ಈ ಸುಂದರಿ ಬರೋಬರಿ 250 ಕ್ಕೊ ಹೆಚ್ಚು ಯುವಕರ ಜೊತೆಗೆ ಡೇಟಿಂಗ್ ಮಾಡಿ ಕೊನೆಗೆ ನಾಯಿಯನ್ನು ಮದುವೆಯಾದ ಮಾಡೆಲ್..

0
267

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಬ್ಬ ಸಂಗಾತಿಯ ಅವಶ್ಯಕತೆ ಇರುತ್ತದೆ. ಅದರಲ್ಲಿ ಕೆಲವರು ತಮಗೆ ಇಷ್ಟವಾದ ಸಂಗಾತಿಯನ್ನು ಹುಡುಕುವುದರಲ್ಲಿ ಅರ್ಧ ಜೀವನವನ್ನು ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ಹಲವರ ಜೊತೆಗೆ ಸಂಬಂಧ ಬೆಳಸಿ ಕೆಲವು ದಿನಗಳು ಒಟ್ಟಿಗೆ ಇದ್ದು, ಆಮೇಲೆ ಇಬ್ಬರಿಗೂ ಬೇಡವೆಂದು ಬೇರೊಂದು ಸಂಗಾತಿಯನ್ನು ಹುಡುಕಲು ಶುರುಮಾಡುತ್ತಾರೆ. ಆದರೆ ಕಲವರು ಮದುವೆನೇ ಆಗದೆ ನೂರಾರು ಜನರ ಜೊತೆಗೆ ಡೇಟಿಂಗ್ ಅಂತ ಕಾಲ ಕಳೆಯುತ್ತಾರೆ. ಇಂತಹದೆ ಸಾಹಸವನ್ನು ಇಲ್ಲೊಬ್ಬ ಮಾಡೆಲ್ ಮಾಡಿದ್ದು ಅವಳಿಗೆ ಬೇಕಾದ ಸಂಗಾತಿಯನ್ನು ಹುಡುಕಲು ಬರೋಬರಿ 250 ಕ್ಕೊ ಹೆಚ್ಚು ಜನರ ಜೊತೆಗೆ ಡೇಟಿಂಗ್ ಮಾಡಿ ಕೊನೆಗೆ ನಾಯಿಯನ್ನು ಮದುವೆಯಾಗಿದ್ದಾಳೆ.

Also read: Online ಪೇಮೆಂಟ್-ನಲ್ಲಿ ಇತ್ತೀಚೆಗೆ ವಂಚನೆ ಜಾಸ್ತಿಯಾಗ್ತಿದೆ, ಗ್ರಾಹಕ ಸೇವೆಯವರ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಗ್ರಾಹಕನ ಕಥೆ ನೋಡಿ!!

ಹೌದು ತನಗೆ ಇಷ್ಟವಾದ ಗಂಡನನ್ನು ಹುಡುಕಲು ಸುಮಾರು 250 ಜನರ ಜೊತೆಗೆ ಡೇಟಿಂಗ್ ಮಾಡಿದ ಲಂಡನ್-ನ 49 ವರ್ಷದ ಸ್ವಿಮ್‍ಸೂಟ್ ಮಾಡೆಲ್ ಎಲಿಜಬೆತ್ ಹುಡ್ 6 ವರ್ಷದ ಸಾಕು ನಾಯಿಯನ್ನು ಮದುವೆಯಾಗಿದ್ದಾಳೆ. ವಿಶೇಷವೆನೆಂದರೆ ಎಲಿಜಬೆತ್ ಮದುವೆ ಟಿವಿಯಲ್ಲಿ ಪ್ರಸಾರವಾಗಿದ್ದು, ವಿಶ್ವಾದ್ಯಂತ ಹಲವು ಮಂದಿ ಇದನ್ನು ವೀಕ್ಷಿಸಿದ್ದಾರೆ. ಇವಳು ಕಳೆದ ವರ್ಷ 250 ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿದ್ದಾಳೆ. ಆದರೆ ಆಕೆಗೆ ಇಷ್ಟವಾಗುವಂತಹ ಸಂಗಾತಿ ಸಿಗಲಿಲ್ಲ. ಹೀಗಾಗಿ ಆಕೆ ತಾನು ಸಾಕಿದ ನಾಯಿಯನ್ನೇ ತನ್ನ ಜೀವನ ಸಂಗಾತಿಯಾಗಿ ಮಾಡಿಕೊಂಡಿದ್ದಾಳೆ.

