅಡುಗೆ ಮನೆಯಲ್ಲಿ ಯಾವಾಗ ಏನು ಮಾಡಬೇಕು….!

0
1304

ಅಡುಗೆ ಮನೆ ಟಿಪ್ಸ್

Related image

ತರಕಾರಿಗಳನ್ನು ತೊಳೆದು ಹೆಚ್ಚಿದ ತಕ್ಷಣ ಬೇಯಲು ಇಡಿ.
ಯಾವುದೇ ತರಕಾರಿಯನ್ನು ಎಣ್ಣೆ ಒಗ್ಗರಣೆಯಲ್ಲಿ ಮುಚ್ಚಿಟ್ಟು ಬೇಯಿಸುವಾಗ ಮುಚ್ಚಿಟ್ಟ ತಟ್ಟೆಯಲ್ಲಿ ಒಂದಿಷ್ಟು ನೀರು ಹಾಕಿ, ಬೇಯಲಿಟ್ಟ ತರಕಾರಿ ಹದವಾಗಿ ಬೇಯುತ್ತದೆ ಮತ್ತು ಸೀಯುವುದಿಲ್ಲ.

Image result for chapati mixing
ಪೂರಿ ಅಥವಾ ಚಪಾತಿಗೆ ಹಿಟ್ಟು ನಾದಿಕೊಳ್ಳುವಾಗ 2 ಚಮಚ ಎಣ್ಣೆ ಹಾಕಿ ನಾದಿಕೊಂಡರೆ ತುಂಬಾ ತೆಳ್ಳಗೆ ಲಟ್ಟಿಸಿದ ಚಪಾತಿ ಮಣೆಗೆ ಅಂಟಿಕೊಳ್ಳುವುದಿಲ್ಲ.

Image result for holige hurana
ಹೋಳಿಗೆ ಹೂರಣ ಸಡಿಲವಾದರೆ ಎರಡು ಹಿಡಿ ಅವಲಕ್ಕಿ ನುಣ್ಣಗೆ ಪುಡಿ ಮಾಡಿ ಹೂರಣಕ್ಕೆ ಬೆರೆಸಿ 10 ನಿಮಿಷದಲ್ಲಿ ಹೂರಣ ಹದವಾಗುತ್ತದೆ.

Image result for chitranna
ಚಿತ್ರಾನ್ನ ಮಾಡಬೇಕಾದಲ್ಲಿ ಅನ್ನಕ್ಕಿಡುವಾಗಲೇ 2 ಚಮಚ ತುಪ್ಪ, ಚಿಟಿಕೆ ಅರಿಶಿನ ಹಾಕಿ ಬೆಂದ ಅನ್ನ ಸಮಾನವಾದ ಬಣ್ಣ ಪಡೆಯುತ್ತದಲ್ಲದೆ ಉದುರಾಗಿರುತ್ತದೆ.
ಹಸಿಮೆಣಸಿನಕಾಯಿ ಕತ್ತರಿಸಲು ಉತ್ತಮವಾದ ಸ್ಟೀಲ್ ಕತ್ತರಿ ಬಳಸಿ ಕೈ ಉರಿ ತಪ್ಪಿಸಿಕೊಳ್ಳಿ.

ಹಸಿಮೆಣಸಿನಕಾಯಿಯನ್ನು ಒಂದು ಚಮಚೆ ಉಪ್ಪಿನೊಂದಿಗೆ ರುಬ್ಬಿ, ಶುಂಠಿ, ಬೆಳ್ಳುಳ್ಳಿ ಮಿಶ್ರಣ ರುಬ್ಬಿ ಮುಚ್ಚಿಟ್ಟ ಡಬ್ಬಿಯಲ್ಲಿರಲಿ. ಇದರಿಂದ ಫ್ರಿಜ್‍ನಲ್ಲಿ ವಾಸನೆ ಉಂಟಾಗುವುದು ತಪ್ಪುತ್ತದೆ.