ವಿಜಯ್ ಮಲ್ಯ ಆದಮೇಲೆ ಇದೀಗ ಮತ್ತೋರ್ವ ಉದ್ಯಮಿ ೧೧ ಸಾವಿರ ಕೋಟಿ ನುಂಗಿ ಹಾಕಿ ವಿದೇಶಕ್ಕೆ ಪರಾರಿಯಾಗಿದ್ದಾನೆ!!

0
539

Kannada News | Kannada Breaking News

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಬ್ಯಾಂಕಿಂಗ್ ಇತಿಹಾಸದಲ್ಲೇ ಕಂಡು ಕೇಳಿರದ ವಂಚನೆ ಪ್ರಕರಣವೊಂದು ಹೊರಬಂದಿದೆ. ಮುಂಬೈ ಷೇರು ಮಾರುಕಟ್ಟೆ (BSE) ಯಿಂದ ವರದಿ ಪಡೆದ ಬಳಿಕ PNB ಗೆ ಶಾಕ್ ಆಗಿದೆ. ಆ ವಂಚನೆಯ ಮೊತ್ತವೆಷ್ಟು ಗೊತ್ತಾದರೆ ನಿಮಗೆ ಅಚ್ಚರಿಯಾಗ್ತೀರ.

ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಒಂದೇ ಒಂದು ಶಾಖೆಯಿಂದ 11,360 ಕೋಟಿ ರೂ. ಮೌಲ್ಯದ ವಂಚನೆಯ ವ್ಯವಹಾರಗಳು ವರದಿಯಾಗಿವೆ. ಈ ವಂಚನೆಯು, PNB ಯ ಒಟ್ಟು ಮಾರುಕಟ್ಟೆ ಮೂರನೇ ಒಂದು ಭಾಗದಷ್ಟು ಬಂಡವಾಳೀಕರಣಕ್ಕೆ ಸಮನಾಗಿರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್, ಫೆಬ್ರುವರಿ 5 ರಂದು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ವಂಚನೆಯ ಮೊತ್ತ 280 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ, ಅಮೆರಿಕಾದ ತನಿಖಾ ಸಂಸ್ಥೆ FBI ವರದಿ ನೀಡಿದ ಬಳಿಕ PNB ದಂಗಾಗಿದೆ. ಇದಕ್ಕೆಲ್ಲ ಕಾರಣ ಆಭರಣ ವ್ಯಾಪಾರಿಯಂತೆ.

ಹೌದು, ಫೆಡರಲ್ ತನಿಖಾ ಸಂಸ್ಥೆ (FBI) ತನಿಖೆ ಪ್ರಕಾರ ಬಿಲಿಯನೇರ್ ಆಭರಣ ವ್ಯಾಪಾರಿಯಾದ ನಿರಾವ್ ಮೋದಿ ಈ ವಂಚನೆಯಲ್ಲಿ ಬಾಗಿಯಾಗಿದ್ದಾರಂತೆ. ಗೋಕುಲ್ನಾಥ್ ಶೆಟ್ಟಿ ಮತ್ತು ಮನೋಜ್ ಹನುಮಂತ ಖರತ್ ಎಂಬ ಇಬ್ಬರು ವ್ಯಕ್ತಿಗಳು ಬ್ಯಾಂಕಿಗೆ ನಕಲಿ ಅಂಡರ್ ಟೇಕಿಂಗ್ ಲೆಟರ್ ಅನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಗೋಕುಲ್ನಾಥ್ ಶೆಟ್ಟಿ ಮತ್ತು ಮನೋಜ್ ಹನುಮಂತ ಖರತ್ ನೀಡಿದ ಈ ನಕಲಿ ಲೆಟರ್ ಗೆ ಸಂಬಂಧಿಸಿದಂತೆ ಎಲ್ಲ ಆಸ್ಥಿಗಳು ನಿರಾವ್ ಮೋದಿ, ನಿಶಲ್ ಮೋದಿ, ಅಮಿ ನಿರಾವ್ ಮೋದಿ ಮತ್ತು ಮೆಹಲ್ ಚಿನುಭಾಯಿ ಚೋಕ್ಸಿ ಎಂ / ಎಸ್ ಡೈಮಂಡ್ ಆರ್ ಯುಎಸ್, ಎಂ / ಎಸ್ ಸೌರ ಎಕ್ಸ್ಪೋರ್ಟ್ಸ್ ಮತ್ತು ಎಂ / ಎಸ್ ಸ್ಟೆಲ್ಲರ್ ಡೈಮಂಡ್ ಹೆಸರಿನಲ್ಲಿವೆಯಂತೆ.

ಇಂತಹ ದೊಡ್ಡ ಮೊತ್ತದ ವಂಚನೆ ನಡೆದಿರುವುದು, PNB ಯ ಆಡಳಿತ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.