ವೀರ ಯೋಧರನ್ನು ಕೊಂದ ಹೇಡಿ ಭಯೋತ್ಪಾದಕರು ಬಳಕೆ ಮಾಡಿದ್ದ ಕಾರ್ ಬಾಂಬ್ ಬಗ್ಗೆ ತಿಳಿದುಕೊಂಡರೆ ನೀವು ಬೆಚ್ಚಿಬೀಳ್ತೀರ!!

0
664

ಉಗ್ರರು ಈ ಮೊದಲು ಹೊಸ ಹೊಸ ಗನ್ ಮತ್ತು ನೆಲ ಬಾಂಬ್ ಗಳ ಬಳಕೆ ಮಾಡಿ ಹಿನ ಕೃತ್ಯೆ ಮಾಡುತ್ತಿದರು ಈಗ ಹೊಸ ರೀತಿಯಲ್ಲಿ ಮಾಡುತ್ತಿರುವ ಕಾರು ಆತ್ಮಹತ್ಯಾ ಬಾಂಬ್ ಐಇಡಿ ಬಳಸಿ ತಯಾರಿಸುತ್ತಾರೆ. ಈ ಪ್ರಯೋಗವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಪುಲ್ವಾಮಾದಲ್ಲಿ ಮಾಡಲಾಗಿದೆ. ಈಗ ವಿಬಿಐಇಡಿ ಇದು ಕಣಿವೆ ರಾಜ್ಯದ ಭದ್ರತಾ ಪಡೆಗೆ ಹೊಸ ತಲೆನೋವು ಹುಟ್ಟುಹಾಕಿದೆ. ಇಷ್ಟು ದಿನ ಬಂದೂಕು ಹಿಡಿದು ಅಟ್ಟಹಾಸ ಮಾಡುತ್ತಿದ್ದ ದುಷ್ಟ ಉಗ್ರರು ಈಗ ಈ ಹೊಸ ಮಾರ್ಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ರಕ್ತ ಹರಿಸಿದ್ದಾರೆ.

Also read: ನಿಮಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವ ಇಚ್ಛೆ ಇದ್ರೆ ಈ ಆ್ಯಪ್​ ಮೂಲಕ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಿ..

ಏನಿದು ವಿಬಿಐಇಡಿ?

ಪುಲ್ವಾಮದಲ್ಲಿ ಉಗ್ರರು ಬಳಿಸಿದ ತಂತ್ರಜ್ಞಾನವನ್ನು VEHICLE-BORNE IMPROVISED EXPLOSIVE DEVICE (VBIED) ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನವನ್ನು ಅಳವಡಿಸಿರುವ ವಾಹನಗಳನ್ನು ಸ್ಫೋಟ ಮಾಡಲು ಹಲವು ತಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಮುಖವಾಗಿ ವಾಹನ ಚಾಲಕನ ಡೋರ್ ಓಪನ್ ಮಾಡುತ್ತಿದ್ದಾಗ, ವಾಹನ ವೇಗ ಹೆಚ್ಚಾಗುತ್ತಿದಂತೆ, ವಾಹನ ಇಗ್ನಿಷನ್ ಆಫ್ ಅಥವಾ ಆನ್ ಮಾಡುವುದು, ಪಾರ್ಕ್ ಮಾಡಿರುವ ವಾಹನ ಸ್ಫೋಟಕ್ಕೆ ಸಮಯ ನಿಗದಿ ಪಡಿಸುವುದು. ಈ ಎಲ್ಲಾ ಮಾರ್ಗಗಳ ಮೂಲಕ ಸ್ಫೋಟ ಆಗುವಂತೆ ಮಾಡಬಹುದು. ಪುಲ್ವಾಮಾ ದಾಳಿಯಲ್ಲಿ ಉಗ್ರರು ಕಾರಿನ ವೇಗವನ್ನು ಹೆಚ್ಚಿಸಿ ವಾಹನವನ್ನು ಡಿಕ್ಕಿ ಮಾಡುವ ತಂತ್ರವನ್ನು ಬಳಕೆ ಮಾಡಿದ್ದಾರೆ. ಇದನ್ನು ಹೆಚ್ಚಾಗಿ ಅಫ್ಘಾನಿಸ್ಥಾನ, ಇಸ್ರೇಲ್‍ನಲ್ಲಿ ಕಾರ್ ಬಾಂಬ್ ದಾಳಿ ನಡೆದಿದ್ದು, ಪರಿಣಿತರ ಕೈಯಲ್ಲಿ ಮಾತ್ರ ಕಾರ್ ಬಾಂಬ್ ತಯಾರಿಸಲು ಸಾಧ್ಯವಿದೆ. ಐಇಡಿ ತುಂಬಾ ಮಾರಕವಾಗಿದ್ದರಿಂದ ಕಾರ್ ಬಾಂಬ್ ಗೆ ಉಗ್ರರನ್ನು ಇದನ್ನೇ ಬಳಸಿಕೊಳ್ಳಲು ಮುಂದಾಗುತ್ತಾರೆ.

