20 ವರ್ಷದ ನಂತರ ಸಲಿಂಗಕಾಮದ ಬಾವುಟ.. ಐತಿಹಾಸಿಕ ಸುಪ್ರಿಂ’ ತೀರ್ಪಿಗೆ ಗಣ್ಯಾತಿ-ಗಣ್ಯರಿಂದ ಮೆಚ್ಚುಗೆ..!!

0
562

ಸಲಿಂಗಕಾಮಕೇ ಸುಪ್ರಿಂಕೋರ್ಟ್ ಐತಿಹಾಸಿಕ ತೀರ್ಪು:
ಸಮಾಜದಲ್ಲಿ ಅಸಹ್ಯಕರವಾದ ಸಲಿಂಗಕಾಮದ ವಿರುದ್ದ ದೇಶದೆಲ್ಲೆಡೆ ಕೆಟ್ಟ ಮಾತುಗಳು ಕೇಳಿ ಬಂದು ದೊಡ್ಡ ವಿವಾದವನ್ನು ಸೃಷ್ಠಿಮಾಡಿ ಸುಮಾರು 20 ವರ್ಷಗಲಿಂದ ಸುಪ್ರಿಂಕೋರ್ಟ್ ನಲ್ಲಿ ವಾಘದಾನ ನಡಿತಾನೆ ಇತ್ತು. 377 ರ ಅನುಸಾರ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಲಾಗಿತ್ತು. ಇದರ ಪರವಾಗಿ ನಾಜ್​ ಫೌಂಡೇಷನ್​ ಹೆಸರಿನ ಎನ್​ಜಿಒ ಒಂದು ಸಲಿಂಗಿಗಳ ಹಕ್ಕುಗಳಿಗಾಗಿ ದೀರ್ಘ ಕಾಲದಿಂದ ಹೋರಾಟ ಮಾಡುತ್ತಾನೆ ಬಂದಿತು. 2013ರಲ್ಲಿ ಸಲಿಂಗ ಸಂಬಂಧವನ್ನು ಅಪರಾಧವೆಂದು ಘೋಷಿಸಿದ್ದ ಸಂದರ್ಭದಲ್ಲಿ ಇದೇ ಸಂಘಟನೆಯು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಈ ನಾಜ್​ ಫೌಂಡೇಷನ್​ ಪರವಾಗಿ ನ್ಯಾಯಾಲಯದಲ್ಲಿ ಆನಂದ್​ ಗ್ರೋವರ್​ ಎಂಬ ನ್ಯಾಯವಾದಿ ವಾದ ಮಂಡಿಸಿಸುತ್ತ ಬಂದಿದರು ಇದರ ಬಗ್ಗೆ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಪರಸ್ಪರ ಒಪ್ಪಿತ ಸಲಿಂಗಕಾಮ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ.

