ಇದನ್ನು ಓದಿದ ಮೇಲೆ ನಿಮಗೇ ಅನ್ನಿಸುತ್ತೆ ಯಾಕೆ ಕಾಂಗ್ರೆಸ್-ನ ಸರ್ದಾರ್ ವಲಭ ಭಾಯ್ ಪಟೇಲ್ ಅವರನ್ನ Iron Man of India ಅಂತ ಕರೆಯುತ್ತೇವೆ!!

0
343

Iron Man of India ಸರ್ದಾರ್ ವಲಭ ಭಾಯ್ ಪಟೇಲ್, ಭಾರತ ಕಂಡ ಧೀಮಂತ ವ್ಯಕ್ತಿ. ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತ ಕಟ್ಟಿದ Iron Man. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದು ಏಕತಾ ದಿವಸವನ್ನು ಆಚರಿಸಲಾಗುತ್ತಿದೆ. ಇಂದು ಅಂದರೆ ಸರ್ಧಾರ್ ಪಟೇಲ್ ಅವರ 142ನೇ ಜನ್ಮದಿನಾಚರಣೆಯೂ ಹೌದು. ಇದೇ ಕಾರಣಕ್ಕೆ ಏಕೀಕರಣದ ಹರಿಕಾರನ ಸ್ಮಾರಕವನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ನರ್ಮದಾ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆ 182 ಮೀಟರ್‌ ಎತ್ತರದಿಂದ ಕೂಡಿದ್ದು, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸಿದರು. ಸರ್ದಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂಬುದಾಗಿ ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸರ್ದಾರ್ ಜೀ, ಪೊಲಿಟಿಕಲ್ ಇಂಟಿಗ್ರೇಷನ್’ನಲ್ಲಿ ಅವರು ಮಾಡಿದ ಅದ್ವಿತೀಯ ಸಾಧನೆಗೆ ಭಾರತ ಸರ್ಕಾರ 1991 ರಲ್ಲಿ “ಭಾರತ ರತ್ನ” ಪ್ರಶಸ್ತಿಯನ್ನ ಕೊಟ್ಟು ಗೌರವಿಸಿದೆ. ಇಂಗ್ಲೆಂಡ್’ನಲ್ಲಿ Law ಪದವಿಯಲ್ಲಿ ಮೊದಲನೇ ಸ್ಥಾನವನ್ನ ಪಡೆದು ಮರಳಿ ಭಾರತಕ್ಕೆ ಬಂದ ಪಟೇಲ್ ಅಹಮದಾಬಾದನಲ್ಲಿ ತಮ್ಮ practice ಪ್ರಾರಂಭಿಸಿದರು. ಸ್ನೇಹಿತರ ಒತ್ತಾಯದ ಮೇರೆಗೆ ಸ್ಯಾನಿಟೇಷನ್ ಕಮಿಷನರ್ ಎಲೆಕ್ಷನ್ ‘ನಲ್ಲಿ ನಿಂತು ಗೆದ್ದು ಬಂದರು.
ಗಾಂಧೀಜಿಯವರ Champaran ಸತ್ಯಾಗ್ರಹ ಪಟೇಲರ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆ ಸಮಯದಲ್ಲಿ ಗುಜರಾತನ Kheda ಪ್ರದೇಶದಲ್ಲಿ ಭೀಕರ ಬರಗಾಲ ಎದುರಾಗಿತ್ತು. ರೈತರು ಭಾರಿ ಮೊತ್ತದ ತೆರಿಗೆಯನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿದ್ದರು. ಆದರೆ ಬ್ರಿಟಿಷ್ ಸರ್ಕಾರ ಇದಕ್ಕೆ ಒಪ್ಪುತ್ತಲಿರಲಿಲ್ಲ. ಗಾಂಧೀಜಿಯವರಿಗೆ ಈ ಹೋರಾಟದ ಜವಾಬ್ದಾರಿಯನ್ನ ತೆಗೆದುಕೊಳ್ಳುವವವರು ಒಬ್ಬರು ಬೇಕಾಗಿತ್ತು. ಆ ಸಮಯದಲ್ಲಿ ಪಟೇಲ್ ಅವರು ಮುಂದೆ ಬಂದರಲ್ಲದೆ ಈ ಹೋರಾಟದಲ್ಲಿ ಜಯ ಗಳಿಸಿದರು. ಕೊನೆಗೆ ಬ್ರಿಟಿಷ್ ಸರ್ಕಾರ ತೆರಿಗೆಯನ್ನ ಹಿಂತೆಗೆದುಕೊಂಡಿತು. Kheda ಸತ್ಯಾಗ್ರಹದಿಂದ ಅವರು ಸಾಮಾಜಿಕ ಕ್ಷೇತ್ರಕ್ಕೆ ಧುಮುಕಿದರು . 1920 ರಲ್ಲಿ ಪಟೇಲ್ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯ President ಆಗಿ ಆಯ್ಕೆಯಾದರು.