ಸಂಧರ್ಬಿಕ ಚಿತ್ರ

Also read: ಭಾರತೀಯ ಸೇನಾ ನೇಮಕಾತಿ: ವಿವಿಧ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಕಾರಿನ ಯಾವ ಬಾಗದಲ್ಲಿ ಅಳವಡಿಸಲಾಗುತ್ತದೆ?

ಸ್ಫೋಟಕಗಳನ್ನು ಭಾರೀ ಪ್ರಮಾಣದಲ್ಲಿ ಬಳಕೆ ಮಾಡುವ ಉದ್ದೇಶದಿಂದ ವಾಹನ ಮುಂಭಾಗ ಅಂದರೆ ಕಾಲು ಇಡುವ ಭಾಗದಲ್ಲಿ ಹಾಗೂ ವಾಹನ ಹಿಂಭಾಗ ಬೂಟ್ ಸ್ಪೇಸ್, ಹಿಂಭಾಗದ ಸಿಟ್ ಕೆಳಗೆ ಸ್ಫೋಟಗಳನ್ನು ಅಳವಡಿಸಿರುತ್ತಾರೆ. ತಜ್ಞರ ಮಾಹಿತಿ ಅನ್ವಯ ಸ್ಫೋಟಗಳನ್ನು ವಾಹನ ಇಂಧನ ಸಂಗ್ರಹಣ ಪ್ರದೇಶದಲ್ಲೇ ಹೆಚ್ಚು ಅಳವಡಿಸಲಾಗುತ್ತದೆ. ಸ್ಫೋಟಕಗಳ ಸ್ಫೋಟದೊಂದಿಗೆ ಡಿಸೇಲ್, ಪೆಟ್ರೋಲ್ ಕೂಡ ಸ್ಫೋಟದ ತೀವ್ರತೆಯನ್ನು ಹೆಚ್ಚಿಸುತ್ತದೆ.

ಹೇಗೆ ಸ್ಫೋಟಗೊಳ್ಳುತ್ತೆ..?

ಸಂಧರ್ಬಿಕ ಚಿತ್ರ

Also read: ಯಾವುದೇ ದಾಖಲೆ ಇಲ್ಲದೆ ಮಂಡ್ಯ ಯೋಧ ಹುತಾತ್ಮ; ಕುಟುಂಬಕ್ಕೆ ವಿಮೆ ಹಣ ನೀಡಿ ಮಾನವೀಯತೆ ಮೆರೆದ LIC

