ನೋಟ್ ಬ್ಯಾನ್ ಬಳಿಕ ಮತ್ತೆ ಶಾಕ್ ನೀಡಲಿದ್ದಾರೆಯೇ ಮೋದಿ?? ಈಗ ಚೆಕ್ ಬ್ಯಾನ್ ಆಗಬಹುದಾ??

0
695

ಕಳೆದ ವರ್ಷ ನವಂಬರ್​ನಲ್ಲಿ ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ರೂಪಾಯಿಗಳ ಮುಖಬೆಲೆಯ ನೋಟ್​​ಗಳನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿತ್ತು. ಇದಾದ ಬಳಿಕ ಜನ ಮತ್ಯಾವ ಪೆಟ್ಟನ್ನು ಸರ್ಕಾರ ನಿಡುತ್ತದೋ ಎಂದು ಚಿತ್ತಾಕ್ರಾಂತರಾಗಿದ್ದಾರೆ. ವರ್ಷಗಟ್ಟಲೇ ಕಪ್ಪು ಧನಿಕರು ಹಾಗೂ ಭ್ರಷ್ಟರ ವಿರುದ್ಧದ ಸಮರ ಸಾರಿದ್ದ ಕೇಂದ್ರ ಈಗ ಮತ್ತೊಂದು ಹೆಜ್ಜೆ ಇಡುವ ಸೂಚನೆಯನ್ನು ನೀಡಿದೆ.

ಈ ಬಗ್ಗೆ ಹೊಗೆ ಈಗತಾನೆ ಎದ್ದಿದ್ದು, ಅಧಿಕೃತವಾಗಿ ಇನ್ನು ಬಹಿರಂಗವಾಗಿಲ್ಲ. ಆದ್ರೆ ಹೊಗೆಯ ವಾಸನೆ ಮಾತ್ರ ಈಡಿ ಭಾರತದ ತುಂಬ ಪಸರಿಸಿದೆ. ಮೋದಿ ನೇತೃತ್ವದ ಕೇಂದ್ರ ಮತ್ಯಾವ ಶಾಕ್​ ಜನರಿಗೆ ನೀಡ್ತಿದೆ ಎಂಬ ಚಿಂತೆ ಈಗಾಗಲೇ ಆರಂಭವಾಗಿದ್ದು, ಇದಕ್ಕೆ ಹಲವು ಒಲಯಗಳಲ್ಲಿ ಚರ್ಚೆ ಆರಂಭವಾಗಿದೆ. ಅಂದಹಾಗೆ ಡಿಜಿಟಲ್​​ ವಹಿವಾಟ್​ನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಇನ್ನು ಕೆಲವೇ ದಿನಗಳಲ್ಲಿ ಬ್ಯಾಂಕಗ್​ ಚೆಕ್​​ಬುಕ್​​ ಹಿಂಪಡೆಯುವ ಸಾಧ್ಯತೆ ಇರುವುದಾಗು ಅಖಿಲ ಭಾರತ ಕೈಗಾರಿಕಾ ಒಕ್ಕೂಟದ (ಸಿಎಐಟಿ ) ಹಿರಿಯ ಅಧಿಕಾರಿಯೊಬ್ಬರು ಸೂಚನೆ ನೀಡಿದ್ದಾರೆ.

ಸರ್ಕಾರ ಈಗಾಗಲೇ ನಗದು ರಹಿತ ವಹಿವಾಟನ್ನು ಉತ್ತೇಜಿಸಲು ಜನರಿಗೆ ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ ಹಲವು ಸವಲತ್ತುಗಳನ್ನು ನೀಡಿದೆ. ಆ್ಯಪ್​ ಮೂಲಕ ವಹಿವಾಟು, ಅಂತರ್ಜಾಲದ ಮೂಲಕ ವಹಿವಾಟನ್ನು ನಡೆಸಲು ಕೇಂದ್ರ ತಿಳಿಸಿದೆ. ಇದರ ಮುಂದುವರೆಸದ ಭಾಗವಾಗಿ ಇನ್ನು ಚೆಕ್​ ಬುಕ್​​ಗಳಿಗೂ ಬ್ರೇಕ್​ ಬೀಳು ಸಾಧ್ಯತೆ ಇದೆ. ವ್ಯಾಪಾರಸ್ಥರು ವಿವಿಧ ರೀತಿಯ ಡಿಜಿಟಲ್ ವಹಿವಾಟಿನಲ್ಲಿ ತೊಡಗುವುದನ್ನು ಪ್ರೋತ್ಸಾಹಿಸಲು ಮಾಸ್ಟರ್ ಕಾರ್ಡ್ ಮತ್ತು ಸಿಎಐಟಿ ಜಂಟಿಯಾಗಿ ಕೈಗೊಂಡಿರುವ ‘ಡಿಜಿಟಲ್ ರಥ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಖಂಡೇಲ್‌’ವಾಲ್, ಬ್ಯಾಂಕುಗಳು ಡೆಬಿಟ್ ಕಾರ್ಡ್‌ಗೆ ಶೇ.1ರಷ್ಟು ಮತ್ತು ಕ್ರೆಡಿಟ್ ಕಾರ್ಡ್’ಗೆ ಶೇ.2ರಷ್ಟು ಶುಲ್ಕ ವಿಧಿಸುತ್ತಿವೆ. ಸರ್ಕಾರ ನೇರವಾಗಿ ಸಬ್ಸಿಡಿ ಒದಗಿಸುವ ಮೂಲಕ ಈ ಶುಲ್ಕ ಮನ್ನಾ ಮಾಡಬಹುದು ಎಂದಿದ್ದಾರೆ.