ಸಲಿಂಗಕಾಮಕ್ಕೆ ದೇಶದಲ್ಲಿ ಕಾನೂನಿನ ಮಾನ್ಯತೆ ನೀಡಿದ ಸಾಂವಿಧಾನಿಕ ಪೀಠ,

ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ. ಖಾಸಗಿ ಜಾಗದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಹಾನಿಯಾಗುವಂತಿಲ್ಲದಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸುವಂತಿಲ್ಲ. ಅದು ವೈಯಕ್ತಿಕ ಹಕ್ಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು ದಂಡಾರ್ಹ ಅಪರಾಧವಾಗಿಯೇ ಉಳಿದಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನು ಮೇಲಕ್ಕೆತ್ತಲು ಕೋರ್ಟ್ ಪ್ರಗತಿಪರ ಮತ್ತು ಪ್ರಾಯೋಗಿಕ ತೀರ್ಪುಗಳನ್ನು ನೀಡಬೇಕಾಗುತ್ತದೆ. ಕಾಲ ಬದಲಾಗುತ್ತಿದ್ದಂತೆ ಕಾನೂನನ್ನು ಈ ರೀತಿ ಅರ್ಥೈಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಹೊರಬರುತ್ತಿದಂತೆ ದೇಶದ ಕೆಲವೊಂದು ಗಣ್ಯರು, ಸೆಲೆಬ್ರಿಟಿಗಳು ಮೆಚ್ಚುಗೆ ವೆಕ್ತಪಡಿಸಿದ್ದಾರೆ.
ನಿಶಾ ಶ್ರೀಧರನ್: ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಸಮಾನತೆಗೆ ಗೌರವ ನೀಡಿದೆ. ನಾನು ಭಾರತೀಯಳು ಎನಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಹೆಚ್ಚಿನ ಹೆಮ್ಮೆ ಈಗ ಆಗುತ್ತಿದೆ ಎಂದಿದ್ದಾರೆ.
ಅರ್ರೆ ಸಂಸ್ಥೆ: ಅವರ ಟ್ವೀಟ್ ನ್ಯಾಯ ದೇವತೆ ‘ಕುರುಡಾಗಿದ್ದರೂ ಸಹ ಕುರುಡು ಪ್ರೀತಿಯನ್ನು ಕಂಡಿದೆ’
ಸಲಿಂಗಕಾಮದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ “ಆನಂದ್​ ಗ್ರೋವರ್​” ತಮ್ಮ ಹೋರಾಟದ ಅನುಭವ ಹಂಚಿಕೊಂಡಿದು ಹೀಗಿದೆ. ಸಲಿಂಗಿಗಳ ಅಧಿಕಾರಕ್ಕಾಗಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟದಲ್ಲಿ ನಮಗೆ ಗೆಲುವಾಗುತ್ತದೆ ಎಂಬುವುದರಲ್ಲಿ ನನಗೆ ಯಾವ ಅನುಮಾನವಿರಲಿಲ್ಲ” ಎಂದಿದ್ದಾರೆ.

ಸಲಿಂಗಕಾಮದ ಗುರುತಿಗಾಗಿ ಕಾಮನಬಿಲ್ಲಿನ ಬಾವುಟ ಯಾಕೆ ಹಾರಿಸುತ್ತಾರೆ:
ಸಲಿಂಗ ಕಾಮಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುವಾಗೆ ಕಾಮನಬಿಲ್ಲಿನ ಬಣ್ಣಗಳನ್ನು ಒಳಗೊಂಡ ಬಾವುಟ ಪ್ರದರ್ಶಿಸಲಾಗುತ್ತದೆ. ಈ ಬಾವುಟವನ್ನು ಮೊದಲ ಬಾರಿಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1978ರಲ್ಲಿ ರೂಪಿಸಿದವರು ಅಮೆರಿಕದ ಗೇ ಸಲಿಂಗಿಗಳ ಹಕ್ಕುಗಳ ಹೋರಾಟಗಾರರಾದ ಗಿಲ್ಬರ್ಟ್ ಬೇಕರ್. ಕಾಮನಬಿಲ್ಲಿನ ಬಣ್ಣಗಳನ್ನು ಒಳಗೊಂಡ ಈ ಬಾವುಟವು ಅಭಿಪ್ರಾಯದ-ಮನಸಿನ ಪ್ರತಿಬಿಂಬ ಎಂಬಂತೆ ಪ್ರದರ್ಶಿಸಲಾಗುತ್ತದೆ. ಕಾಮನಬಿಲ್ಲಿಗೆ ವೈಶಿಷ್ಟ್ಯ ಇದೆ. ಹಾಗೆ ಕಾಣಿಸಲು ಮಳೆ ಬಂದಿರಬೇಕು ಹಾಗೂ ಬಿಸಿಲು ಇರಬೇಕು. ಆಗ ಮಾತ್ರ ಕಾಣಿಸುತ್ತದೆ ಎಂಬ ಅಭಿಪ್ರಾಯ ಈ ಬಾವುಟದು.
LGBT ಅಂದರೇನು:
L- (LESBIAN) ಲೆಸ್ಬಿಯನ್, ಹೆಣ್ಣು – ಹೆಣ್ಣಿನ ಮಧ್ಯೆ ಲೈಂಗಿಕ ಆಸಕ್ತಿ ಇರುವಂಥವರು.
G – ಗೇ ಗಂಡು – ಗಂಡಿನ ಮಧ್ಯೆ ಲೈಂಗಿಕ ಆಸಕ್ತಿ ಇರುವಂಥವರು.
B – (BAI SEXUAL) ಬೈ ಸೆಕ್ಷುಯಲ್- ಉಭಯಲಿಂಗಿಗಳು ಇವರು ಗಂಡು – ಹೆಣ್ಣು ಇಬ್ಬರ ಜತೆ ಲೈಂಗಿಕ ಆಸಕ್ತಿ ಇರುವರು