ಕಾರ್ ಬಾಂಬ್ ಸ್ಫೋಟ ಹೇಗೆ ನಡೆಯಬೇಕು ಎಂಬುದನ್ನು ಉಗ್ರರು ಪ್ಲಾನ್ ಮಾಡಿಕೊಂಡಿರುತ್ತಾರೆ. ಡ್ರೈವರ್ ಸೀಟ್‍ನ ಡೋರ್ ಓಪನ್ ಮಾಡುವಾಗ ಅಥವಾ ಎಕ್ಸಲೇಟರ್ ಹೆಚ್ಚಿಸಿದಾಗ ಅಥವಾ ಎಂಜಿನ್ ಆನ್, ಆಫ್ ಮಾಡುವಾಗ ಮುಂಭಾಗ ಅಂದರೆ ಕಾಲು ಇಡುವ ಭಾಗದಲ್ಲಿ ಹಾಗೂ ವಾಹನ ಹಿಂಭಾಗ ಬೂಟ್ ಸ್ಪೇಸ್, ಕಾರ್ ಬಾಂಬ್ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಪಾರ್ಕಿಂಗ್ ದಾಳಿಯಲ್ಲಿ ಟೈಮರ್ ಸೆಟ್ ಮಾಡಲಾಗಿರುತ್ತದೆ.ತಜ್ಞರ ಮಾಹಿತಿ ಅನ್ವಯ ಸ್ಫೋಟಗಳನ್ನು ವಾಹನ ಇಂಧನ ಸಂಗ್ರಹಣ ಪ್ರದೇಶದಲ್ಲೇ ಹೆಚ್ಚು ಅಳವಡಿಸಲಾಗುತ್ತದೆ. ಸ್ಫೋಟಕಗಳ ಸ್ಫೋಟದೊಂದಿಗೆ ಡಿಸೇಲ್, ಪೆಟ್ರೋಲ್ ಕೂಡ ಸ್ಫೋಟದ ತೀವ್ರತೆಯನ್ನು ಹೆಚ್ಚಿಸುತ್ತದೆ.

ಪತ್ತೆ ಹಚ್ಚುವುದು ಹೇಗೆ?

ಅನುಮಾನ ವ್ಯಕ್ತವಾದ ವಾಹನಗಳ ಪರಿಶೀಲನೆ ಮಾಡುವುದು, ಐಇಡಿಗಳನ್ನು ಪತ್ತೆ ಹಚ್ಚುವಂತಹ ಚೆಕ್ ಪಾಯಿಂಟ್ ಗಳನ್ನು ನಿರ್ಮಿಸುವುದು. ಅಲ್ಲದೇ ಭಾರೀ ಪ್ರಮಾಣದಲ್ಲಿ ಸ್ಫೋಟಗಳ ಸಂಗ್ರಹಣೆ ಹಾಗೂ ಬಳಕೆ ಬಗ್ಗೆ ಗುಪ್ತಚರ ಮಾಹಿತಿಯನ್ನು ಪಡೆಯುವುದು. ಸ್ಫೋಟಕಗಳನ್ನು ಡಿಕೋಡ್ ಮಾಡುವಂತಹ ಆಧುನಿಕ ಪೊಲೀಸ್ ತಂಡವನ್ನು ನೇಮಿಸುವ ಮೂಲಕ ಪತ್ತೆ ಹಚ್ಚಬಹುದು. ಮತ್ತು ಐಇಡಿಯನ್ನು ಪತ್ತೆ ಹಚ್ಚಿದ ಮಾತ್ರಕ್ಕೆ ಕೃತ್ಯ ತಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ಉಗ್ರರ ಉದ್ದೇಶವೇ ಸೈನಿಕರ ಮೇಲೆ ದಾಳಿ ಮಾಡುವುದು. ಹೀಗಾಗಿ ರಕ್ಷಣಾ ಪಡೆಗಳು ತಡೆಯುತ್ತಿರುವ ವೇಳೆಯೇ ಸ್ಫೋಟಿಸಿದ ಉದಾಹರಣೆಗಳು ವಿದೇಶದಲ್ಲಿ ನಡೆದಿದೆ. ಇಷ್ಟೆಲ್ಲ ಆಗಿಯೂ ಐಇಡಿಯನ್ನು ನಿಷ್ಕ್ರಿಯಗೊಳಿಸುವುದು ಸುಲಭದ ಮಾತಲ್ಲ. ಕಡಿಮೆ ಅವಧಿಯಲ್ಲಿ ಇದನ್ನು ನಿಷ್ಕ್ರಿಯಗಳಿಸುವುದು ಸವಾಲಿನ ಕೆಲಸವಾಗಿದೆ.