ಮಂಡ್ಯದಲ್ಲಿ ಸುಮಲತಾರವರು ಗೆದ್ದರೆ ಯಾರಿಗೆ ಬೆಂಬಲ ಸೂಚಿಸಬೇಕು ಕಾಂಗ್ರೆಸ್-ಗಾ ಅಥವಾ ಬಿಜೆಪಿಗಾ??

0
740

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ಪ್ರಚಾರ ಬಾರಿ ಸದ್ದು ಮಾಡುತ್ತಿದೆ. ಇವರ ವಿರುದ್ದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ಬಾರಿ ಪೈಪೋಟಿ ನಡೆಸಿದ್ದಾರೆ. ಇನ್ನೂ ಸುಮಲತಾ ಬೆಂಬಲಕ್ಕೆ ಸ್ಟಾರ್ ನಟರು ಕೂಡ ನಿಂತಿದ್ದು ಮತ್ತಷ್ಟು ಬಲ ಬಂದಿದೆ. ಆದರೆ ಮೋದಿಯ ಅಲೆಯಿಂದ ದೇಶದಲ್ಲಿ ಮಿಂಚುತ್ತಿರುವ ಬಿಜೆಪಿ ಮಾತ್ರ ಮಂಡ್ಯದಲ್ಲಿ ಸ್ಪರ್ಧಿಸಲು ಹಿಂದೆಜ್ಜೆ ಹಾಕಿ ಅಧಿಕೃತವಾಗಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ. ಇದರಿಂದ ಸುಮಲತಾ ಗೆಲವು ನಿಚ್ಚಿತ್ತವಾಗಿದ್ದು ಗೆದ್ದ ಮೇಲೆ ಸುಮಲತಾ ಬಿಜೆಪಿ ಸೇರುತ್ತಾರೆ ಎನ್ನುವುದು ಪಕ್ಕಾ ಅನಿಸಿತ್ತು. ಇದರ ಬಗ್ಗೆ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದು ಹೀಗಿದೆ ನೋಡಿ.

Also read: ನಿಖಿಲ್ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿ ಮಂಡ್ಯಕ್ಕೆ, ಇದ್ರಿಂದ ನಿಖಿಲ್ ಗೆಲ್ಲುವ ಚಾನ್ಸ್ ಇದ್ಯಾ??

ಹೌದು ಸುಮಲತಾ ಅವರಿಗೆ ಅಧಿಕೃತವಾಗಿ ಬೆಂಬಲ ಸೂಚಿಸಿದ ಬಿಜೆಪಿಗೆ ಪಕ್ಷೆಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಹರಡುತ್ತಿದೆ. ಏಕೆಂದರೆ ಚುನಾವಣೆ ಮೊದಲೇ ಸುಮಲತಾ ಅವರಿಗೆ ಕಾಂಗ್ರೆಸ್-ನಿಂದ ಟಿಕೆಟ್ ನಿರಾಕರಿಸಿದರು. ಈಗ ಸುಮಲತಾ ವಿರುದ್ದ ಬಾರಿ ವೈರತ್ವ ನಡೆಸಿ ಚುನಾವಣೆ ಮಾಡುತ್ತಿರುವ ಮೈತ್ರಿ ಸರ್ಕಾರಕ್ಕೆ ಸುಮಲತಾ ಹೋಗುವುದು ಬಹುತೇಕ ಅನುಮಾನವಾಗಿದೆ. ಆದರೆ ಕೇಂದ್ರದಲ್ಲಿ ಬಲಾಡ್ಯವಾದ ಬಿಜೆಪಿ ತೆಕ್ಕೆಗೆ ಸೆರುವುದು ಕಚ್ಚಿತವಾಗಿದೆ ಎನ್ನುವುದ್ದಕ್ಕೆ. ಸ್ಪಷ್ಟನೆ ನೀಡಿದ ಸುಮಲತಾ. ಮಂಡ್ಯದ ಶಂಕರನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ನಾನು ಈ ಮೊದಲೇ ಸ್ಪಷ್ಟಪಡಿಸಿದ್ದೀನಿ. ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧಿಗಳು ದಿನಾ ಒಂದೊಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದು ದಿನ ಬಿಜೆಪಿ ಅಭ್ಯರ್ಥಿ, ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಅಂದರು.