ಎಲಿಜಬೆತ್‍ಗೆ ಈಗಾಗಲೇ 25 ವರ್ಷದ ಮಗ ಕೂಡಾ ಇದ್ದಾನೆ. ನನ್ನ ತಾಯಿಯ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನನ್ನ ಅಮ್ಮನಿಗೆ ಯಾವುದೇ ಪುರುಷನ ಅಗತ್ಯ ಇಲ್ಲ. ಈಗ ಅವರು ತಮ್ಮ ಇಡೀ ಜೀವನವನ್ನು ನಾಯಿಯ ಜೊತೆ ಕಳೆಯುತ್ತಾರೆ ಎಂದು ಮಗ ಪ್ರತಿಕ್ರಿಯಿಸಿದ್ದಾನೆ. ಅದರಂತೆ ಇವಳು ಹಲವು ಡೇಟಿಂಗ್ ವೆಬ್‍ಸೈಟ್ ಮೂಲಕ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದಾಳೆ. ಆದರೆ ಯಾರು ಇಷ್ಟ ಆಗದಿದ್ದಾಗ ತಾನು ಸಾಕಿದ್ದ ನಾಯಿ ಲೋಗನ್‍ನನ್ನು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಏಕೆಂದರೆ ಯಾವುದೇ ಷರತ್ತು ಹಾಕದ ಪ್ರೇಮಿ ಬೇಕಾಗಿತ್ತು. ಹಾಗಾಗಿ ಆಕೆ ನಾಯಿಯ ಜೊತೆ ಮದುವೆಯಾಗಿದ್ದಾಳೆ. ಮದುವೆ ದಿನದಂದು ಲೋಗನ್ ರಿಸ್ಟ್ ಬ್ಯಾಂಡ್ ಧರಿಸಿತ್ತು ಹಾಗೂ ಎಲಿಜಬೆತ್ ವೆಡ್ಡಿಂಗ್ ರಿಂಗ್ ಧರಿಸಿದ್ದಳು.

Also read: ಈ ಹೀರೋಯಿನ್-ನ ಜೊತೆ ಭೇಟಿ ಆಗೋ ಆಸೆ ಇಟ್ಕೊಂಡು ಹೋಗಿ 60 ಲಕ್ಷ ಕಳೆದುಕೊಂಡ ವ್ಯಕ್ತಿ!!

ಮದುವೆಗೆ ಎಲಿಜಬೆತ್ ಕೇವಲ 20 ಮಂದಿಯನ್ನು ಆಹ್ವಾನಿಸಿದ್ದು, ಮದುವೆ ನಂತರ ಎಲಿಜಬೆತ್ ತನ್ನ ನಾಯಿಯೊಂದಿಗೆ ಹನಿಮೂನ್ ಕೂಡ ಹೋಗಿದ್ದಾಳೆ. ಡಾಗ್ ಫ್ರೆಂಡ್ಲಿ ಹೋಟೆಲಿನಲ್ಲಿ ರೂಂ ಬುಕ್ ಕೂಡ ಮಾಡಿದ್ದಳು. ಎಲಿಜಬೆತ್‍ಗೆ ಈಗಾಗಲೇ ಇಬ್ಬರ ಜೊತೆ ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥ ಮಾಡಿಕೊಂಡ ನಂತರ ಯಾವುದೋ ಕಾರಣಕ್ಕೆ ಸಂಬಂಧ ಮುರಿದು ಬಿದ್ದಿತ್ತು. ಇದರಿಂದ ನಿರಾಸೆಯಾಗಿದ್ದೆ, ನನಗೆ ಡೇಟಿಂಗ್ ಹಾಗೂ ಪುರುಷರ ಸಹವಾಸ ಸಾಕಾಗಿ ಹೋಗಿದೆ. ನಾನು ಕಳೆದ 8 ವರ್ಷದಿಂದ ಆರು ವೆಬ್‍ಸೈಟ್ ಮೂಲಕ 250ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದೇನೆ. ಆದರೆ ಅವರ ಜೊತೆಗಿನ ನನ್ನ ಅನುಭವ ಚೆನ್ನಾಗಿ ಇರಲಿಲ್ಲ. ಹಾಗಾಗಿ ನಾನು ಲೋಗನ್‍ನನ್ನು ಮದುವೆಯಾದೆ. ನಾನು ಹಾಗೂ ಲೋಗನ್ ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ಎಂದು ಹೇಳಿದ್ದಾಳೆ.