ನ್ಯಾಯದಾನ ಮಾಡುವಾಗ ಹೃದಯದ ಮಾತನ್ನೂ ಕೇಳಬೇಕು: ಗೋಪಾಲ ಗೌಡ

0
431

ನ್ಯಾಯದಾನ ಮಾಡುವಾಗ ಹೃದಯದ ಮಾತನ್ನೂ ಕೇಳಬೇಕು: ಗೋಪಾಲ ಗೌಡ ಬೀಳ್ಕೊಡುಗೆ ವೇಳೆ ಸುಪ್ರೀಂ ಕೋರ್ಟ್ ಜಡ್ಜ್ ದೇವ್ ಸಲಹೆ

ಜನಸಾಮಾನ್ಯರಿಗೆ ನ್ಯಾಯದಾನ ಮಾಡು ವಾಗ ನ್ಯಾಯಾಧೀಶರು ಪ್ರಕರಣದ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳಬೇಕು. ಹೃದಯ ಮಾತು ಆಲಿಸ ಬೇಕೆ ಹೊರತು ಕೇವಲ ಬುದ್ಧಿ ಉಪಯೋಗಿಸಿದರೆ ಸಾಲದು ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ಅನಿಲ್ ಆರ್.ದೇವ್ ಸಲಹೆ ನೀಡಿದ್ದಾರೆ.

ಕರ್ನಾಟಕ ಮೂಲದ ನ್ಯಾಯಾಧೀಶ ವಿ. ಗೋಪಾಲ ಗೌಡ ಅವರಿಗೆ ಬಾರ್ ಕೌನ್ಸಿಲ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೋಪಾಲ್ ಗೌಡ ಅವರು, ೨೦೧೨ರಲ್ಲಿ ಸುಪ್ರೀಂ ಕೋರ್ಟ್ ಪ್ರವೇಶಿಸಿದ್ದು, ಶುಕ್ರವಾರ ನಿವೃತ್ತರಾದರು.

ನ್ಯಾಯಾಧೀಶರು ಕೂಡಾ ಭಾವನೆಗಳಿರುವ ಮನುಷ್ಯರೆ. ಬುದ್ಧಿಮತ್ತೆ ಒಂದೇ ಮಾನದಂಡವಲ್ಲ. ಪ್ರಕರಣಗಳ ಹಿಂದಿನ ಜನರ ಭಾವನೆ ಅರಿಯಬೇಕು. ಈ ನಿಟ್ಟಿನಲ್ಲಿ ಗೋಪಾಲ ಗೌಡರು ನಮಗೆ ಮಾದರಿ ಎಂದು ಅನಿಲ್ ದೇವ್ ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಗೋಪಾಲ ಗೌಡರು, ನಿವೃತ್ತಿ ಆದೆ ಎಂದು ಮನೆಯಲ್ಲಿ ಕೂರಲ್ಲ. ಬಡವರಿಗಾಗಿ ಮುಂ ದೆಯೂ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.