ಬೇಕಾದರೆ ಜೆಡಿಎಸ್ ಅಭ್ಯರ್ಥಿ ಎಂದೂ ಹೇಳುತ್ತಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ನನಗೆ ಯಾರು ಸಪೋರ್ಟ್ ಮಾಡುತ್ತಾರೋ ಅವರು ಯಾವುದೇ ಷರತ್ತು ಹಾಕದೆ ಬೆಂಬಲ ನೀಡುತ್ತಿದ್ದಾರೆ. ನಾನು ಬಿಜೆಪಿಗೆ ಹೋಗಬೇಕು ಅಂದ್ರೆ ಈಗಲೇ ಹೋಗುತ್ತಿದ್ದೆ. ಅಲ್ಲಿ ನನಗೆ ಬೇಕಾದಷ್ಟುಆಫರ್‌ಗಳು ಬಂದಿದ್ದವು. ಆದರೆ, ನಾನು ಅದೆಲ್ಲವನ್ನೂ ತಳ್ಳಿ ಹಾಕಿದ್ದೇನೆ. ಮಂಡ್ಯ ಜನರ ಒತ್ತಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ, ಜನರಿಗಾಗಿ ನಿಂತಿದ್ದೇನೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕಾದರೂ ಜನರ ಅಭಿಪ್ರಾಯವನ್ನು ಕೇಳುತ್ತೇನೆ. ಜೆಡಿಎಸ್ ನವರ ತಂತ್ರ-ಪ್ರತಿತಂತ್ರಗಳಿಗೆ ಜನತಂತ್ರವೇ ಉತ್ತರವಾಗಿದೆ. ತುಂಬಾ ಕಡಿಮೆ ಸಮಯವಿದೆ ಹೀಗಾಗಿ ಹಬ್ಬದ ದಿನವೂ ಪ್ರಚಾರಕ್ಕೆ ಬಂದಿದ್ದೀನಿ ಎಂದರು.

Also read: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಕಾರಿಗೆ ಕಲ್ಲು ತೂರಾಟ ನಡೆಸಿದ್ದು ಎಷ್ಟು ಸರಿ??

ಆರೋಪಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಮಂಡ್ಯದಲ್ಲಿ ಇರಲೇಬೇಕು ಎಂದು ಜನರ ಅಭಿಪ್ರಾಯದ ಮೇಲೆ ಚುನಾವಣೆಗೆ ನಿಂತಿದ್ದೇನೆ. ಗೆದ್ದ ಮೇಲೆ ಮಂಡ್ಯ ಬಿಟ್ಟು ಹೋದರೆ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಚುನಾವಣೆ ಬಂದರೆ ಸಾಕು ಆರೋಪ ಮಾಡುವುದು ಕೆಲವರಿಗೆ ಅಭ್ಯಾಸವಾಗಿದೆ. ಮಂಡ್ಯ ಬಿಟ್ಟು ಹೋಗಲೂ ಕಾರಣವೇ ಇಲ್ಲ. ಗೆದ್ದು ಮನೆಯಲ್ಲಿ ಕುಳಿತುಕೊಳ್ಳಲು ಅರ್ಥವೇ ಇಲ್ಲ. ಅವರು ಇದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನೂ ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆ ಅವರಿಗಿತ್ತು. ಹೀಗಾಗಿ ಅವರು ಆಸೆ ನೆರವೇರಿಸಲು ಬಂದಿದ್ದೇನೆ ಸ್ಪಷ್ಟನೆ ನೀಡಿದ್ದಾರೆ.