ಅವರು ಗಾಂಧೀಜಿಯವರ ಮಧ್ಯಪಾನ , ಅಸ್ಪ್ರಶ್ಯತೆ ಮತ್ತು ಜಾತಿ ಪದ್ದತಿಗಳ ಚಳುವಳಿಗಳಿಗೆ ಗಟ್ಟಿಯಾದ ಬೆಂಬಲಿಗರಾಗಿದ್ದರು. ಆ ನಂತರ ಅವರು ಅಹಮದಾಬಾದ್’ನಲ್ಲಿ Municipal President ಆಗಿ ಆಯ್ಕೆಯಾದರು. 1923 ರಲ್ಲಿ ಗಾಂಧೀಜಿಯವರು ಜೈಲುವಾಸದಲ್ಲಿದ್ದಾಗ ರಾಷ್ಟ್ರಧ್ವಜ ವನ್ನ ಹಾರಿಸಲು ಅಡ್ಡಿ ಮಾಡಿದ ಬ್ರಿಟಿಷ್ ಸರ್ಕಾರದ ವಿರುದ್ಧ ನಾಗಾಪುರದಲ್ಲಿ ಸತ್ಯಾಗ್ರಹ ಮಾಡಿದ್ದರು. ನಂತರ ಪಟೇಲ್ 1931 ರಲ್ಲಿ Indian National Congress ನ President ಆಗಿ ಆಯ್ಕೆಯಾದರು. 1942 ರ Quit India Movement ನಲ್ಲಿ ಪಟೇಲ್ ಮುಂದಾಳತ್ವ ವಹಿಸಿದ್ದರು. ಈ ಸಮಯದಲ್ಲಿ ಅವರು arrest ಆಗಿ, 9 ತಿಂಗಳುಗಳು ಜೈಲಿನಲ್ಲಿದ್ದರು. ಗುಜರಾತನ ಲಕ್ಷಾಂತರ ಜನರಿಗೆ ಪಟೇಲ್ ಆರಾಧ್ಯ ಧೈವವಾದರು .
Mohammad Ali Jinnah , leader of All India Muslim League, 1940 ರ ವೇಳೆಯಲ್ಲಿ ಜಿನ್ನಾ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕೆಂದು ಬೇಡಿಕೆ ಇಟ್ಟಿದ್ದರು. ಇವರ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಭಾರತ ವಿಭಜನೆ ಅನಿವಾರ್ಯವೆಂದು ಕಾಂಗ್ರೆಸ್ ನಾಯಕರು ನಿರ್ಧಾರಕ್ಕೆ ಬಂದಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್’ನ ಒಪ್ಪಂದವನ್ನು ವಿಫಲಗೊಳಿಸಿ ಜಿನ್ನಾ ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಚೋದಿಸುತ್ತಿದ್ದರು. ಈ ಹಿಂಸೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾದರು. ಇದು ಬೃಹತ ಹಿಂದೂ ಮುಸ್ಲಿಂ ದಂಗೆಯಾಗಿ ತಿರುಗುವ ಸಾಧ್ಯತೆ ಇತ್ತು. ಗಾಂಧೀಜಿಯವರಿಗೆ ಭಾರತ ವಿಭಜನೆ ಮನಸ್ಸಿಲ್ಲದಿದ್ದರೂ, ಪಟೇಲ್ ಅವರ ಮನವೊಲಿಸಲು ಮುಂದಾದರು.

Partition Council ನಲ್ಲಿ ಆಸ್ತಿ ಪಾಸ್ತಿಗಳ ಹಂಚಿಕೆಯ ಮೇಲುಸ್ತುವಾರಿಯನ್ನ ಪಟೇಲ ವಹಿಸಿದ್ದರು. ಭಾರತಕ್ಕಿಂತ ಚಿಕ್ಕದಾದ ಪಾಕಿಸ್ತಾನಕ್ಕೆ ಅದರ ಗಾತ್ರ, ಜನಸಂಖ್ಯೆಗೆ ತಕ್ಕ ಹಾಗೆ ಆಸ್ತಿ ಹಂಚಿಕೆಯಾಗುವಂತೆ ಪಟೇಲ್ ಮುನ್ನೆಚ್ಚರಿಕೆ ವಹಿಸಿದ್ದರು.
ನೆಹರು ಮಂತ್ರಿಮಂಡಲದಲ್ಲಿ, ಗ್ರಹಮಂತ್ರಿಯಾಗಿ, ಉಪ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 565 ರಾಜ-ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನ ಪಟೇಲ್ ವಹಿಸಿಕೊಂಡರು. ಭಾರತದ ಸಂವಿಧಾನಕ್ಕೆ ಪಟೇಲರ ಕೊಡುಗೆ ಅಪಾರ. ರಾಜ ಮಹಾರಾಜರುಗಳಿಂದ ರಿಂದ ಕೂಡಿದ ಬ್ರಿಟಿಷ್ ಇಂಡಿಯಾವನ್ನ ಇಂಡಿಯವನ್ನಾಗಿ ಮಾಡುವುದರಲ್ಲಿ ಪಟೇಲರ ಪ್ರಯತ್ನ ಮಹತ್ತರವಾದದ್ದು.
ಸ್ವಾತಂತ್ರದ ನಂತರ ಪಟೇಲ್ ಭಾರತದ ಪ್ರಥಮ Home Minister and Deputy Prime Minister ಆಗಿ ನೇಮಕ ಗೊಂಡರು. ಗಾಂಧೀಜಿಯವರಿಗೆ ತುಂಬಾ ಹತ್ತಿರದವರಾಗಿದ್ದ ಪಟೇಲ್ ರವರ ಆರೋಗ್ಯ ಗಾಂಧೀಜಿಯವರ ಮರಣದ ನಂತರ ಹದಗೆಟ್ಟಿತ್ತು. ಗಾಂಧೀಜಿಯವರ ಮರಣವಾದ ಎರಡೇ ತಿಂಗಳಿಗೆ ಅವರು ತೀವ್ರ ಹೃದಯಾಘಾತಕ್ಕೊಳಗಾದರು. December 15, 1950 ರಲ್ಲಿ ಅವರು ನಿಧನರಾದರು